ಗೀತಾಮೃತ - 2

ಗೀತಾಮೃತ - 2

ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕ:/

ನ ಚೈನಂ ಕ್ಲೇದಯಂತ್ಯೋಪೋ ನ ಶೋಷಯತಿ ಮಾರುತ://೨೩//

  ಈ ಆತ್ಮವನ್ನು ಶಸ್ತ್ರಗಳು ಕತ್ತರಿಸಲಾರವು.ಇದನ್ನು ಬೆಂಕಿಯು ಸುಡಲಾರದು.ಇದನ್ನು ಜಲವು ನೆನೆಯಿಸಲಾರದು ಮತ್ತು ವಾಯುವು ಒಣಗಿಸಲಾರದು.

     ಅಚ್ಛೇದ್ಯೋಯಮದಾಹ್ಯೋ ಯಮಕ್ಲೇದ್ಯೋ ತೋಷ್ಣ ಏವ/

ನಿತ್ಯ: ಸರ್ವಗತ: ಸ್ಥಾಣುರಚಲೋ ಯಂ ಸನಾತನಂ//೨೪//

  ಏಕೆಂದರೆ ಈ ಆತ್ಮವು ಅಚ್ಛೇದ್ಯವೂ ಅಕ್ಲೇದ್ಯವೂ ಮತ್ತು ನಿಸ್ಸಂದೇಹವಾಗಿ ಅಶೋಷ್ಯವಾಗಿದೆ.ಹಾಗೂ ಈ ಆತ್ಮವು ನಿತ್ಯವೂ ,ಸರ್ವವ್ಯಾಪಿಯೂ,ಅಚಲವೂ,ಸ್ಥಿರವಾಗಿದ್ದು ಸನಾತನವಾಗಿದೆ.

*****

    ಸ್ವಧರ್ಮಮಪಿ ಚಾವೇಕ್ಷ್ಯ ನ ವಿಕಂಪಿತುಮರ್ಹಸಿ/

ಧರ್ಮ್ಯಾದ್ಧಿಯುದ್ಧಾಚ್ಛ್ರೇಯೋನ್ಯತ್ ಕ್ಷತ್ರಿಯಸ್ಯ ನ ವಿದ್ಯತೇ//೩೧//

 ಹಾಗೆಯೇ ಸ್ವಧರ್ಮವನ್ನು ನೋಡಿದರೂ ನೀನು ಭಯಪಡಲು ಯೋಗ್ಯನಲ್ಲ ಅಂದರೆ ನೀನು ಭಯಪಡಬಾರದು .ಏಕೆಂದರೆ ಕ್ಷತ್ರಿಯನಾದವನಿಗೆ ಧರ್ಮಾಯುಕ್ತವಾದ ಯುದ್ಧದಿಂದ ಮಿಗಿಲಾದ ಶ್ರೇಯಸ್ಕರವಾದ ಕರ್ತವ್ಯವು ಬೇರೆ ಯಾವುದೂ ಇಲ್ಲ.

   ಯದೃಚ್ಛಯಾ ಚೋಪಪನ್ನಂ ಸ್ವರ್ಗದ್ವಾರಮಪಾವೃತಮ್/

ಸುಖಿನ: ಕ್ಷತ್ರಿಯಾ: ಪಾರ್ಥ ಲಭಂತೇ ಯುದ್ಧಮೀದೃಶಮ್//೩೨//

 ಹೇ ಪಾರ್ಥನೇ! ತನ್ನಿಂದತಾನೇ ಪ್ರಾಪ್ತವಾದ ಮತ್ತು ತೆರೆದಿರುವ ಸ್ವರ್ಗದ ದ್ವಾರದಂತಿರುವ ಈ ಪ್ರಕಾರದ ಯುದ್ಧವನ್ನು ಭಾಗ್ಯಶಾಲಿಯಾದ ಕ್ಷತ್ರಿಯರೇ ಪಡೆಯುತ್ತಾರೆ.

*****

ಅಥ ಚೇತ್ತ್ವ ಮಿಮಂ ಧರ್ಮ್ಯಂ ಸಂಗ್ರಾಮಂ ನ ಕರಿಷ್ಯಸಿ/

ತತ: ಸ್ವಧರ್ಮಂ ಕೀರ್ತಂ ಚ ಹಿತ್ವಾಪಾಪಮವಾಪ್ಸ್ಯಸಿ//೩೩//

   ಏಕೆಂದರೆ,ಒಂದು ವೇಳೆ ನೀನು ಈ ಧರ್ಮಯುಕ್ತವಾದ ಯುದ್ಧವನ್ನು ಮಾಡದಿದ್ದರೆ ಸ್ವಧರ್ಮವನ್ನು ಮತ್ತು ಕೀರ್ತಿ ಯನ್ನು ಕಳೆದುಕೊಂಡು ಪಾಪವನ್ನು ಪಡೆಯುವೆ.

     ಅಕೀರ್ತಿಂ ಚಾಪಿ ಭೂತಾನಿ ಕಥಯಿಷ್ಯಂತಿ ತೇವ್ಯಯಾಮ್/

ಸಮ್ಬಾವಿತಸ್ಯ ಚಾಕೀರ್ತಿರ್ಮರಣಾದತಿರಿಚ್ಯತೇ//೩೪//

     ಹಾಗೂ ಬಹುಕಾಲದವರೆಗೆ ಇರುವ ನಿನ್ನ ಅಪಕೀರ್ತಿಯನ್ನು ಎಲ್ಲ ಜನರೂ ಕೂಡ ಆಡಿಕೊಳ್ಳುವರು ಮತ್ತು ಮರ್ಯಾದಸ್ಥನಿಗೆ ಈ ಅಪಕೀರ್ತಿಯು ಮರಣಕ್ಕಿಂತಲೂ ಹೆಚ್ಚಿನದಾಗಿದೆ.

*****

-ವಿಜಯಾ ಶೆಟ್ಟಿ, ಸಾಲೆತ್ತೂರು (ಸಾರ ಸಂಗ್ರಹ)