ಗೀತಾಮೃತ - 17
*ಅಧ್ಯಾಯ ೫*
*ಸ್ಪರ್ಶಾನ್ ಕೃತ್ವಾಬಹಿರ್ಬಾಹ್ಯಾಂಶ್ಚಕ್ಷುಶೈವಾಂತರೇ ಭ್ರುವೋ/*
*ಪ್ರಾಣಾಪಾನೌ ಸಮೌ ಕೃತ್ವಾನಾಸಾಭ್ಯಂತರಚಾರಿಣೌ//೨೭//*
ಹೊರಗಿನ ವಿಷಯ ಭೋಗಗಳನ್ನು ಚಿಂತಿಸದೆ ಇದ್ದು, ಹೊರಗೆಯೇ ತ್ಯಜಿಸಿ ಮತ್ತು ಕಣ್ಣುಗಳ ದೃಷ್ಟಿ ಯನ್ನು ಭ್ರೂಮಧ್ಯದಲ್ಲಿ ಸ್ಥಿರವಾಗಿಸಿ ಹಾಗೂ ಮೂಗಿನಲ್ಲಿ ಸಂಚರಿಸುವ ಪ್ರಾಣ ಮತ್ತು ಅಪಾನ ವಾಯುವನ್ನು ಸಮವಾಗಿಸಿರಬೇಕು.
*ಯತೇಂದ್ರಿಯಮನೋಬುದ್ಧಿರ್ಮನಿರ್ಮೋಕ್ಷ ಪರಾಯಣ:/*
*ವಿಗತೇಚ್ಛಾ ಭಯ ಕ್ರೋಧೋ ಯ: ಸದಾ ಮುಕ್ತ ಏವ ಸ://೨೮//*
ಯಾರ ಇಂದ್ರಿಯಗಳು,ಮನಸ್ಸು ಮತ್ತು ಬುದ್ಧಿ ಗೆಲ್ಲಲ್ಪಟ್ಟಿದೆಯೋ ಅಂತಹ ಯಾವ ಮೋಕ್ಷಪರಾಯಣನಾದ ಮುನಿಯು ಇಚ್ಛೆ,ಭಯ ಮತ್ತು ಕ್ರೋಧಗಳಿಂದ ರಹಿತನಾಗಿದ್ದಾನೆಯೋ ಅವನು ಸದಾ ಮುಕ್ತನೇ ಆಗಿದ್ದಾನೆ.
***
*ಭೋಕ್ತಾರಂ ಯಜ್ಞತಪಸಾಂ ಸರ್ವಲೋಕಮಹೇಶ್ವರಮ್/*
*ಸುಹೃದಂ ಸರ್ವಭೂತಾನಾಂ ಜ್ಞಾತ್ವಾ ಮಾಂ ಶಾಂತಿಮೃಚ್ಛತಿ//೨೯//*
ನನ್ನ ಭಕ್ತರು ನನ್ನನ್ನು ಎಲ್ಲ ಯಜ್ಞ ಮತ್ತು ತಪಸ್ಸುಗಳನ್ನು ಭೋಗಿಸುವವನೂ,ಸಂಪೂರ್ಣ ಲೋಕಗಳ ಒಡೆಯರಿಗೂ ಒಡೆಯನೂ ಹಾಗೂ ಸಂಪೂರ್ಣ ಪ್ರಾಣಿಗಳ ಸುಹೃದನೂ ಅರ್ಥಾತ್ ಸ್ವಾರ್ಥ ರಹಿತ ದಯಾಳುವೂ ಮತ್ತು ಪ್ರೇಮಿಯೂ ಎಂದು ತತ್ವದಿಂದ ತಿಳಿದುಕೊಂಡು ಶಾಂತಿಯನ್ನು ಪಡೆಯುತ್ತಾನೆ.
*ಓಂ ತತ್ಸ ದಿತಿ ಶ್ರೀ ಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀ ಕೃಷ್ಣಾರ್ಜುನ ಸಂವಾದೇ ಕರ್ಮಸಂನ್ಯಾಸಯೋಗೋನಾಮ ಪಂಚದೋಧ್ಯಾಯ://೫//*
***
*//ಅಥ ಷಷ್ಠ್ಯೋಧ್ಯಾಯ://*
*ಆತ್ಮಸಂಯಮಯೋಗವು*
*ಶ್ರೀಭಗವಾನುವಾಚ*
*ಅನಾಶ್ರಿತ: ಕರ್ಮಫಲಂ ಕಾರ್ಯಂ ಕರ್ಮ ಕರೋತಿ ಯ:/*
*ಸ ಸನ್ಯಾಸೀ ಚ ಯೋಗೀ ಚ ನ ನಿರಗ್ನಿರ್ನ ಚಾಕ್ರಿಯ://೧//*
ಶ್ರೀ ಭಗವಂತನು ಹೇಳಿದನು _
ಯಾವ ಪುರುಷನು ಕರ್ಮಫಲದ ಆಶ್ರಯವನ್ನು ಪಡೆಯದೆ ಕರ್ತವ್ಯ ಕರ್ಮವನ್ನು ಮಾಡುತ್ತಾನೋ ಅವನು ಸಂನ್ಯಾಸಿ ಮತ್ತು ಯೋಗಿಯಾಗಿದ್ದಾನೆ ; ಮತ್ತು ಕೇವಲ ಅಗ್ನಿಯನ್ನು ತ್ಯಜಿಸಿದವನು ಸನ್ಯಾಸಿಯಲ್ಲ ಹಾಗೂ ಕೇವಲ ಕ್ರಿಯೆಗಳನ್ನು ತ್ಯಜಿಸಿದವನೂ ಯೋಗಿಯಲ್ಲ.
*ಯಂ ಸಂನ್ಯಾಸಮಿತಿ ಪ್ರಾಹುರ್ಯೋಗಂ ತಂ ವಿದ್ಧಿ ಪಾಂಡವ /*
*ನ ಹ್ಯಸಂನ್ಯಸ್ತಸಂಕಲ್ಪೋ ಯೋಗೀ ಭವತಿ ಕಶ್ಚನ//೨//*
ಹೇ ಅರ್ಜುನಾ! ಯಾವುದನ್ನು ಸಂನ್ಯಾಸವೆಂಬುದಾಗಿ ಹೇಳುತ್ತಾರೆಯೋ ಅದನ್ನೇ ನೀನು ಯೋಗವೆಂದು ತಿಳಿ.ಏಕೆಂದರೆ ಸಂಕಲ್ಪಗಳ ತ್ಯಾಗವನ್ನು ಮಾಡದಿರುವ ಯಾವ ಪುರುಷನೂ ಕೂಡ ಯೋಗಿಯಾಗುವುದಿಲ್ಲ.
***
*ಆರುರುಕ್ಷೋರ್ಮುನೇರ್ಯೋಗಂ ಕರ್ಮ ಕಾರಣಮುಚ್ಯತೇ /*
*ಯೋಗಾರೂಢಸ್ಯ ತಸ್ಮೈವ ಶಮ: ಕಾರಣಮುಚ್ಯತೇ//೩//*
ಯೋಗದಲ್ಲಿ ಆರೂಢವಾಗಬೇಕೆಂಬ ಇಚ್ಛೆಯುಳ್ಳ ಮನನಶೀಲನಾದ ಪುರುಷನಿಗೆ ನಿಷ್ಕಾಮಭಾವದಿಂದ ಕರ್ಮ ಮಾಡುವುದೇ ಯೋಗದ ಪ್ರಾಪ್ತಿಯಲ್ಲಿ ಕಾರಣವೆಂದು ಹೇಳಲಾಗುತ್ತದೆ ಮತ್ತು ಯೋಗಾರೂಢನಾದ ನಂತರ ಆ ಯೋಗಾರೂಢ ಪುರುಷನಿಗೆ ಯಾವುದು ಸರ್ವ ಸಂಕಲ್ಪಗಳ ಅಭಾವವಿದೆಯೋ ಅದೇ ಅವನ ಶ್ರೇಯಸ್ಸಿಗೆ ಕಾರಣವೆಂದು ಹೇಳಲಾಗುತ್ತದೆ.
*ಯದಾ ಹಿ ನೇಂದ್ರಿಯಾರ್ಥೇಷು ನ ಕರ್ಮಸ್ವನುಷಜ್ಜತೇ/*
*ಸರ್ವಸಂಕಲ್ಪ ಸಂನ್ಯಾಸೀ ಯೋಗಾರೂಢಸ್ತದೋಚ್ಯತೇ//೪//*
ಯಾವ ಕಾಲದಲ್ಲಿ ಇಂದ್ರಿಯಗಳ ಭೋಗಗಳಲ್ಲಿ ಮತ್ತು ಕರ್ಮಗಳಲ್ಲಿಯೂ ಆಸಕ್ತನಾಗುವುದಿಲ್ಲವೋ ಆ ಕಾಲದಲ್ಲಿ ಸರ್ವ ಸಂಕಲ್ಪಗಳನ್ನು ತ್ಯಾಗಮಾಡಿದ ಪುರುಷನು ಯೋಗಾರೂಢನೆಂದು ಹೇಳಲ್ಪಡುತ್ತಾನೆ.
***
-ವಿಜಯಾ ಶೆಟ್ಟಿ ಸಾಲೆತ್ತೂರು (ಸಾರ ಸಂಗ್ರಹ)