ಗಾದೆಗಳು(ಚ-1)

ಗಾದೆಗಳು(ಚ-1)

ಬರಹ

ಛೀ ಅಂತಾರೆ ಅಂಬ್ಲಿ ಬುತ್ತಿ ಕಟ್ಟು ಅಂದ.

ಛಲವಿಲ್ಲದ ಹೆಂಡ್ತಿ ಕಟ್ಕೊಂಡ್ರೆ ಕಷ್ಟ ಬುಟ್ರೆ ಔಮಾನ.

ಚಳಿ ಆಗುವ ಹಾಗೆ ಗಂಡನೂ ಆಗುವುದಿಲ್ಲ ಮಕ್ಕಳು ಆಗುವುದಿಲ್ಲ.

ಚೇಳಿಗೆ ಮುತ್ತು ಕೊಟ್ಟಂಗೆ ಚೆಲ್ಲು ಮುಕ್ಕನ ಸಂಗ.

ಚೀಕ್ರ ಗುಡ್ಲಿಗೆ ಬೆಂಕಿ ಎಟ್ಟಿದಂಗೆ.

ಚೋಟುದ್ದ ಕೂಸಿಗೆ ಗೇಣುದ್ದ ಕುಲಾವಿ.

ಚಂಡಾಲ ದೇವರಿಗೆ ಹೆಂಡ ಕುಡಿಯೋ ಪೂಜಾರಿ.

ಚಂದ ನೋಡಿ ತಂದ್ರಂತೆ, ಚಾಳಿ ನೋಡಿ ಬಿಟ್ರಂತೆ.

ಚಂದಕ್ಕೆ ನಾಮ ಇಕ್ಕಿಸ್ಕೊಳ್ಳೋಕೆ ಮೇಲ್‍ಕ್ವಾಟೆಗೆ ಹೋದ.

ಚಂದುಳ್ಳಿಯೋರೆಲ್ಲ ನನ್ನೇ ನೋಡ್ತಾರೆ ಮತ್ತೊಸಿ ಉಯ್ಯತ್ತೆ ಕೈಯೆಣ್ಣೆಯ ಅಂದ್ಲು.

ಚಾಡಿಕೋರನಿಗೆ ಊರೆಲ್ಲ ನೆಂಟರು.

ಚಾಣ ಸಣ್ಣದಾದ್ರೂ ಚಪ್ಪಡಿ ಪಾಳಿಸ್ತದೆ.

ಚಾಜ್‍ಗಾರನೆಡ್ತಿ ಸೌದ್‍ಗಳ್ಳೆ, ಮನ್‍ಗಾರನೆಡ್ತಿ ಮನೆಗಳ್ಳೆ, ಮನೇಲಿ ರಾಗಿಲ್ದೆ ಮನೆಗವ್ಳೆ.

ಚಚ್ಚಚ್ಚೀ ನಿನ್ನ ಚುಚ್ಚೋರು ಯಾರು ಅನ್ನೋವತ್ಗೆ ಕರಿಕಂಬ್ಳೋರು ಕಾಗಿನ ದೊಡ್ಡೋರು ಇಳ್ಳೊತ್ತಿನಲ್ಲೆ ಬಂದು ಇಳ್ಳೊತ್ತಿನಲ್ಲೆ ಹೋಗೋರು ಅಂದ್ಲಂತೆ.

ಚಮ್ಮಾರ ದೇವರಿಗೆ ಚಪ್ಪಲಿ ಪೂಜೆ.

ಚರಪು ಕಾಯ್ತ ಇದ್ದುದಕ್ಕೆ ಚಪ್ಪಲಿಯೇ ಮಾಯವಾಯ್ತು.

ಚರ್ಮ ಸುಕ್ಕಾದ್ರೆ ಮುಪ್ಪು, ಕರ್ಮ ಮುಕ್ಕಾದ್ರೆ ಮುಕ್ತಿ.

ಚರ್ಮ ತೊಳೆದರೆ ಕರ್ಮ ಹೋದೀತೆ/ತಪ್ಪೀತೆ?

ಚೌಡಿ ಬಿಡಿಸಿದವರೆ ಹೆಣ ಹೊರಬೇಕು.

ಚೆಂದಕ್ಕೆ ಚೆನ್ನವೀರಿ ಅಂದೊತ್ತಿಗೆ ಕಂಡಕಂಡವರೆಲ್ಲ ಹಲ್‍ಗಿರೀರಿ ಅಂದ್ಲಂತೆ.

ಚೆಂದಕ್ಕೆ ನನ್ನ ಗಂಡ ಚೆನವೀರಿ ಅಂದ್ರೆ ಅಂಗೆ ನನ್ನ ಜೀವ ಅರದೋಯ್ತು.

ಚೆಂದುಳ್ಳಿ ಹೆಣ್ಣಿಗೆ ಓಡವ್ಯಾಕೆ, ಹೊಸ ರಾಗಿ ಹಿಟ್ಟಿಗೆ ಎಸರ‍್ಯಾಕೆ?

ಚೆಲ್‍ಮುಂಡೆ ಗಂಡನ ಮದ್ವೆಗೋದ್ಲು.

ಚೆಲ್ಲಿಲ್ಲಿ ಮುಕ್ಕ ಎಲ್ಲಿದ್ದರೇನು ಮಾಡಿದ ರಾಗೀಲಿ ಕಲ್ಲಿದ್ದರೇನು.

ಚಿಗಳಿ ತಿಂದೋಳು ಚಿಗತುಕೊಂಡ್ಲು ಬಿಸ್ಕತ್ ತಿಂದೋಳು ಬಳ್ಳಕೊಂಡ್ಲು.

ಚಿಗರೆಲೆ ಹಾಕ್‍ಬೇಕು ಕಳಿಯಡ್ಕೆ ಮೆಲ್‍ಬೇಕು ಸಿರ್‌ಸ್‌ದಾರ‍್ನ ಕೂಡ್‍ಬೇಕು ಸೀರಂಗ್ ಪಟ್ನ ಸೇರ್ ಬೇಕು.

ಚಿಕ್ಕ ಬಾಯಲ್ಲಿ ದೊಡ್ಡ ಮಾತು.

ಚಿಕ್ಕವ್ವ ಚಿಕ್ಕವ್ವ ಮರಿಬಾಡ್ನೆಸ್ರು: ತಿರುಗ್ ನೋಡುದ್ರೆ ಚೊಳ್ ನೀರು.

ಚಿನ್ನ ತಿನ್ನಬೇಕಾದ್ರೆ ಮೇಣದಂತಾ ಹಲ್ಲು ಬೇಕು.

ಚಿನ್ನದಂಥ ಮಕ್ಕಳು ಹೆಣ್ಣಾದ್ರೇನು ಗಂಡಾದ್ರೇನು.

ಚೀಲಿ (ಬೆಕ್ಕು ತನ್ನ ಮರಿಗಳ ಸಾಕಿದಂತೆ, ಪ್ರೀತಿಸಿ ಧೈರ್ಯಗೆಡಿಸಿದ ಮಕ್ಕಳು) ಮಕ್ಕಳು ಒಲೆ ಮುಂದೆ, ಚಿನಾಲಿ ಮಕ್ಕಳು ಊರ ಮುಂದೆ.

ಚಿನ್ನಿದ್ದೋರ ತೊನ್ನು ಮುಚ್ತದೆ.

ಚಿತ್ತಕ್ಕೆ ನಾನಾ ಕವಲು ಸತ್ಯಕ್ಕೆ ಒಂದೇ ಮಡಿಲು.

ಚೊಗಟಗಾತಿ ಮನೆ ಚಿಗಟ ಮೂಗಂಡುಗ.

ಚೊಕ್ಕಣ್ಣನ ಕೋಪ ಸಣ್ಣಪ್ಪನ ದವಡೆಗೆ ಮೂಲ.