ಗಾಜು By raghu_cdp on Fri, 03/29/2013 - 12:00 ಕವನ “ಫಳ್” ಹಾಯಾಗಿ ನಿದ್ದೆಮಾಡುತಿದ್ದ ಗಾಜಿನ ಮೇಲೆ ಯಾವೋನೋ ಪುಡಾರಿ ದಾಳಿಯಿಟ್ಟ ಶ್ವೇತವರ್ಣ ಸೌಂದರ್ಯವತಿಯಾಗಿದ್ದ ಆ ಗಾಜು ಈಗ ನೈರೂಪ್ಯದ ರಾಶಿ ಆಚೆಕಡೆ, ಈಚೆಕಡೇ ಓಡಾಡುತಿದ್ದ ನಶ್ವರ ದೇಹಿಗಳ ಪ್ರತಿಬಿಂಬಗಳನ್ನು ಬೇಸರದೇ ಹೊತ್ತುತ್ತಿದ್ದ ಆ ಗಾಜು ಈಗ ಹೃದಯಕ್ಕೆ ಬದಲಾಗಿ ದೇಹ ಒಡೆದು ಸತ್ತುಹೋಯಿತು! Log in or register to post comments