"ಗಿಡಮೂಲಿಕೆಗಳ ಅಪೂರ್ವ ತಪೋವನ"- ಪ. ರಾಮಕೃಷ್ಣ ಶಾಸ್ತ್ರಿ.
ನೀವು ಓದಲೇಬೇಕಾದ ಪುಟಗಳು :
"ಗಿಡಮೂಲಿಕೆಗಳ ಅಪೂರ್ವ ತಪೋವನ"
ಪ. ರಾಮಕೃಷ್ಣ ಶಾಸ್ತ್ರಿ.
ತರಂಗ ೫, ಜುಲೈ, ೨೦೦೭ [ಪುಟ ೪೭.]
ಉತ್ತರಕನ್ನಡದ 'ವೇದಶ್ರವಶರ್ಮ ರ ತೋಟ," ಮೂಲಿಕಾವನ" ವನ್ನು ನೋಡಲು ಅದರ ಸಾರ್ಥಕತೆಯನ್ನು ಅರಿಯಲು ದೇಶ-ವಿದೇಶದ ನಾನಾ ಕಡೆಗಳಿಂದ ಜನ ಬರುತ್ತಿದ್ದಾರೆ. ಶರ್ಮರಿಗೆ ಪಿತ್ರಾರ್ಜಿತವಾಗಿ ೧೧ ಎಕರೆ, ಬರಡು ಭೂಮಿ ಅವರ ಪಾಲಿಗೆ ಬಂದಿತ್ತು. ಅದರ ತುಂಬ ಒರಟು ಕಲ್ಲು ಕಲ್ಲು-ಮುಳ್ಳು. ಆದರೆ ಅವರು ಧ್ರುತಿಗೆಡಲಿಲ್ಲ. ಅದರಲ್ಲಿ ಏನುಮಾಡಬಹುದೆಂದು ಯೋಚಿಸಿ, ಅಲ್ಲೇ ಜಾಜಿ, ಮಲ್ಲಿಗೆ ಗಿಡಗಳನ್ನು ನೆಟ್ಟು ತಮ್ಮ ಮನೆಯದೆ ಆದ ಸೆಗಣಿ ಗೊಬ್ಬರವನ್ನು ಹಾಕಿ ಬೆಳೆಸಿದರು. ಅದು ಚೆನ್ನಾಗಿ ಬೆಳೆದು ಮರಗಟ್ಟಲೆ ಹೂಕೊಟ್ಟಿತಂತೆ. ಅದನ್ನು ಮಾರಿದಾಗ ಸ್ವಲ್ಪ ಹಣವೂ ಬಂತು. ಈ ಆತ್ಮ ವಿಶ್ವಾಸವನ್ನೇ ತಮ್ಮ ಬಂಡವಾಳವನ್ನಾಗಿ ಮಾಡಿಕೊಂಡು, ಅವರು ಔಷದಿ ಗಿಡ-ಮೂಲಿಕೆಗಳನ್ನು ಹುಟ್ಟುಹಾಕಬಾರೆದೇಕೆ ಎಂದು ಯೋಚಿಸಿದರು.
ಅವರಿಗೆ ಸಂಸ್ಕೃತಜ್ಞಾನವಿದ್ದದ್ದು ಕೆಲಸಕ್ಕೆ ಬಂತು. ಇಂಗ್ಲೀಷ್ ಹೆಸರುಗಳು ಮತ್ತು ಅದಕ್ಕೆ ಪೂರೈಕೆಯಾಗಿ ಸಂಸ್ಕೃತದ ಹೆಸರುಗಳು, ಅವುಗಳ ಜಾತಿ, ಗುಣಧರ್ಮಗಳು ಅವರ ನೆನಪಿನಲ್ಲಿ ಸದಾ ಇರುತ್ತವೆ. ಹಾಗೆಯೇ ಔಷಧಿತಯಾರಿಕೆಯ ಸಾಧ್ಯತೆಗಳ ಬಗ್ಗೆ ಸಾಕಷ್ಟು ಗ್ರಂಥರಚನೆಯನ್ನು ಮಾಡಿದ್ದಾರೆ. ಜರ್ಮನರು, ಯೂರೋಪಿಯನ್ನರು ಹೆಚ್ಚಿಗೆ ಇಲ್ಲಿಗೆ ಬಂದು ಗಿಡಮೂಲಿಕೆಗಳ ವಿಶೇಷ ವಿಷಯಗಳನ್ನು ಸಂಗ್ರಹಿಸುತ್ತಾರೆ. ಈ ತೋಟ "ಓಮ್ ಬೀಚಿಗೆ" ಹತ್ತಿರದಲ್ಲಿದೆ. 'ಉಪೋದಿಕಾ,' ಅಂದರೆ ಬಸಳೆಸೊಪ್ಪು. 'ಇದರ ಅದ್ಭುತ ಗುಣವನ್ನು ನಾವು ಅರಿಯಬೇಕು', ಎನ್ನುತ್ತಾರೆ, ಶರ್ಮ.
ಇನ್ನೊಂದು, ಬಿಹಾರದಿಂದ ತಂದು ಬೆಳೆಸಿದ "ಮಹಾನೊವು ನಿವಾರಕ ಗುಗ್ಗುಳ", ಅವರ ತೋಟದಲ್ಲಿ ಲಭ್ಯ. "ಚ್ಯವನಪ್ರಾಶ", "ಬಾಲಾಮೃತ" ದಂತಹ ಲೇಹವನ್ನೂ ಅವರು ತಯಾರಿಸುತ್ತಾರೆ. ಅವರು ಮಾಡುವ 'ಪವನ್ ಸಿರಪ್,' ನೆಲ್ಲಿಕಾಯಿನಿಂದ ಮಾಡಿದ್ದು. ಕಾಮಾಲೆ ರೋಗಕ್ಕೆ ಸಿದ್ಧೌಷಧ. 'ಕಾಜುತಕಾಸವ', ಕೆಮ್ಮು ನೆಗಡಿಗೆ ಉತ್ತಮವಾಗಿದೆ.
ಇನ್ನೊಂದು ವಿಶೇಷವೆಂದರೆ ಕನ್ನಡದ 'ಅ' ಕಾರಾಕ್ಷರಗಳಿಂದ ಔಷಧಿ ಗಿಡಗಳ ನಾಟಿಮಾಡಿದ್ದಾರೆ. ಉದಾ : ಅಂಕೋಲೆ, ಅಕ್ಕಲ ಖಾರ, ಅಕ್ಕಿ ಅರಕಲು, ಅಳಲೇಕಾಯಿ, ಅಮೃತಬಳ್ಳಿ, ಅರತಿ ಕುಂಡಿಣಿ, ಇಂದ್ರವಲ್ಲಿ, ಇಸಮುಂಗಲಿ, ಉಮ್ಮತ್ತ, ಉರಸೊಣಿಗೆ, ಹೀಗೆ ಹತ್ತಾರು ಶುಂಠಿ ತುಳಸಿಗಳಿವೆ. ಕಹಿಯಿಂದ ಮಾಡಿದ ಕಂಚಿ, ಪಡುವಲ, ಬೇವು, ಜೀರಿಗೆ, ಕಹಿಸೌತೆ, [ಹಾಗಲಕಾಯಿ ?] ಗಂಧ, ಚಂದನಗಳಿವೆ. 'ಕ್ಷೀರವಿದಾರಿ' ಎಂಬ ಕಾಡುಗೆಣಸಿದೆ. ಚೆಲ್ಲುಮರದಿಂದ ರಾಡಿನೀರನ್ನು ಶುದ್ಧಗೊಳಿಸಬಹುದು. ನಾವು ಕೇಳರಿಯದ , ಸುಮಾರು ೩೦೦-೪೦೦ ಅಪರೂಪದ ಔಷಧಿ ತಳಿಗಳು ಅವರ ತೋಟದಲ್ಲಿವೆ.
ಹರ್ಬಲ್ ಜೇನು :
ಒಮ್ಮೆ, ಆಂಗ್ಲಪತ್ರಿಕೆಯೊಂದರಲ್ಲಿ ಪ್ರಕಟವಾದ ವೈದ್ಯಕೀಯಲೇಖನವನ್ನು ಶರ್ಮರು ಓದಿದರು. ಮಳೆಗಾಲದಲ್ಲಿ ಜೇನುನೊಣಗಳು ಹೆಚ್ಚಿಗೆ ಹೊರಗೆ ಹೋಗಲು ಇಷ್ಟ ಪಡುವುದಿಲ್ಲ. ಬೆಚ್ಚಗೆ ಗೂಡಿನಲ್ಲಿ ಕೂಡಲು ಇಚ್ಛಿಸುತ್ತವೆ. ಅವಕ್ಕೆ, ಔಷಧೀಯ ಕಷಾಯಕ್ಕೆ ಸಕ್ಕರೆ ಬೆರೆಸಿ, ಕುಡಿಯಲು ಕೊಡುವುದು. ಅದರಿಂದ ತಯಾರಾದ ಜೇನುತುಪ್ಪದಿಂದ ಹೃದಯಸಂಬಂಧೀ ಕಾಹಿಲೆಗಳು ಮಾಯವಾಗುತ್ತವೆ. ಬ್ರಾಹ್ಮೀರಸವನ್ನು ಸೇವಿಸಿ ಜೇನುನೊಣಗಳು ಕೊಡುವ ಜೇನುತುಪ್ಪ ಮಕ್ಕಳ ಜ್ಞಾಪಕಶಕ್ತಿಯನ್ನು ವೃದ್ಧಿಸುತ್ತವೆ. ಶೀತ, ಕೆಮ್ಮುಗಳನ್ನು ನಿವಾರಿಸುತ್ತದೆ, ಎಂಬುದನ್ನು ತಾವು ಪ್ರಯೋಗದಿಂದ ಕಂಡುಕೊಂಡರಂತೆ.
ಉತ್ತರ ಕನ್ನಡ ಜಿಲ್ಲೆಯ ವೇದಶ್ರವ ಶರ್ಮರು, ಒಬ್ಬ ಮಾದರಿಕೃಷಿಕ ಮತ್ತು "ದೇಸೀಔಷಧ" ಪಂಡಿತರು. ಅವರಿಗೆ ಸರಿಯಾದ ಆರ್ಥಿಕನೆರೆವು ಸಿಕ್ಕರೆ, ನಮ್ಮ ನಾಡಿಗೆ, ಆಯುರ್ವೇದಮೂಲದ ಹಲವಾರು ಔಷಧಿಗಳನ್ನು ತಯಾರಿಸುವುದರ ಮೂಲಕ ದೇಶದ ಯುವ ಜನರ ಆರೋಗ್ಯವನ್ನು ಸುಧಾರಿಸಿ ಕಾಪಾಡುವುದರಲ್ಲಿ ಅವರು ತಮ್ಮ ಅಭಯಹಸ್ತವನ್ನು ಕೊಡಲು ಮುಂದೆ ಬರುವುದರಲ್ಲಿ ಸಂದೇಹವಿಲ್ಲ.