ಗಾದೆಗಳು(ಚ)

ಗಾದೆಗಳು(ಚ)

ಬರಹ

ಚಕ್ಕಂದದವನಿಗೆ ತಕ್ಕ ಫಲ ಸಿಕ್ಕುವುದು

ಚಟ್ಟಿದಿನ ಬಿಟ್ಟಿಗೂ ಹೋಗಬೇಡ

ಚನ್ನಾಗಿದ್ದರೆ ನಂಟರು, ಕೆಟ್ಟರೆ ಸ್ನೇಹಿತರು

ಚಪ್ಪರಕ್ಕೆ ಗತಿಯಿಲ್ಲದವ ಉಪ್ಪರಿಗೆಯನಪೇಕ್ಷಿಸಿದ

ಚಲವಾದಿಯ ಸಂಗಡ ಹಟವಾದಿ ಸೇರಿದ ಹಾಗೆ

ಚಳಿಗಿಲ್ಲದ ಕಂಬಳಿ ಮೆಳೇ (=ದಿಂಡುಗದ ಮೆಳೆ, ಸಣ್ಣದಾದ ಕಾಡು ಮರ) ಮೇಲೆ ಬಿದ್ದರೇನು ಮುಳ್ಳಿನ ಮೇಲೆ ಬಿದ್ದರೇನು

ಚಳಿಗಾಲಕ್ಕಿಂತ ಮಳೆಗಾಲ ವಾಸಿ

ಚಾಪೆ ಕೆಳಗೆ ಒಬ್ಬ ತೂರಿದರೆ ಇನ್ನೊಬ್ಬ ರಂಗೋಲಿ ಕೆಳಗೆ ತೂರಿದ

ಚಾಪೆಇರುವಷ್ಟಕ್ಕೆ ಕಾಲು ನೀಡಬೇಕು

ಚಿಕ್ಕ ಮಡಿಕೆ ಚೊಕ್ಕ ಬೋಜನ

ಚಿಕ್ಕಪ್ಪ ತಾನೂ ಇಕ್ಕ ಬಿಕ್ಷೆ ಬೇಡಲೀಸ

ಚಿಕ್ಕಪ್ಪನಾದರೆ ಮನೆಗೆ ಬಂದು ಕಾಲು ಹಿಡಿದೇನು ಅಪರಾಧಕ್ಕೆ ದೋತ್ರಾ ಕೊಡಬೇಕು

ಚಿಕ್ಕ ಮೀನು ದೊಡ್ಡ ಮೀನು ನುಂಗಿತಂತೆ

ಚಿಕ್ಕ ಮೆಣಸಿಗೆ ಕಾರ ಹೆಚ್ಚು

ಚಿನ್ನದ ಚೂರಿ ಎಂದು ಕುತ್ತಿಗೆ ಕುಯಿಸಿಕೊಳ್ಳಬಹುದೇ

ಚಿನ್ನಕ್ಕೂ ಕಬ್ಬಿಣಕ್ಕೂ ಹೆಚ್ಚು ಕಡಿಮೆ ಇಲ್ಲವೇ?

ಚಿನ್ನದ ತಲೆಯಾದರು ಒಡೆಯಲಿಕ್ಕೆ ಕಬ್ಬಿಣವೇ

ಚಿನ್ನದ ಹರಿವಾಣವಾದರೂ ಮಣ್ಣಿನ ಗೋಡೆಗೆ ಒರಗಬೇಕು

ಚಿನ್ನಿವಾರನ ಮನೇ ನಾಯಿಯಾದರೆ ನಾಣ್ಯದ ನೋಟಾ ಬಲ್ಲುದೇ

ಚಿನ್ನದ ಕಠಾರಿಯಂತ ಹೊಟ್ಟೆ ತಿವಿದುಕೊಳ್ಳಬಹುದೇ?

ಛೀ ಅಂದರೆ ನನ್ನ ಭಲಾ ಅಂದರು ಅಂದಂತೆ

ಚೀಟಿ ಪಾಟಿ ಪಡಿಕಾಳಿಗೆ ಸಾಟಿಯೇ?

ಚೂರಿ ಹದ ಆದರೂ ಗಿಡ ಕಡಿಯಲಾರದು

ಚೇಳಿಗೆ ಮುತ್ತು ಕೊಟ್ಟ ಹಾಗೆ

ಚೇಳಿಗೆ ಪಾರುಪತ್ಯಾ (administration) ಕೊಟ್ತರೆ ಜಾವಕ್ಕೆ ಒಂದು ಸಾರಿ ಮುಟ್ಟಿಸಿತು

ಚೇಳಿನ ಮಂತ್ರ ಅರಿಯದವ ಹಾವಿನ ಹುತ್ತಕ್ಕೆ ಕೈ ಹಾಕಿದ ಹಾಗೆ

ಚೈತ್ರದಲ್ಲಿ ಮಿತ್ರನಾದರೂ ಮೈ ತಗಲಿಸಕೂಡದು

ಚೋಟು ಕಡಿಮೆ ಅಗಳು ದಾಟಿದ ಹಾಗೆ

ಚೋಟುದ್ದ ಹುಡುಗನಿಗೆ ಮಾರುದ್ದ ಕಂಬಳಿ

ಚೋಳದೇಶದ ಚೇಳಿಗಿಂತ ಹೆಚ್ಚು

ಚೌಲೋಪನಯನವಾಗದವ ನವಿಲಿಗಿಂತ ಕಡೆ

ಚಂದವಿದ್ದಲ್ಲಿ ಮಂದತ್ವ ಇರಬಾರದು

ಚಂಬು ಚರಿಗೆಗೆ ದರಿದ್ರವಾದರೂ ಹಂಚು ಹುಡಿಗೆ ದರಿದ್ರವಿಲ್ಲ

ಚಿಂತೆಯವ ಚಿಂತೆಗೆ ಅತ್ತರೆ ಕೆಂಚ ತನ್ನ ಗುದಿಗೆಗೆ (=ದಡಿ, ಬಡಿಗೆ) ಅತ್ತ

ಚಿಂದಿಯಾದರೂ ದೊಂದಿಗೆ (= ಪಂಜು) ಆಗುತ್ತದೆ.