ಗರಿಕೆ ತಂಬುಳಿ
ಬೇಕಿರುವ ಸಾಮಗ್ರಿ
ಗರಿಕೆಯ ಎಳೆಯ ಹುಲ್ಲುಗಳು ಬೇಕಾದಷ್ಟು, ತೆಂಗಿನಕಾಯಿ ತುರಿ ಅರ್ಧ ಕಪ್, ಕಾಯಿ ಮೆಣಸು ಎರಡು, ಶುಂಠಿ ಸಣ್ಣ ತುಂಡು, ಮಜ್ಜಿಗೆ, ತುಪ್ಪ, ರುಚಿಗೆ ಉಪ್ಪು.
ತಯಾರಿಸುವ ವಿಧಾನ
ಗರಿಕೆಯ ಮೇಲ್ಭಾಗದ ಎಳೇ ಹುಲ್ಲುಗಳನ್ನು ಕೊಯಿದು, ಸ್ವಚ್ಛ ಗೊಳಿಸಿ ಒಂದೆರಡು ನಿಮಿಷ ಸ್ವಲ್ಪ ನೀರು ಹಾಕಿ ಕುದಿಸಬೇಕು ಅಥವಾ ಒಂದು ಚಮಚ ತುಪ್ಪ ಹಾಕಿ ಹುರಿಯಬೇಕು.(ನಾನು ತುಪ್ಪ ಹಾಕಿ ಫ್ರ್ಯೆಮಾಡಿರುವೆ.) ತೆಂಗಿನಕಾಯಿ ತುರಿ, ಉಪ್ಪು, ಕಾಯಿಮೆಣಸು, ಶುಂಠಿ,ಸ್ವಲ್ಪ ಮಜ್ಜಿಗೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ಒಂದು ಸಣ್ಣ ಪಾತ್ರೆಗೆ ಹಾಕಿ, ಇನ್ನು ಸ್ವಲ್ಪ ಮಜ್ಜಿಗೆ ಸೇರಿಸಿ ತುಪ್ಪದಲ್ಲಿ ಒಗ್ಗರಣೆ ಕೊಡಬೇಕು. ಗರಿಕೆ ತಂಬುಳಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ತಂಬುಳಿಯನ್ನು ಕುದಿಸಬಾರದು. ಬಾಣಂತಿಗೆ ಬಡಿಸುವುದಿದ್ದರೆ ಸಣ್ಣ ಉರಿಯಲ್ಲಿ ಕುದಿಸಿ ಬಡಿಸಬಹುದು.
-ರತ್ನಾ ಕೆ.ಭಟ್, ತಲಂಜೇರಿ