ಗಾಳಿ ಮಾತು By shekarsss on Mon, 12/24/2007 - 11:54 ಬರಹ ಗಾಳಿ ಮಾತು ಕಿವಿಗೆ ಬಿದ್ದು ಎಬ್ಬಿಸಿದೆ ಬಿರುಗಾಳಿ ಬೀಸಿ ಬೆಂಕಿಯ ಬಲೆ ಚಿತ್ತವ ಹೂತು ಕ್ರೋಧವ ಹೊತ್ತು ಮತಿಗೆಟ್ಟ ಗೂಳಿ ಸುತ್ತುವ ಸುಂಟರಗಾಳಿ ಎಲ್ಲೆಡೆ ಕಗ್ಗತ್ತಲು ಕವಿದು ಕಳೆದು ಹೋಗುವ ಮುನ್ನ ಕಣ್ತೆರೆದು ಒಂದು ಕ್ಷಣ ಕಾಣೋ ಕನ್ನಡಿ ಜಾಣ