ಗಣ್ಯರ ಖಾಸಗಿ ಬದುಕು ಸಾರ್ವಜನಿಕರ ಆಸ್ತಿಯೇ?

ಗಣ್ಯರ ಖಾಸಗಿ ಬದುಕು ಸಾರ್ವಜನಿಕರ ಆಸ್ತಿಯೇ?

Comments

ಬರಹ

ಇತ್ತೀಚಿಗೆ ಈ ಪ್ರಶ್ನೆ ನನ್ನನ್ನು ಅಪಾರವಾಗಿ ಕಾಡುತ್ತಿದೆ.
ಗಣ್ಯರ ಖಾಸಗಿ ಬದುಕನ್ನು ಬೀದಿಗೆ ಎಳೆದು ವರ್ಣರಂಜಿತವಾಗಿ ಬರೆಯುವ ಹಕ್ಕು ಮಾಧ್ಯಮದವರಿಗೆ ಯಾರು ಕೊಟ್ಟರು?
ಬೆಂದ ಮನೆಯಲ್ಲಿ ಸುದ್ದಿ ಎಂಬ ಬೇಳೆ ಬೇಯಿಸಿಕೊಳ್ಳುವ ಇವರಿಗೆ ಏನೆನ್ನಬೇಕು
ಇರುವುದರ ಜೊತೆಗೆ ಇಲ್ಲದಿರುವುದನ್ನು ಸೇರಿಸಿ ಹೇಳಿ, ಮತ್ತೊಬ್ಬರ ತೇಜೊವಧೆ ಮಾಡುವುದರಲ್ಲೂ ಪೈಪೋಟಿ ತೋರಿಸುವ ಮಾಧ್ಯಮಗಳು ಇಂದು ಒಂದು ಜೀವದ ಸಾವಿಗೆ ಕಾರಣವಾಗಿರುವುದು ದುರಂತವೇ.

" ಪ್ರಿಯ ಓ ಪ್ರಿಯ " ಎಂಬ ಟೈಟಲನ್ನು ಇಟ್ಟು ಒಳ್ಳೇ ಸಿನಿಮಾದ ಥರಹ ಒಬ್ಬ ಶಾಸಕರ ಖಾಸಗೀ ಬದುಕನ್ನು ಬೀದಿಗೆ ತಂದಿರುವ ಇವರಿಗೆ ಧಿಕ್ಕಾರ.

ನಿಜವಾಗಲೂ ಅವರ (ಹೆಸರು ಬೇಡ) ಸಾವಿಗೆ ಕಾರಣ ಮಾಧ್ಯಮದವರು ಅದರಲ್ಲೂ ಅವರನ್ನು ಒಳ್ಳೆಯ ನೇರಪ್ರಸಾರ ಕಾರ್ಯಕ್ರಮದ ಹಾಗೆ ಪ್ರಸಾರ ಮಾಡಿದ "ಉತ್ತಮ ಸಮಾಜದ ನಿರ್ಮಾಣಾಕ್ಕಾಗಿ" ಎನ್ನುವ ಸ್ಲೋಗನ ಹೊತ್ತ ಟಿ.ವಿ ಚಾನೆಲ್

ಇದು ನನ್ನ ಅನಿಸಿಕೆ
ನಿಮ್ಮ ಅಭಿಪ್ರಾಯಗಳೇನು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet