ಗೀತಾಮೃತ - 18

ಗೀತಾಮೃತ - 18

*ಅಧ್ಯಾಯ ೬*

     *ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್/*

*ಆತ್ಮೈವ  ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನ://೫//*

  ತನ್ನ ಮೂಲಕ ತನ್ನನ್ನು ಸಂಸಾರಸಾಗರದಿಂದ ಉದ್ಧಾರ ಮಾಡಿಕೊಳ್ಳಲಿ ಮತ್ತು ತನ್ನನ್ನು ಅಧೋಗತಿಗೆ ಕೊಂಡೊಯ್ಯದಿರಲಿ.ಏಕೆಂದರೆ ಈ ಮನುಷ್ಯನು ತನ್ನನ್ನು ತಾನೇ ಮಿತ್ರನೂ ,ಮತ್ತು ತನಗೆ ತಾನೇ ಶತ್ರುವೂ ಆಗಿದ್ದಾನೆ.

     *ಬಂಧುರಾತ್ಮಾತ್ಮನಸ್ತಸ್ಯ ಯೇನಾತ್ಮೈವಾತ್ಮನಾ ಜಿತ:/*

*ಅನಾತ್ಮನಸ್ತು ಶತ್ರುತ್ವೇ ವರ್ತೇತಾತ್ಮೈವ ಶತ್ರುವತ್//೬//*

   ಯಾವ ಜೀವಾತ್ಮನ ಮೂಲಕ ಮನಸ್ಸು ಮತ್ತು ಇಂದ್ರಿಯಗಳ ಸಹಿತವಾದ ಶರೀರವು ಗೆಲ್ಲಲ್ಪಟ್ಟಿದೆಯೋ ಆ ಜೀವಾತ್ಮನಿಗಾದರೋ ಅವನು ತನಗೆ  ತಾನೇ ಮಿತ್ರನಾಗಿರುತ್ತಾನೆ ಮತ್ತು ಯಾರ ಮೂಲಕ ಮನಸ್ಸು ಹಾಗೂ ಇಂದ್ರಿಯಗಳ ಸಹಿತವಾದ ಶರೀರವು ಗೆಲ್ಲಲ್ಪಟ್ಟಿಲ್ಲವೋ ಅವನಿಗೆ ಅವನು ಶತ್ರುವಿನಂತೆ ಶತ್ರುತ್ವದಲ್ಲಿ ವರ್ತಿಸುತ್ತಾನೆ.

***

*ಜಿತಾತ್ಮನ: ಪ್ರಶಾಂತಸ್ಯ ಪರಮಾತ್ಮಾ ಸಮಾಹಿತ:/*

*ಶೀತೋಷ್ಣಸುಖದು:ಖೇಷು ತಥಾ ಮಾನಾಪಮಾನಯೋ://೭//*

   ಶೀತ ಉಷ್ಣ ಮತ್ತು ಸುಖ ದು:ಖಾದಿಗಳಲ್ಲಿ ಹಾಗೂ ಮಾನ ಅಪಮಾನಗಳಲ್ಲಿ ಯಾರ ಅಂತ:ಕರಣದ ವೃತ್ತಿಗಳು ಚೆನ್ನಾಗಿ ಶಾಂತವಾಗಿವೆಯೋ ಅಂತಹ ಆತ್ಮವನ್ನು ಸ್ವಾಧೀನಪಡಿಸಿಕೊಂಡ ಪುರುಷರ ಜ್ಞಾನದಲ್ಲಿ ಸಚ್ಚಿದಾನಂದ ಪರಮಾತ್ಮನು ಸಮ್ಯಕ್ ಪ್ರಕಾರದಿಂದ ಸ್ಥಿತನಾಗಿರುತ್ತಾನೆ ಅರ್ಥಾತ್ ಅವನ ಜ್ಞಾನದಲ್ಲಿ ಪರಮಾತ್ಮನಲ್ಲದೇ ಬೇರೇನೂ ಇಲ್ಲವೇ ಇಲ್ಲ.

     *ಜ್ಞಾನ ವಿಜ್ಞಾನ ತೃಪ್ತಾತ್ಮಾ ಕೂಟಸ್ಥೋ ವಿಜಿತೇಂದ್ರಿಯ:/*

*ಯುಕ್ತ ಇತ್ಯುಚ್ಚ್ಯತೇ ಯೋಗೀ ಸಮಲೋಷ್ಟಾಶ್ಮಕಾಂಚನ://೮//*

   ಯಾರ ಅಂತ:ಕರಣವು ಜ್ಞಾನವಿಜ್ಞಾನದಿಂ ತೃಪ್ತವಾಗಿದೆಯೋ ಯಾರ ಸ್ಥಿತಿಯು ವಿಕಾರರಹಿತವಾಗಿದೆಯೋ ,ಯಾರ ಇಂದ್ರಿಯಗಳು ಪೂರ್ಣವಾಗಿ ಗೆಲ್ಲಲ್ಪಟ್ಟಿವೆಯೋ ಮತ್ತು ಯಾರಿಗೆ ಕಲ್ಲು,ಕಣ್ಣು ಮತ್ತು ಚಿನ್ನ ಸಮಾನವಾಗಿವೆಯೋ ಆ ಯೋಗಿಯು ಯುಕ್ತನು ಅರ್ಥಾತ್ ಭಗವತ್ಪ್ರಾಪ್ತನಾಗಿದ್ದಾನೆಂದು ಹೇಳಲಾಗುತ್ತದೆ.

***

*ಸುಹೃನ್ಮಿತ್ರಾರ್ಯುದಾಸೀನಮಧ್ಯಸ್ಥದ್ವೇಷ್ಯಬಂಧುಷು/*

*ಸಾಧುಷ್ವಪಿ ಚ ಪಾಪೇಷು ಸಮಬುದ್ಧಿರ್ವಿಶಷ್ಯತೇ//೯//*

      ಸಹೃದಯರು,ಮಿತ್ರರು,ವೈರಿಗಳು,ಉದಾಸೀನರು,ಮಧ್ಯಸ್ಥರು,ಧ್ವೇಷ ಪಾತ್ರನಾಗುವವನು ಮತ್ತು ಬಂಧುಗಡಣದಲ್ಲಿ ಧರ್ಮಾತ್ಮರಲ್ಲಿ ಮತ್ತು ಪಾಪಿಗಳಲ್ಲಿ ಕೂಡ ಸಮಭಾವವನ್ನಿಡುವವನು ಅತ್ಯಂತ ಶ್ರೇಷ್ಠ ನಾಗಿದ್ದಾನೆ.

     *ಯೋಗೀ ಯುಂಜೀತ ಸತತಮಾತ್ಮಾನಂ  ರಹಸಿ ಸ್ಥಿತ: /*

*ಏಕಾಕೀ ಯತಚಿತ್ತಾತ್ಮಾ ನಿರಾಶೀರಪರಿಗ್ರಹ: //೧೦//*

      ಮನಸ್ಸು ಮತ್ತು ಇಂದ್ರಿಯಗಳ ಸಹಿತವಾಗಿ ಶರೀರವನ್ನು ತನ್ನ ವಶದಲ್ಲಿಟ್ಟು ಕೊಂಡವನೂ ,ಆಶಾರಹಿತನೂ ಮತ್ತು ಸಂಗ್ರಹರಹಿತನೂ ಆದ ಯೋಗಿಯು ಒಬ್ಬಂಟಿಗನಾಗಿ ,ಏಕಾಂತಸ್ಥಾನದಲ್ಲಿ ಸ್ಥಿತನಾಗಿ ಆತ್ಮವನ್ನು ನಿರಂತರವಾಗಿ ಪರಮಾತ್ಮನಲ್ಲಿ ತೊಡಗಿಸಬೇಕು.

***

  *ಸಮಂ ಕಾಯಶಿರೋಗ್ರೀವಂ ಧಾರಯನ್ನಚಲಂ ಸ್ಥಿರಂ/*

*ಸಂಪ್ರೇಕ್ಷ್ಯ ನಾಸಿಕಾಗ್ರಂ ಸ್ವ ದಿಶಶ್ಚಾನವಲೋಕಯನ್//೧೩//*

    ಶರೀರ,ತಲೆ ಮತ್ತು ಕುತ್ತಿಗೆಯನ್ನು ನೇರವಾಗಿ ಮತ್ತು ಅಚಲವಾಗಿ ಇಟ್ಟುಕೊಂಡು ಮತ್ತು ಸ್ಥಿರವಾಗಿ ತನ್ನ ಮೂಗಿನ ತುದಿಯಲ್ಲಿ ದೃಷ್ಟಿಯನ್ನು ನಿಲ್ಲಿಸಿ ಬೇರೆ ದಿಕ್ಕುಗಳನ್ನು ನೋಡದೆ_ 

    *ಪ್ರಶಾಂತಾತ್ಮಾ ವಿಗತಭೀರ್ಬ್ರಹ್ಮಚಾರೀ ವೃತೇ ಸ್ಥಿತ: /*

*ಮನ: ಸಂಯಮ್ಯ ಮಚ್ಚಿತ್ತೋ ಯುಕ್ತ ಆಸೀತ ಮತ್ಪರ://೧೪//*

 ಬ್ರಹ್ಮಚಾರಿಯವೃತದಲ್ಲಿ ಸ್ಥಿತನಾಗಿದ್ದು,ಭಯರಹಿತನಾಗಿ,ಪೂರ್ಣವಾಗಿ,ಶಾಂತವಾದ ಅಂತ:ಕರಣವುಳ್ಳ, ಎಚ್ಚರಿಕೆಯುಳ್ಳ ಯೋಗಿಯು ಮನಸ್ಸನ್ನು ತಡೆದುಕೊಂಡು ನನ್ನಲ್ಲಿಯೇ ಚಿತ್ತವುಳ್ಳವನಾಗಿ,ಮತ್ತು ನನ್ನಲ್ಲಿ ಪರಾಯಣನಾಗಿ ಕುಳಿತುಕೊಳ್ಳಬೇಕು.

***

-ವಿಜಯಾ ಶೆಟ್ಟಿ ಸಾಲೆತ್ತೂರು