ಗೀತಾಮೃತ - 11

ಗೀತಾಮೃತ - 11

*ಅಧ್ಯಾಯ ೪*

       *ಸ ಏವಾಯಂ ಮಯಾ ತೇದ್ಯ ಯೋಗ: ಪ್ರೋಕ್ತ: ಪುರಾತನ:/*

*ಭಕ್ತೋಸಿ ಮೇ ಸಖಾ ಚೇತಿ ರಹಸ್ಯಂ ಹ್ಯೇತದುತ್ತಮಮ್//೩//*

   ನೀನು ನನ್ನ ಭಕ್ತನೂ, ಪ್ರಿಯಸಖನೂ ಆಗಿರುವೆ,ಆದ್ದರಿಂದ ಅದೇ ಈ ಪುರಾತನವಾದ ಯೋಗವನ್ನು ಇಂದು ನಾನು ನಿನಗೆ ಹೇಳಿದ್ದೇನೆ; ಏಕೆಂದರೆ ಇದು ಬಹಳ ಉತ್ತಮವಾದ ರಹಸ್ಯವಾಗಿದೆ ಅರ್ಥಾತ್ ಗುಪ್ತವಾಗಿಡಲು ಯೋಗ್ಯವಾದ ವಿಷಯವಾಗಿದೆ.

      *ಅರ್ಜುನ ಉವಾಷ*

*ಆಪರಂ ಭವತೋ ಜನ್ಮ ಪರಂ ಜನ್ಮ ವಿವಸ್ವತ:/*

*ಕಥಮೇತದ್ವಿಜಾನೀಯಾಂ ತ್ವಮದೌ ಪ್ರೋಕ್ತವಾನಿತಿ//೪//*

      ಅರ್ಜುನನು ಹೇಳಿದನು_

 ನಿನ್ನ ಜನ್ಮವಾದರೋ ಅರ್ವಾಚೀನವಾದುದು ಅರ್ಥಾತ್ ಇತ್ತೀಚಿನದ್ದಾಗಿದೆ ಮತ್ತು ಸೂರ್ಯನ ಜನ್ಮವು ಬಹಳ ಪ್ರಾಚೀನವಾದುದು.ಅರ್ಥಾತ್ ಕಲ್ಪದ ಆದಿಯಲ್ಲಿ ಆಗಿಹೋಗಿತ್ತು. ಹಾಗಿರುವಾಗ ಕಲ್ಪದ ಆದಿಯಲ್ಲಿ ನೀನೇ ಸೂರ್ಯನಿಗೆ ಈ ಯೋಗವನ್ನು ಹೇಳಿದ್ದೆಯೆಂದು ನಾನು ಹೇಗೆ ತಿಳಿದುಕೊಳ್ಳಲಿ?

***

*ಶ್ರೀ ಭಗವಾನುವಾಚ*

      *ಬಹೂನಿ ಮೇ ವ್ಯತೀತಾನಿ ಜನ್ಮಾನಿ ತವ ಚಾರ್ಜುನ/*

*ತಾನ್ಯಹಂ ವೇದ ಸರ್ವಾಣಿ ನ ತ್ವಂ ವೇತ್ಥ ಪರಂತಪ//೫//*

   ಶ್ರೀ ಭಗವಂತನು ಹೇಳಿದನು _ 

  ಹೇ ಪರಂತಪ ಅರ್ಜುನನೇ ! ನನ್ನ ಮತ್ತು ನಿನ್ನ ಅನೇಕ ಜನ್ಗಗಳು ಆಗಿ ಹೋಗಿವೆ.ಅವೆಲ್ಲಗಳ ಅರಿವು ನಿನಗಿಲ್ಲ,ನನಗಿದೆ.

        *ಅಜೋಪಿ ಸನ್ನವ್ಯಯಾತ್ಮಾ ಭೂತಾನಾಮೀಶ್ವರೋಪಿ ಸನ್/* 

*ಪ್ರಕೃತಿ ಸ್ವಾಮಧಿಷ್ಠಾಯ ಸಂಭವಾಮ್ಯಾತ್ಮಮಾಯಾಯಾ//೬//*

         ನಾನು ಅಜನ್ಮನು ಮತ್ತು ಅವಿನಾಶಿ ಸ್ವರೂಪನಾಗಿದ್ದರೂ ಸಮಸ್ತ ಪ್ರಾಣಿಗಳ ಈಶ್ವರನಾಗಿದ್ದರೂ ಸಹ ನನ್ನ ಪ್ರಕೃತಿಯನ್ನು ಅಧೀನವಾಗಿಸಿಕೊಂಡು ನನ್ನ ಯೋಗ ಮಾಯೆಯಿಂದ ಪ್ರಕಟವಾಗುತ್ತೇನೆ.

***

  *ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ/*

*ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್//೭//*

ಹೇ ಭರತವಂಶೀಯ ಅರ್ಜುನನೇ ! ಯಾವ ಯಾವ ಕಾಲದಲ್ಲಿ ಧರ್ಮದ ಹಾನಿ ಮತ್ತು ಅಧರ್ಮದ ವೃದ್ಧಿಯಾಗುತ್ತದೆಯೋ,ಆವಾಗಲೆಲ್ಲಾ ನಾನು ನನ್ನ ಸ್ವರೂಪವನ್ನು ರಚಿಸುತ್ತೇನೆ,ಅರ್ಥಾತ್ ಸಾಕಾರರೂಪದಿಂದ ಜನರ ಮುಂದೆ ಪ್ರಕಟನಾಗುತ್ತೇನೆ.

*ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್/*

*ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ//೮//*

   ಸಾಧುಪುರುಷರನ್ನು ಉದ್ಧಾರಮಾಡುವುದಕ್ಕಾಗಿಯೂ, ಪಾಪಕರ್ಮ ಮಾಡುವವರನ್ನು ವಿನಾಶಪಡಿಸಲಿಕ್ಕಾಗಿಯೂ ಮತ್ತು ಧರ್ಮವನ್ನು ಚೆನ್ನಾಗಿ ಸ್ಥಾಪಿಸುವುದಕ್ಕಾಗಿಯೂ ಮತ್ತು ಧರ್ಮವನ್ನು ಚೆನ್ನಾಗಿ ಸ್ಥಾಪಿಸುವುದಕ್ಕಾಗಿಯೂ ನಾನು ಯುಗಯುಗಗಳಲ್ಲಿ ಪ್ರಕಟವಾಗುತ್ತೇನೆ.

***

*ಯೇ ಯಥಾಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಮ್/*

*ಮಮ ವರ್ತ್ಮಾನುವರ್ತಂತೇ ಮನುಷ್ಯಾ: ಪಾರ್ಥ ಸರ್ವಶ://೧೧//*

ಹೇ ಅರ್ಜುನನೇ!, ಯಾವ ಭಕ್ತರು ನನ್ನನ್ನು ಯಾವ ಭಾವದಿಂದ ಭಜಿಸುತ್ತಾರೋ ಅವರನ್ನು ನಾನು ಕೂಡ ಅದೇ ಭಾವದಿಂದ ಭಜಿಸುತ್ತೇನೆ; ಏಕೆಂದರೆ ಮನುಷ್ಯರೆಲ್ಲರೂ ಎಲ್ಲ ಪ್ರಕಾರದಿಂದ ನನ್ನ ಮಾರ್ಗವನ್ನೇ ಅನುಸರಿಸುತ್ತಾರೆ.

*ಕಾಂಕ್ಷತ: ಕರ್ಮಣಾಂ ಸಿದ್ಧಿಂ ಯಜಂತ ಇಹ ದೇವತಾ:/* *ಕ್ಷಿಪ್ರಂ ಹಿ ಮಾನುಷೇ ಲೋಕೇ ಸಿದ್ಧಿರ್ಭವತಿ ಕರ್ಮಜಾ//೧

***

(ಸಾರ ಸಂಗ್ರಹ) ವಿಜಯಾ ಶೆಟ್ಟಿ, ಸಾಲೆತ್ತೂರು