ಗಾಯದ ಮೇಲೆ ಬರೆ

ಗಾಯದ ಮೇಲೆ ಬರೆ

ಬರಹ

ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕಾದ್ದು ನ್ಯಾಯ. ಆದರೆ
ಬೆಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ (ಬೆ.ಅ.ವಿ.ನಿ.) ಕಥೆಯೆ
ಬೇರೆಯಾಗಿದೆ. ಬೆ.ಅ.ವಿ.ನಿ. ದ ಕಾರ್ಯ ಶುರುವಾದಾಗ ದೇವನಹಳ್ಳಿಯ ರೈತರಿಗೆ
ಕೆಲಸ ನೀಡುವುದಾಗಿ ಬರವಸೆ ಇತ್ತು, ಅವರಿಂದ ಬೆ.ಅ.ವಿ.ನಿ.ಕ್ಕೆ ಜಮೀನನ್ನು
ಬಿ.ಐ.ಏ.ಎಲ್. ಪಡೆದು ಕೊಂಡಿತು. ಆದರೆ, ಬರವಸೆಯನ್ನು ಹುಸಿ ಗೊಳಿಸಿ,
ಈಗ ಬೆ.ಅ.ವಿ.ನಿ. ದಲ್ಲಿ ಹೊರ ರಾಜ್ಯದವರಿಗೆ ಕೆಲಸನೀಡಲಾಗುತ್ತಿದೆ.
ಇದೇ ವಿಷಯಕ್ಕಗಿ ಜನವರಿ ೩೦ತ್ತ ರಂದು ಕ.ರ.ವೇ. ಪ್ರತಿಭಟಿಸಿತು.

ಪ್ರತಿಭಟನೆಯಲ್ಲಿ ಮಂಡಿಸಿದ ಮುಖ್ಯ ಅಂಶಗಳು ಕೆಳಗಿವೆ.

೧. ಬೆ.ಅ.ವಿ.ನಿ.ದಲ್ಲಿ ಕೆಳಸ್ತರದ ಉದ್ಯೋಗದಿಂದ್ ಹಿಡಿದು ಮೇಲ್ಪಂಕ್ತಿಯ ಎಲ್ಲ ಉದ್ಯೋಗಗಳನ್ನು ಕಡ್ದಾಯವಾಗಿ ಕನ್ನಡಿಗರಿಗೆ ನೀಡಬೇಕು.

೨. ಬೆ.ಅ.ವಿ.ನಿ. ಮುಖ್ಯದ್ವಾರ. ನಾಮಫಲಕ, ಜಾಹಿರಾತು ಫಲಕ ಸೇರಿದಂತೆ ಎಲ್ಲ ಹಂತಗಳಲ್ಲು ಕನ್ನಡ ನುಡಿಯನ್ನ ಕಡ್ಡಾಯವಾಗಿ ಬಳಸಿವಂತಹ ಮತ್ತು ಗ್ರಾಹಕರೊಂದಿಗೆ ಕನ್ನಡದಲ್ಲೆ ವ್ಯವಹರಿಸುವಂತಹ ವ್ಯವಸ್ತೆ ಮಾಡಿ ರಾಜ್ಯದ ಇತಿಹಾಸ ಸಂಸ್ಕೃತಿಯನ್ನು ಬಿಂಬಿಸುವ ವಾತಾವರಣವನ್ನು ನಿರ್ಮಾಣ ಮಾಡಿ, ಜಗತ್ತಿನ ಜನರಿಗೆ ಸಮಗ್ರ ಕರ್ನಾಟಕದ ಪರಿಚಯ ಮಾಡಿಕೊಡಬೇಕು.

೩. ಬಿ.ಐ.ಏ.ಎಲ್. ನ ನಿರ್ದೇಶಕ ಮಂಡಲಿಯಲ್ಲಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ಬಿ. ಮಹಿಷಿ ಹಾಗು ಮೂಲಭೂತ ಸೌಕರ್ಯಗಳ ಇಲಾಖೆಯ ಪ್ರಧಾನ ಕಾರ್ಯದಶಿ ವಿ.ಪಿ. ಬಳಿಗಾರ್ ರವರುಗಳು ನಮ್ಮ ಸಂಘಟನೆಯ ನಾಡಪರ ಉದ್ಧೇಶಗಳನ್ನು ಸಂಭಂಧಪಟ್ಟವರಿಗೆ ಮನವರಿಕೆ ಮಾಡಿಕೊಟ್ಟು, ಕೇಂದ್ರ ಸರ್ಕಾರಕ್ಕೆ ವರದಿ ನೀಡಿ ಕನ್ನಡಿಗರ ಹಿತಾಸಕ್ತಿಯನ್ನು ಕಾಪಾಡಬೇಕು.

೪. ಯಾವುದೇ ಶರತ್ ಇಲ್ಲದೆ ಬೆ.ಅ.ವಿ.ನಿ.ಕ್ಕೆ ಭೂಮಿ ನೀಡಿದ ದೇವನಹಳ್ಳಿ ತಾಲೂಕಿನ ಸುಮಾರು ೩೦೦೦ ಕ್ಕು ಹೆಚ್ಚು ರೈತ ಕುಟುಂಬದ ಸದಸ್ಯರುಗಳ ಮಕ್ಕಳಿಗೆ, ಅವರವರ ಅರ್ಹತೆ ಅನುಸಾರವಾಗಿ ಬರವಸೆ ನೀಡಿದಂತೆ ಕಡ್ಡಾಯವಾಗಿ ಉದ್ಯೋಗ ನೀಡಬೇಕು.

೫. ದೇವನಹಳ್ಲಿ ಭಾಗವನ್ನು ಕಟ್ಟಿ, ಬೆಳೆಸಿ, ಆಳಿದ ಕೆಂಪೆಗೌಡರ ಹೆಸರನ್ನು ಬೆ.ಅ.ವಿ.ನಿ. ಕ್ಕೆ ಇಡಬೇಕು.
ಪ್ರತಿಭಟನೆಯ ಬಗ್ಗೆ ಓದಲಿ http://karave.blogspot.com/2008/01/blog-post_31.html

ನೋಡಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet