ಗಳಸ್ಯ ಕಂಠಸ್ಯ

ಗಳಸ್ಯ ಕಂಠಸ್ಯ

ಬರಹ

ಪಕ್ಕದ ಫ್ಲಾಟಿನಲ್ಲಿರುವುದು ಸುನಂದಮ್ಮ
ಮುಂಜಾನೆ ಹತ್ತಕ್ಕೆ ಅವರ ಮನೆ ಬಾಗಿಲು ತೆರೆವುದಮ್ಮ
ಬಾಗಿಲ ಬಳಿ ಅವರು ಬಂದರೆ ಹೆಂಗಸರಿಗೆ ಆನಂದವಮ್ಮ
ಇವರೊಂದಿಗೆ ಹರಟಿಸಲು ಅವರಿಗೂ ಮಹದಾನಂದವಮ್ಮ

ಮಾತು ಮಾತು ಮಾತು ಮಾತಿನಲ್ಲೇ ಇವರುಗಳ ಪ್ರಪಂಚ
ಇವರೆಲ್ಲರ ಮಾತಿನಲ್ಲಿ ಮನೆಯವರಾಗುವರು ಹುಚ್ಚ
ಮಕ್ಕಳ ಹೋಂ‍ವರ್ಕ್‍ಗೆ ಬೀಳುವುದು ಕತ್ತರಿ
ಇವರ ಮಾತುಗಳಲಿ ಇರುವುದು ಒಂದು ವೈಖರಿ

ಮಾತು ಶುರು ಆಗುವುದು ಅಡುಗೆ ಮನೆಯಿಂದ
ಮುಂದೆ ಹಾಯ್ದು ಹೋಗುವರು ಮಕ್ಕಳ ಓದಿನಿಂದ
ಮಥಿಸುವರು ರಾಜಕಾರಣಿಗಳ ಕೃತ್ಯಗಳ
ಒಮ್ಮೊಮ್ಮೆ ಭಿನ್ನಾಭಿಪ್ರಾಯ ಮೂಡಿ ಆಡುವರು ಜಗಳ

ಯಾವನೋ ಹುಡುಗ ಕೆಣಕಿದ ಇನ್ಯಾವದೋ ಹುಡುಗಿಯ
ತತ್‍ಕ್ಷಣ ಆಗುವರಿಬ್ಬರು ಇವರ ಮಾತಿಗೆ ವಿಷಯ
ಯಾರದೋ ಗಂಡ ಇಣುಕಿ ನೋಡಿದ ಇನ್ನೊಬ್ಬರ ಮನೆ ಕಿಟಕಿಯ
ಚರ್ಚಿಸಲದೂ ಬರುವುದು ಮೊದಲು ಇವರ ಬಳಿಯೇ

ಇವರಲೂ ನಾ ಕಂಡಿದ್ದೆ ಒಳ್ಳೆಯ ಗುಣ
ಹಬ್ಬ ಹರಿದಿನಗಳಲಿ ಓಡಾಡುವುದು ತಟ್ಟೆಗಳು ಝಣ ಝಣ
ಒಬ್ಬರ ಮನೆಯಲಾಗಲು ಅವಘಡ
ಇನ್ನೊಬ್ಬರ ಮನೆಯಲಾಗುವುದು ಶೋಕಾಚರಣೆ