ಗಾದೆಮಾತಿನ ಮೂಲ
ಆಗ ತಾನೆ ಬಿ.ಇ ಪದವಿಯನ್ನು ಮುಗಿಸಿ ಉದ್ಯೋಗ ಹುಡುಕಲು ಬೆಂಗಳೂರಿಗೆ ಬಂದಿದ್ದೆವು.
ಬೆಳಗಿನ ಉಪಹಾರಕ್ಕೆಂದು ಸ್ನೇಹಿತರೊಡನೆ ದರ್ಶಿನಿಗೆ ಹೋಗುತ್ತಿದ್ದೆವು. ಸ್ವಸಹಾಯ ಹಾಗು ಮಾಣಿಗಳ ಸೇವೆಯ ತರಹದ ಪದ್ಧತಿಗಳು, ಇಲ್ಲಿಗೆ ಬಂದಮೇಲೆಯೇ ನಮಗೆ ಗೊತ್ತಾಗಿದ್ದು.
ಈ ಸೇವೆಗಳ ಬೆಲೆಯಲ್ಲಿರುವ ವ್ಯತ್ಯಾಸವನ್ನು ನೋಡಿ, ಮನೆಯಿಂದ ಕಳುಹಿಸಿದ ಹಣವನ್ನು ದುಂದುವೆಚ್ಚ ಮಾಡಬಾರದೆಂದು ಸ್ವಸಹಾಯ ಪದ್ಧತಿಯಲ್ಲಿಯೇ ತಿಂಡಿ ತಿಂದು ಬರುತ್ತಿದ್ದೆವು. ಹೋದಾಗಲೆಲ್ಲ ನನಗೆ ಅನಿಸುತ್ತಿತ್ತು "ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು" ಎಂಬ ಗಾದೆಮಾತನ್ನು ಹೇಳಿದವರು ಬೇರೆ ಯಾರೂ ಅಲ್ಲ, ಹೀಗೆ ನಮ್ಮಂತೆ ಉದ್ಯೋಗಾರ್ಜನೆಗಾಗಿ ಬರುವ ಯುವಕರೆಂದು.