ಗಾದೆ ಮಾತು ವಿಸ್ತರಣೆ

ಗಾದೆ ಮಾತು ವಿಸ್ತರಣೆ

*ಬೇವಿನ ಗಿಡ ನೆಟ್ಟು ಮಾವಿನ ಹಣ್ಣುಗಳನ್ನು ಬಯಸಿದಂತೆ*

ನಮ್ಮ ಹಿರಿಯರ ಅಂತರಾಳ, ಅನುಭವದ ವಾಕ್ಯಗಳೇ, ಮಾತುಗಳೇ ಗಾದೆಗಳು. ನಮ್ಮ ಜೀವನದ ಅವಿಭಾಜ್ಯ ಅಂಗಗಳೇ ಗಾದೆಗಳು.*ವೇದ ಸುಳ್ಳಾದರೂ ಗಾದೆ ಸುಳ್ಳಾಗದು*ಇದು ಆಡು ಮಾತು.

ನಾವು ಬದುಕಿನುದ್ದಕ್ಕೂ ಪಾಪ ಕಾರ್ಯಗಳನ್ನೇ ಮಾಡಿ, ಪುಣ್ಯದ ಫಲವನ್ನು ಎದುರು ನೋಡಿದರೆ ಹೇಗೆ? ಇದೇ ಅರ್ಥ ಈ ಮೇಲಿನ ಗಾದೆಯದ್ದಾಗಿದೆ. ಪಾಪ, ಬೇಡದ, ಕೆಟ್ಟ ಕೆಲಸಗಳನ್ನೇ ಮಾಡುವುದೇ *ಬೇವಿನ ಮರ ನೆಡುವುದು*. ಪುಣ್ಯದ  ಫಲ ನೋಡುವುದು *ಮಾವಿನ ಹಣ್ಣುಗಳನ್ನು ಬಯಸುವುದು*. ಭಗವಂತನ ದೃಷ್ಟಿಯಲ್ಲಿ ಎಲ್ಲವೂ ತೂಕದಿಂದ ಕೂಡಿರುತ್ತದೆ. ಪ್ರಕೃತಿಯ ನಿಯಮ, ಯಾವ ಬೀಜ ಬಿತ್ತುತ್ತೇವೋ, ಅದೇ ಫಲ ತಾನೆ ಸಿಗುವುದು. ನಾವು ಏನು ಮಾಡುತ್ತೇವೋ ಅದನ್ನು ಉಣ್ಣಲೇ ಬೇಕು. *ಉಪ್ಪು ತಿಂದವ ನೀರು ಕುಡಿಯಲೇ ಬೇಕು*. ಬಿತ್ತಿದಂತೆ ಬೆಳೆ ಅಲ್ಲವೇ? ದೇವರ ಕಣ್ಣಿನಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ.

ವೃದ್ಧ ತಂದೆಗೆ ಚಿಪ್ಪಿಯಲ್ಲಿ ನೀರು ಕೊಟ್ಟಾಗ, ಪುಟ್ಟ ಮಗು ಹೇಳಿದನಂತೆ, ಇದನ್ನು ತೆಗೆದಿಡಿ ಅಪ್ಪ, ಮುಂದೆ ನೀವು ಮುದುಕ ಆದಾಗ ಬೇಕಲ್ಲ ನೀರು ಕೊಡಲು ಎಂಬುದಾಗಿ. ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿದರೆ, ಮುಂದೆ ಬದುಕಿನಲ್ಲಿ ಅಳವಡಿಸಿ ಜಾಣ ಮಕ್ಕಳಾಗಬಹುದು.

-ರತ್ನಾ .ಕೆ.ಭಟ್ ತಲಂಜೇರಿ