ಗಸಗಸೆ ಪಾಯಸ

ಗಸಗಸೆ ಪಾಯಸ

ಬೇಕಿರುವ ಸಾಮಗ್ರಿ

ಗಸಗಸೆ ೪ ಚಮಚ, ಸಣ್ಣ ರವೆ ೨ ಚಮಚ, ಸ್ವಲ್ಪ ಗೋಡಂಬಿ, ಬಾದಾಮಿ, ಒಣ ದ್ರಾಕ್ಷೆ, ಸ್ವಲ್ಪ ಏಲಕ್ಕಿ ಹುಡಿ, ತೆಂಗಿನ ಕಾಯಿ ತುರಿ ೧ ಕಪ್, ರುಚಿಗೆ ಬೇಕಾದಷ್ಟು ಬೆಲ್ಲ ಅಥವಾ ಸಕ್ಕರೆ, ರುಚಿಗೆ ಉಪ್ಪು

 

ತಯಾರಿಸುವ ವಿಧಾನ

ಗಸಗಸೆ ಮತ್ತು ಸಣ್ಣ ರವೆಗಳನ್ನು ಹುರಿದು ಕೊಳ್ಳಬೇಕು. ಗೋಡಂಬಿ, ಬಾದಾಮಿ, ಚಿಟಿಕೆ ಏಲಕ್ಕಿ ಹಾಕಿ , ಎಲ್ಲವನ್ನೂ ನುಣ್ಣಗೆ ರುಬ್ಬಿ ಪಾತ್ರೆಗೆ ಹಾಕಬೇಕು. ತೆಂಗಿನಕಾಯಿ ತುರಿ (ಸುಳಿ)ಯನ್ನು ರುಬ್ಬಿ ಹಾಲು ತೆಗೆದು ಇಟ್ಟುಕೊಳ್ಳಬೇಕು. ೨ನೇ ಮತ್ತು ೩ನೇ ಕಾಯಿಹಾಲನ್ನು ರುಬ್ಬಿದ ಪೇಸ್ಟಿಗೆ ಸೇರಿಸಿ, ಚೆನ್ನಾಗಿ ಮಿಶ್ರ ಮಾಡಿ, ಸಣ್ಣ ಉರಿಯಲ್ಲಿ ಸೌಟಲ್ಲಿ ಕಲಕುತ್ತಾ ಕುದಿಸಬೇಕು.(ಇಲ್ಲದಿದ್ದರೆ ಅಡಿ ಹಿಡಿಯುತ್ತದೆ, ಗಂಟು ಗಂಟಾಗುತ್ತದೆ) ಹದ ಕುದಿದಾಗ ಬೆಲ್ಲ ಅಥವಾ ಸಕ್ಕರೆ ಸೇರಿಸಿ, ಚೆನ್ನಾಗಿ ಮಿಶ್ರ ಮಾಡಿ, ಗೋಡಂಬಿ,ದ್ರಾಕ್ಷೆ ಬೇಕಾದರೆ ತುಪ್ಪದಲ್ಲಿ ಹುರಿದು ಸೇರಿಸಿ ಕೆಳಗಿಳಿಸಬೇಕು. ಚಿಟಿಕೆ ಉಪ್ಪು ಹಾಕಿದರೆ ರುಚಿಯಾಗುತ್ತದೆ. ಹಾಲಿನಲ್ಲಿ ಸಹ ಮಾಡಬಹುದು. ರುಚಿಯಾದ *ಗಸಗಸೆ* ಪಾಯಸ ರೆಡಿ.

-ರತ್ನಾ ಭಟ್ ತಲಂಜೇರಿ