ಗತ ದಾಖಲೆ
ಕವನ
ಗತ ಚರಿತೆಯ ಮಹಾದಿತಿಹಾಸಕೆ
ಆಧುನಿಕತೆಯ ಮಹಾ ಸ್ಪರ್ಶವು..
ತಿರುವು,ಮುರುವಿನಲ್ಲಿ ಹೊಸೆದ
ನಾವೀನ್ಯತೆಯ ಹೊಳಪಿನಲ್ಲದು.
ಸಂಸ್ಕೃತಿ,ಸಂಸ್ಕಾರವು ಕಲ್ಲು ಮಣ್ಣ ಕಣದಲ್ಲಿ
ಬೇಲೂರು, ಹಳೇಬೀಡು ಗತಕಾಲದ ವೈಭವವು
ತೆರೆದಿಟ್ಟಿತು ಶಿಲ್ಪ ಕಲೆಯು ಉಸಿರೆಸರಿನಲ್ಲಿ
ಸುಂದರ ನಿಸರ್ಗದ ಮಹಾ ತಾಣದಲ್ಲಿ.
ರಾಜ,ಮಹಾರಾಜರ ವೈಭೋಗದ ಸಿರಿಯಲ್ಲಿ
ವೈಭವೋಪೇತ ರಂಗಿನರಮನೆಯ ಮಹಲಿನಲ್ಲಿ
ಸಾಹಿತ್ಯ, ಸಂಗೀತವು ರಾಗದಲೆಯ ಇಂಪಲ್ಲಿ
ಸಾಧಕರ ಸಾಧನೆಯು ಮಹಾನ್ ಗ್ರಂಥದಲ್ಲಿ.
ಇತಿಹಾಸದ ಪುಟದಲ್ಲಿ ಮಾಹಿತಿಯ ಸಾರವು
ಮನು ಕುಲಕೆ ಎಂದಿಗದು ಅತ್ಯುಪಯಕ್ತೆಯು
ಸರಿದ ಕಾಲದಾಟದಲ್ಲಿ ಚಿಮ್ಮಿದ ಮಿಂಚು ಬೆಳಕು
ಜ್ಞಾನ ಕೋಶದ ಮಹಾ ಭಂಡಾರವು ಕುಲಕು.
ಕಾಲ ಚಕ್ರದ ಗರ್ಭದಿ ಅಡಗಿಹುದಿತಿಹಾಸವು
ತಿರು,ತಿರುಗಿ ಮರಳುವ ನವ ಇತಿಹಾಸವಿದು
ಇಂದಲ್ಲ, ನಾಳೆ ಅದರ ಪುನರುತ್ಥಾನವು
ಭವ,ಬಂಧನ ಬೆಸೆಯುವ ಮಹಾ ನಂಟದು.
-ವೀಣಾ ಕೃಷ್ಣಮೂರ್ತಿ, ದಾವಣಗೆರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್