ಗಣೇಶ ಚತುರ್ಥಿಗೆ ಬಗೆ-ಬಗೆಯ ಅಡುಗೆಗಳು

ಗಣೇಶ ಚತುರ್ಥಿಗೆ ಬಗೆ-ಬಗೆಯ ಅಡುಗೆಗಳು

‍‍ನಮ್ಮ ಹಿರಿಯರ ಮನೆಯಲ್ಲಿ ಪ್ರತಿ ವರುಷ ಗಣೇಶ ಚತುರ್ಥಿಗೆ ‍ಗಣಹೋಮ ಇಟ್ಟುಕೊಳ್ಳುವುದು ವಾಡಿಕೆ. ಹಾಗೆ ಈ ಬಾರಿಯೂ ಇತ್ತು. 

ದೇವರ ನೈವೇದ್ಯಕ್ಕೆಂದು ಬಗೆ ಬಗೆಯ ಅಡುಗೆ ಮಾಡುವುದು ರೂಢಿ. ಇವತ್ತು ಊಟಕ್ಕೆಂದು ಬಾಳೆಯೆಲೆಯ ಮೇಲೆ ಇದ್ದ ಪದಾರ್ಥಗಳನ್ನು ಪಟ್ಟಿ ಮಾಡಬೇಕೆನಿಸಿತು :). 

೧. ಅಷ್ಟದ್ರವ್ಯ 

೨. ಬಿಳಿ ಎಳ್ಳು ಪಂಚಕಜ್ಜಾಯ 

೩. ಕಪ್ಪು ಎಳ್ಳು ಪಂಚಕಜ್ಜಾಯ ‍

೪. ಮೂಡೆ

೫. ಚಟ್ನಿ ‍‍

೬. ಒಂದು ಬಗೆ ತರಕಾರಿ ಪಲ್ಯ 

೭. ಕೋಸಂಬರಿ 

೮. ‍ಪತ್ರೊಡೆ ‍

೯. ಸಿಹಿ ಅಪ್ಪ (ಇದಕ್ಕೆ ಮತ್ತೊಂದು ಹೆಸರು ಗೊತ್ತಿಲ್ಲ) 

೧೦. ಅನ್ನ 

೧೧. ಸಾರು 

೧೨. ಮೆಣಸ್ ಕಾಯಿ 

೧೩. ಬೋಳು ಹುಳಿ 

೧೪. ಕಾಯಿ ಹುಳಿ (ಮಜ್ಜಿಗೆ ಹುಳಿ) 

೧೫. ಪಾಯಸ

೧೬. ಅಕ್ಕಿ ಹಿಟ್ಟಿನಲ್ಲಿ ಮಾಡಿದ ಮೋದಕ 

೧೭. ಅಕ್ಕಿ ಹಿಟ್ಟಿನಲ್ಲಿ ಮಾಡಿದ‍ ಉಣ್-ಲಕ  

 ೧೮. ಮಜ್ಜಿಗೆ/ಮೊಸರು 

ಇನ್ನು ಊಟ ಪೂರ್ಣಗೊಳ್ಳಲು ಉಪ್ಪು - ಉಪ್ಪಿನಕಾಯಿ ಇದ್ದೇ ಇರುತ್ತದೆ. 

ಅಂತೂ ಪೂರ್ಣಾಹುತಿ ಆಗುವ ಮುನ್ನ ಅಜ್ಜಿ ಇಷ್ಟೆಲ್ಲ ತಯಾರಿಸಿದ್ದು ನೋಡಿ ನಾನು ಬೆರಗಾದೆ! 

‍ನಿಮ್ಮ ಮನೆಯಲ್ಲಿ ಎನೇನು ತಯಾರಿಸಿದಿರಿ? ಇಲ್ಲಿ ಹಂಚಿಕೊಳ್ಳಿ...... ಅದರ recipeಯನ್ನು ರುಚಿ ಸಂಪದದಲ್ಲಿ ಹಾಕಿದರೆ ಇನ್ನೂ ರುಚಿ :-)‍. 

 

 

Comments

Submitted by ananthesha nempu Tue, 09/10/2013 - 12:28

ಶೇಂಗಾ ಬೀಜವನ್ನು ಚೆನ್ನಾಗಿ ಹುರಿದು ಸಿಪ್ಪೆ ತೆಗೆದು ಇಡೀ ಶೇಂಗಾವನ್ನು ಎರೆಡೆರೆಡು ಪೀಸ್ ಮಾಡಿಕೊಳ್ಳುವುದು. ಒಣ ಕೊಬ್ಬರಿಯನ್ನು ತುರಿದು ಹುರಿಯುವುದು. ಬೆಲ್ಲವನ್ನು ಪಾಕಮಾಡಿಕೊಂಡು (ಗಟ್ಟಿ ಮಾಡಬಾರದು) ಎಲ್ಲವನ್ನು ಸೇರಿಸಿ ಉಂಡೆ ಕಟ್ಟುವುದು. ಬೇಕಾದರೆ ಗೋಡಂಬಿಯನ್ನು ಸೇರಿಸುವುದು...