ಗೀತಾಮೃತ - 19

ಗೀತಾಮೃತ - 19

*ಅಧ್ಯಾಯ  ೬*

       *ಯುಂಜನ್ನೆವಂ ಸದಾತ್ಮಾನಂ ಯೋಗೀ ನಿಯತಮಾನಸ: /*

*ಶಾಂತಂ ನಿರ್ವಾಣಪರಮಾಂ ಮತ್ಸಂಸ್ಥಾಮಧಿಗಚ್ಛತಿ//೧೫//*

    ಮನಸ್ಸನ್ನು ವಶಪಡಿಸಿಕೊಂಡಿರುವ ಯೋಗಿಯು ಈ ಪ್ರಕಾರವಾಗಿ ಆತ್ಮವನ್ನು ಪರಮೇಶ್ವರ ಸ್ವರೂಪನಾದ ನನ್ನಲ್ಲಿ ನಿರಂತರವಾಗಿ ತೊಡಗಿಸುತ್ತ  ತನ್ನಲ್ಲಿರುವ ಪರಮಾನಂದದ ಪರಾಕಾಷ್ಠಾರೂಪಿಯಾದ ಶಾಂತಿಯನ್ನು ಪಡೆಯುತ್ತಾನೆ.

     *ನಾತ್ಯಶ್ನತಸ್ತು ಯೋಗೋಸ್ತಿ ನ ಚೈಕಾಂತಮನಶ್ನತ:/*

*ನ ಚಾತಿಸ್ವಪ್ನಶೀಲಸ್ಯ ಜಾಗ್ರತೋ ನೈವ ಚಾರ್ಜುನ//೧೬//*

       ಹೇ ಅರ್ಜುನಾ! ಈ ಯೋಗವು ಅತಿಯಾಗಿ ತಿನ್ನುವವನಿಗೂ ತಿನ್ನದಿರುವವನಿಗೂ,ತುಂಬಾ ಮಲಗುವ ಸ್ವಭಾವವುಳ್ಳವನಿಗೂ,ಅಥವಾ ಸರ್ವಥಾ ಮಲಗದೇ ಇರುವವನಿಗೂ ಸಿದ್ಧಿಸುವುದಿಲ್ಲ.

***

*ಯುಕ್ತಾಹಾರವಿಹಾರಸ್ಯ ಯಕ್ತಚೇಷ್ಟಸ್ಯ ಕರ್ಮಸು/*

*ಯುಕ್ತಸ್ವಪ್ನಾವಬೋಧಸ್ಯ ಯೋಗೋ ಭವತಿ ದು:ಖಜಾ//೧೭//*

   ದು:ಖಗಳನ್ನು ನಾಶಪಡಿಸುವ ಈ ಯೋಗವಾದರೋ ಯಥಾಯೋಗ್ಯವಾಗಿ ಆಹಾರ ವಿಹಾರ ಮಾಡುವವನಿಗೆ, ಕರ್ಮಗಳಲ್ಲಿ ಯಥಾಯೋಗ್ಯವಾದ ಚೇಷ್ಟೆಮಾಡುವವನಿಗೆ ಮತ್ತು ಯಥಾಯೋಗ್ಯವಾಗಿ ಮಲಗಿ ನಿದ್ರಿಸುವವನಿಗೆ ಹಾಗೂ ಎಚ್ಚರವಾಗಿವವನಿಗೇ ಸಿದ್ಧವಾಗುತ್ತದೆ.

    *ಯದಾ ವಿನಿಯತಂ ಚಿತ್ತಮಾತ್ಮನ್ಯೇವಾವತಿಷ್ಠತೇ/*

*ನಿ:ಸ್ಪೃಹ: ಸರ್ವಕಾಮೇಭ್ಯೋ ಯುಕ್ತ ಇತ್ಯಚ್ಯತೇ ತದಾ//೧೮//*

     ಸಂಪೂರ್ಣ ವಾಗಿ ವಶಪಡಿಸಿಕೊಳ್ಳಲಾದ ಚಿತ್ತವು ಯಾವ ಕಾಲದಲ್ಲಿ ಪರಮಾತ್ಮನಲ್ಲಿಯೇ,ಪೂರ್ಣವಾಗಿ ಸ್ಥಿತವಾಗುತ್ತದೋ, ಆ ಕಾಲದಲ್ಲಿ ಸಂಪೂರ್ಣ ಭೋಗಗಳಲ್ಲಿ ಸ್ಪೃಹಾರರಹಿತನಾದ ಪುರುಷನು ಯೋಗಯುಕ್ತನಾಗಿದ್ದಾನೆಂದು ಹೇಳಲಾಗುತ್ತದೆ.

***

  *ಯಥಾ ದೀಪೋ ನಿವಾಸತ್ಥೋ ನೇಂಗತೇ ಸೋಪಮಾ  ಸ್ಮೃತಾ/*

*ಯೋಗಿಸೋ ಯತಚಿತ್ತಸ್ಯ ಯುಂಜತೋ ಯೋಗಮಾತ್ಮನ://೧೯//*

ಯಾವ ಪ್ರಕಾರವಾಗಿ ವಾಯುರಹಿತ ಸ್ಥಾನದಲ್ಲಿ ಸ್ಥಿತವಾದ ದೀಪವು ಚಲಿಸುವುದಿಲ್ಲವೋ ಅದೇ ರೀತಿಯ ಉಪಮೆಯನ್ನು ಪರಮಾತ್ಮನ ಧ್ಯಾನದಲ್ಲಿ ತೊಡಗಿರುವ ಯೋಗಿಯ ಗೆದ್ದಿರುವ ಚಿತ್ತಕ್ಕೆ ಕೊಡಲಾಗಿದೆ.

    *ಯತ್ರೋಪರಮತೇ ಚಿತ್ತಂ ನಿರುದ್ಧಂ ಯೋಗಸೇವಯಾ/*

*ಯತ್ರ ಚೈವಾತ್ಮನಾತ್ಮಾನಂ ಪಶ್ಯನ್ನಾತ್ಮನಿ ತುಷ್ಯತಿ//೨೦//*

 ಯೋಗಾಭ್ಯಾಸದಿಂದ ವಶಮಾಡಿಕೊಂಡಿರುವ  ಚಿತ್ತವು ಯಾವ ಅವಸ್ಥೆ ಯಲ್ಲಿ ಉಪರತಿ ಉಂಟಾಗುತ್ತದೋ ಮತ್ತು ಯಾವ ಅವಸ್ಥೆ ಯಲ್ಲಿ ಪರಮಾತ್ಮನ ಧ್ಯಾನದಿಂದ ಶುದ್ಧವಾದ,ಸೂಕ್ಷ್ಮಬುದ್ಧಿಯ ಮೂಲಕ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾ ಸಚ್ಚಿದಾನಂದಘನನಾದ ಪರಮಾತ್ಮನಲ್ಲಿಯೇ ಸಂತುಷ್ಟನಾಗಿರುತ್ತಾನೋ_

***

*ಸುಖಮಾತ್ಯಂತಿಕಂ ಯತ್ತದ್ಭುದ್ಧಿಗ್ರಾಹ್ಯಮತೀಂದ್ರಿಯಮ್/*

*ವೇತ್ತಿ ಯತ್ರ ನ ಚೈವಾಯಂ ಸ್ಥಿತಶ್ಚಲತಿ ತತ್ತ್ವತ://೨೧//*

     ಹಾಗೂ ಇಂದ್ರಿಯಗಳಿಂದ ಅತೀತವಾದ ಅತೀತವಾದ ಕೇವಲ  ಶುದ್ಧವಾದ ಸೂಕ್ಷ್ಮಬುದ್ಧಿಯ ಮೂಲಕ ಗ್ರಹಿಸಲು ಯೋಗ್ಯವಾದ ಯಾವ ಅನಂತವಾದ ಆನಂದವಿದೆಯೋ ,ಅದನ್ನು ಯಾವ ಅವಸ್ಥೆ ಯಲ್ಲಿ ಅನುಭವಿಸುತ್ತಾನೋ ಮತ್ತು ಯಾವ ಅವಸ್ಥೆ ಯಲ್ಲಿ ಸ್ಥಿತನಾದ ಈ ಯೋಗಿಯು ಪರಮಾತ್ಮನ ಸ್ವರೂಪದಿಂದ ಎಂದಿಗೂ ವಿಚಲಿತನಾಗುವುದೇ ಇಲ್ಲವೋ_

  * *ಯಂಲಬ್ಧ್ವಾ ಚಾಪರಂ ಲಾಭಂ ಮನ್ಯತೇ ನಾಧಿಕಂ ತತ:/*

*ಯಸ್ಮಿನ್ ಸ್ಥಿತೋ ನ ದು:ಖೇನ ಗುರುಣಾಪಿ ವಿಚಾಲ್ಯತೇ//೨೨//*

 ಮತ್ತು ಪರಮಾತ್ಮನ ಪ್ರಾಪ್ತೀರೂಪೀ ಯಾವ ಲಾಭವನ್ನು ಪಡೆದುಕೊಂಡು ಅದಕ್ಕಿಂತ ಅಧಿಕವಾದ ಬೇರೆ ಯಾವುದೇ ಲಾಭವನ್ನು ಮನ್ನಿಸುವುದಿಲ್ಲವೋ ಮತ್ತು ಪರಮಾತ್ಮನ ಪ್ರಾಪ್ತಿರೂಪೀ ಯಾವ ಅವಸ್ಥೆಯಲ್ಲಿ ಸ್ಥಿತನಾದ ಯೋಗಿಯು ಭಾರೀ ದೊಡ್ಡ ದು:ಖದಿಂದಲೂ ಕೂಡ ವಿಚಲಿತನಾಗುವುವುದಿಲ್ಲವೋ ಅದನ್ನು ತಿಳಿಯಬೇಕು.

***

(ಸಾರ ಸಂಗ್ರಹ) ವಿಜಯಾ ಶೆಟ್ಟಿ ಸಾಲೆತ್ತೂರು

ಚಿತ್ರ ಕೃಪೆ : ಅಂತರ್ಜಾಲ