ಗಣೇಶ ಲೆಫ್ಟ್ handa ? ರೈಟ್ handa ?

ಗಣೇಶ ಲೆಫ್ಟ್ handa ? ರೈಟ್ handa ?

ಗಣೇಶ ಲೆಫ್ಟ್ handa ? ರೈಟ್ handa ?
ನಮ್ಮ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿ (ಕ್ಷಮಿಸಿ ರಾಜ್ಯ ಮತ್ತು ದೇಶದ ಉದ್ದಗಲ) ಗಣೇಶನ ಮೂರ್ತಿಗಳು ಕುಂತು, ನಿಂತು, ಆಡಿ, ಓಡಿ ಕೆರೆಯಲ್ಲೋ, ಕುಂತೆಯಲ್ಲೋ, ಮನೆಯ ಬಕೀಟ್ನಲ್ಲೂ ಕರಗಿ ಮಣ್ಣಾಗಿ ಆಗಿದೆ.
ಆದ್ರೆ ಈ ಸಲ ನನಗೆ ಯಾಕೂ ಒಂದು ಸ್ವಲ್ಪ ಡೌಟ್ ಶುರು ಆಯ್ತು, ಒಂದಷ್ಟು ಗಣೇಶಗಳನ್ನು ನಮ್ಮ ಮನೆ ಸುತ್ತ ಮುತ್ತ ಎಲ್ಲ ರೌಂಡ್ ಹೊಡ್ಕೊಂಡು ಬಂದೆ. ಏನೂ ಸ್ವಲ್ಪ ಡಿಫರೆಂಟ್ ಅನ್ನಿಸ್ತು ಕೆಲವು ದೊಡ್ಡ ಗಣೇಶಗಳನ್ನು ನೋಡಿದಾಗ...
ಸ್ವಲ್ಪ ದಿಟ್ಟಿಸಿ ಗಜಾನನನ ಮುಖಾರವಿಂದ ನೋಡಿದಾಗ ಏನೋ confusion  ಇದೆ ಅನ್ನಿಸ್ತು  ... ಹೌದು ಏಕದಂತನ, ವಕ್ರತುಂಡನ ದಂತ ಒಂದೊಂದು ಕಡೆ ಎಡಗಡೆ ಮುರಿದಿದ್ದರೆ, ಕೆಲವು ಕಡೆ ಬಲಗಡೆ ಮುರಿದಿತ್ತು.... ಇನ್ನು ಕೆಲವು ಕಡೆ ಬಿಡಿ ಅದು ಮುರಿದೇ ಇರಲಿಲ್ಲ.
ಇದು ಯಾಕೂ ಸ್ವಲ್ಪ manufacturing ಮಿಸ್ಟೇಕ ಅಥವಾ ಯಾವ್ದಾದ್ರೂ ಒಂದು ದಂತ ಮುರಿದಿದ್ರೆ ಸಾಕ ಅಂತಾ ತಲೇಲಿ ಹುಳ ಬಿಟ್ಕೊಂಡು ಯೋಚಿಸ್ತಾ ಇದ್ದೆ ... ಆವಾಗ ನನಗೆ ನೆನಪಾಗಿದ್ದು ಸಣ್ಣ ಹುಡುಗ ಆಗಿದ್ದಾಗ ಓದಿದ ಒಂದು ಕಥೆ... ಒಂದಾನೊಂದು ಕಾಲದಲ್ಲಿ ನಮ್ಮ ಗಾಡ್ ಗಣೇಶ ಬಾಲಕ ಆಗಿದ್ದಾಗ ವೇದ ವ್ಯಾಸರ ಬಳಿ ಬರಹಗಾರರಾಗಿ ಕೆಲಸ ಮಾಡಿದ್ದರಂತೆ. ವ್ಯಾಸರು ಮಹಾಭಾರತದ ಶ್ಲೋಕಗಳನ್ನು ಬಾಯಲ್ಲಿ ಹೇಳುತ್ತಾ ಹೋದಂತೆ ನಮ್ಮ ವಿನಾಯಕ ತಾಳೆ ಗರಿಯಲ್ಲಿ ಹಳೇ ಕಾಲದ ದೇಸಿ  ಲೇಖನಿ ಹಿಡ್ಕೊಂಡು ಬರೀತಿದ್ರಂತೆ.
ಹೀಗೆ ಬರಹಗಾರನ ಕೆಲ್ಸಾ ಮಾಡುವಾಗ ಗಜಾನನ ಕಯ್ಯಲ್ಲಿದ್ದ ದೇಸಿ ಲೇಖನಿ ಕೆಟ್ಟು ಹೋಯ್ತಂತೆ. ಆದ್ರೆ ಗಣೇಶ ನಮ್ಮ ಈ ಕಾಲದ ಬರಹ ಗಾರರ ತರ ಪೆನ್ ಕೆಟ್ಟುಹೋಯ್ತು ಅಂತ ಟೈಮ್ ಪಾಸು ಮಾಡಿ ಅವರ ಗುರುಗಳ ಏಕಾಗ್ರತೆ ಭಂಗ ಮಾಡದೆ, ಬರೆಯುವ ಕೆಲಸ ಹೀಗೆ ಮುಂದುವರಿಸುವುದು ಎಂದು ಯೋಚನೆ ಮಾಡುತ್ತಾರೆ. ಆಗಲೇ ಅವರಿಗೆ ಉಪಾಯ ಹೊಳಿಯೋದು ತನ್ನ ಮುಖದಲ್ಲಿ ಇರುವ ದಂತವನ್ನು ಮುರಿದು ಲೇಖನಿಯಾಗಿ ಉಪಯೋಗಿಸಬಹುದು ಅಂತಾ. ಪುಣ್ಯಾಅಂದ್ರೆ ಈ ಕಾಲಕ್ಕೋ ಅದನ್ನ ಯಾರೂ ಪೀಟೆಂಟ್ ಮಾಡ್ಸಿಲ್ಲ :-) . ನಾನು ಓದಯಾದ್ದ ಹಳೆಯ ಪುಸ್ತಕಗಳಲ್ಲಿನ ಪ್ರಕಾರ ಗಣೇಶ ಒಂದು ದಂತ ಮುರಿದುಕೊಂಡು ಲೇಖನಿ ತರ ಉಪಯೋಗಿಸಿ ತಮ್ಮ ಕಾಯಕ ಮುಗಿಸಿ, ಅವರ ಗುರು ವೇದ ವ್ಯಾಸರ ನೆಚ್ಚಿನ ಶಿಷ್ಯಾ ಎಂದು ಹೋಗಲಿಸಿಕೊಂಡಿದ್ದರು. ಬಹಳಷ್ಟು ಗಣೇಶ ಮುರ್ತಿಗಳನ್ನ ನೋಡಿದರೆ ಗಣೇಶನ ಬಲಗಡೆಯ ದಂತ ಮುರಿದಿದೆ, ಆದ್ರೆ ಕೆಲವು ಕಡೆ ಎಡಗಡೆ ದನ ಮುರಿದಿದೆ.
ಸರಿ ಅದೆಲ್ಲ ಹೀಗಾದರೂ ಇರಲಿ ಒಂದು ಸಲ ಪೂಜೆ ಮಾಡೂ ಶಾಸ್ತ್ರಿಗಳನ್ನ  ಕೇಳುವುದು ಒಳ್ಳೆಯದು ಅಂದ್ಕೊಂಡು ಎಡಗಡೆ ದಂತ ಮುರಿದಿರುವ ಗಣೇಶನ್ನ ತೋರಿಸಿ ನನ್ನ confusion ಹೇಳಿದ್ರೆ ಅವರು ...  ಹೌದು ಹೌದು ಗಣೇಶನಿಗೆ ಒಂದು ಕಡೆ ದಂತ ಭಗ್ನ, ಇದು ಸರಿ ಇದೆಯಲ್ಲ  ಅಂದುಬಿಟ್ರು.... ಸರಿ ನಾನು ಅದೇ ವೇದವ್ಯಾಸರ ಕಥೆ ಹೇಳಿ ಗಣೇಶ ರೈಟ್ ಹ್ಯಾಂಡ್ ಇರ್ಬೇಕಲ್ವಾ, ಸ್ವಾಭಾವಿಅಕವಾಗಿ ರೈಟ್ ಹ್ಯಾಂಡ್ ಬಳಸುವಾಗ ರೈಟ್ ಸೈಡ್ ದಂತ ಕಟ್ ಮಾಡ್ಕೊಂಡು ಬಳಸೋದು ಸುಲಭ ಆಲ್ವಾ ಅಂದೇ ... ಅದಕ್ಕವರು ಅಲ್ಲೇ ಪಕ್ಕದಲ್ಲಿ ಇದ್ದ ಗಣೇಶನ ಒಂದು ದೊಡ್ಡ ಪಟ ನೋಡಿ ಹೌದು ಇರಬಹುದು ... ನೋಡಿ ಈಗ ಎಲ್ಲಾರೂ ಕಲೆಗಾರರು ... ನಮ್ಮ ಪುಣ್ಯ ಒಂದು ದಂತ ತೆಗೆದು ಇನ್ನೊಂದು ಬಿಟ್ಟಿದ್ದಾರಲ್ಲ ... ಎರಡೂ ಇಲ್ಲದಂಗೆ ಮಾಡಿದ್ರೆ ಬಹಳ ಕಷ್ಟಾ ಆಗ್ತಿತ್ತು ಅಂದ್ರು ...
ಸರಿ ಅಂದ್ಕೊಂಡು ಮನೆಗೆ ಬಂದು ನನ್ನ ಅಮ್ಮನ ಹತ್ತಿರ ಸ್ವಲ್ಪ ಹೊತ್ತು ಈ ವಿಷಯ ಮಾತಾಡಿದೆ, ಅವರು ರಾಮಾಯಣ, ಮಹಾಭಾರತ ಎಲ್ಲ ಚೆನ್ನಾಗಿ ಓದಿ ತಿಳ್ಕೊಂಡಿದ್ದಾರೆ, ಅವರು ಇಲ್ಲ ಗಣೇಶ ರೈಟ್ ಹ್ಯಾಂಡ್ ಕಣೊ ಅಂತಾ ಅಂದ್ರು ...
ಒಟ್ಟಾರೆ ನನ್ನ ಪ್ರಶ್ನೆಗೆ ಉತ್ತರ ಇನ್ನು ಕನ್ಫ್ಯೂಶನ್ ಆಗೇ ಉಳಿಯಿತು .....

Comments