ಗರಿಗರಿ ಆಲೂಗಡ್ಡೆ ಚಿಪ್ಸ್

ಗರಿಗರಿ ಆಲೂಗಡ್ಡೆ ಚಿಪ್ಸ್

ಬೇಕಿರುವ ಸಾಮಗ್ರಿ

ಚಿಪ್ಸ್ ತಯಾರಿಸುವ ಆಲೂಗಡ್ಡೆ - ೨, ಐಸ್ ಕ್ಯೂಬ್ ಸೇರಿಸಿದ ನೀರು - ಅರ್ಧ ಲೀಟರ್, ಅರಶಿನ ಹುಡಿ - ಅರ್ಧ ಚಮಚ, ಮೆಣಸಿನ ಹುಡಿ - ೧ ಚಮಚ, ಕಾಳುಮೆಣಸಿನ ಹುಡಿ - ಅರ್ಧ ಚಮಚ, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ

ಚಿಪ್ಸ್ ತಯಾರಿಕೆಗಾಗಿ ಲಭ್ಯವಿರುವ ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ವೃತ್ತಾಕಾರದಲ್ಲಿ ತೆಳುವಾಗಿ ಕತ್ತರಿಸಿ. ಐಸ್ ಕ್ಯೂಬ್ ಬೆರೆಸಿದ ನೀರಿನಲ್ಲಿ ಹತ್ತು ನಿಮಿಷ ನೆನೆಸಿ, ಬಸಿದು ಬಟ್ಟೆಯ ಮೇಲೆ ಹರಡಿ ಒಣಗಿಸಿ. ಒಣಗಿದ ಆಲೂಗಡ್ಡೆ ಹಾಳೆಗಳನ್ನು ಕಾದ ಎಣ್ಣೆಯಲ್ಲಿ ನಸುಗೆಂಪು ಬಣ್ಣ ಬರುವವರೆಗೆ ಕರಿದು, ಟಿಷ್ಯೂ ಪೇಪರ್ ಮೇಲೆ ಹರಡಿ. ಹೀಗೆ ಮಾಡುವುದರಿಂದ ಅದು ಹೆಚ್ಚಿನ ಎಣ್ಣೆಯನ್ನು ಹೀರುತ್ತದೆ. ಎಣ್ಣೆಯ ಪಸೆ ಆರಿದ ಮೇಲೆ ಆ ಆಲೂಗಡ್ಡೆ ಚಿಪ್ಸ್ ಗಳಿಗೆ ಮೆಣಸಿನ ಹುಡಿ, ಅರಶಿನ, ಉಪ್ಪು, ಕಾಳುಮೆಣಸಿನ ಹುಡಿ ಸೇರಿಸಿ ಕಲಕಿದರೆ ರುಚಿಯಾದ ಗರಿ ಗರಿ ಚಿಪ್ಸ್ ರೆಡಿ.