ಗಣೇಶ - ನಮನ !

ಗಣೇಶ - ನಮನ !

ಕವನ

ಬಾ ಬಾರ ಬಾರ  ನಮ್ಮ  ಗಣೇಶ
ತಂದಿರುವೆ ಗಣಪ ಏನು ಶುಭ ಸಂದೇಶ
ಭಾದ್ರಪದ ಚತುರ್ಥಿ ಈ ಪವಿತ್ರ ದಿವಸ
ನಿನ್ನ ಚರಣಕೆ ನಮ್ಮೆಲ್ಲರ ಭಕ್ತಿ ರಸ ಕಳಶ.


ಸಕಲ ಕಾರ್ಯಕೂ ನಿನ್ನ ನಾಮವೇ ಮುನ್ನುಡಿ
ಶ್ರೀ ವಿನಾಯಕ ನಿನ್ನ ನಾಮವೇ ಸಿದ್ಧಿ ಕೈಪಿಡಿ
ಗಜಾನನ ನಿನ್ನ ನಾಮವೇ ಬಾಳಿಗೆ ವರ ನುಡಿ
ವಿಘ್ನೇಶ ನೀನೇ  ಈ  ಜಗದ    ಗಾರುಡಿ .


ಜಗದ್ಢೋಧಾರ  ಲಂಬೋದರ ಪ್ರೀತಿಯಲಿ ಹರಿಸು
ವರದ ಮೂರ್ತಯೇ  ಶಿವ ಸುತನೇ ವರವ ಕರುಣಿಸು
ಏಕದಂತ ಗಜಮುಖನೆ ಬಾಲ ದೀಪ ಬೆಳಗಿಸು
ಪಾರ್ವತಿನಂದನ  ತನು ಮನ ನಮನ ಸ್ವೀಕರಿಸು.


ಶ್ರೀ ನಾಗರಾಜ.