ಗೀತಾಮೃತ - 21

ಗೀತಾಮೃತ - 21

*ಅಧ್ಯಾಯ ೬*

       *ಅರ್ಜುನ ಉವಾಚ*

   *ಯೋಯಂ ಯೋಗಸ್ತ್ವಯಾ ಪ್ರೋಕ್ತ:ಸಾಮ್ಯೇನ ಮಧುಸೂದನ/*

*ಏತಸ್ಯಾಹಂ ನ ಪಶ್ಯಾಮಿ ಚಂಚಲತ್ವಾತ್ ಸ್ಥಿತಿಂ ಸ್ಥಿರಾಮ್//೩೩//*

          ಅರ್ಜುನ ಹೇಳಿದನು_ 

ಹೇ ಮಧುಸೂದನಾ! ಯಾವ ಈ ಯೋಗವನ್ನು ನೀನು ಸಮಭಾವದಿಂದ ಹೇಳಿದ್ದೀಯೋ,ಮನಸ್ಸು ಚಂಚಲವಾದ್ದರಿಂದ ನಾನು ಅದರ ಸ್ಥಿರವಾದ ಸ್ಥಿತಿಯನ್ನು ನೋಡುವುದಿಲ್ಲ.

*ಚಂಚಲಂ ಹಿ ಮನ: ಪ್ರಮಾಥಿ ಬಲವದ್ಧೃಢಮ್/*

*ತಸ್ಯಾಹಂ ನಿಗ್ರಹಂ ಮನ್ಯೇ ವಾಯೋರಿವ ಸುದುಷ್ಕರಮ್//೩೪//*

      ಏಕೆಂದರೆ ಹೇ ಕೃಷ್ಣಾ! ಈ ಮನಸ್ಸು ತುಂಬಾ ಚಂಚಲವಾದುದು,ಮಥಿಸುವ ಸ್ವಭಾವವುಳ್ಳದ್ದು,ಬಹಳ ದೃಢವಾದುದೂ ಮತ್ತು ಬಲಶಾಲಿಯೂ ಆಗಿದೆ.ಆದಕಾರಣ ಇದನ್ನು ವಶದಲ್ಲಿಡುವುದು,ವಾಯುವನ್ನು ತಡೆಹಿಡಿದಂತೆ ಅತ್ಯಂತ ದುಷ್ಕರವಾದುದೆಂದು ನಾನು ತಿಳಿಯುತ್ತೇನೆ.

***

 *ಶ್ರೀ ಭಗವಾನುವಾಚ*

*ಅಸಂಶಯಂ ಮಹಾಬಾಹೋ ಮನೋ ದುರ್ನಿಗ್ರಹಂ ಚಲಮ್/*

*ಅಭ್ಯಾಸೇನ ತು ಕೌಂತೇಯ ವೈರಾಗ್ಯೇಣ ಚ ಗೃಹ್ಯತೇ//೩೫//*

    ಶ್ರೀ ಭಗವಂತನು ಹೇಳಿದನು _ ಹೇ ಮಹಾಬಾಹುವೇ! ನಿಸ್ಸಂದೇಹವಾಗಿ ಮನಸ್ಸು ಚಂಚಲ ಮತ್ತು ಕಷ್ಟದಿಂದ ವಶವಾಗುವಂತಹುದಾಗಿದೆ; ಆದರೆ ಹೇ ಕುಂತೀಪುತ್ರನಾದ ಅರ್ಜುನನೇ !ಇದು ಅಭ್ಯಾಸದಿಂದ ಮತ್ತು ವೈರಾಗ್ಯದಿಂದ ವಶವಾಗುತ್ತದೆ.

      *ಅಸಂಯತಾತ್ಮನಾ ಯೋಗೋ ದುಷ್ಟ್ರಾಪ ಇತಿ ಮೇ ಮತಿ:/*

*ವಶ್ಯಾತ್ಮನಾ ತು ಯತತಾ ಶಕ್ಯೋವಾಪ್ತುಮುಪಾಯತ://೩೪//*

   ಯಾರು ಮನಸ್ಸನ್ನು ವಶಪಡಿಸಿಕೊಳ್ಳಲಿಲ್ಲವೋ ಅಂತಹ ಪುರುಷರ ಮೂಲಕ ಯೋಗವು ಪಡೆಯಲಶಕ್ಯವಾಗಿದೆ.ಆದರೆ ಮನಸ್ಸನ್ನು ವಶಪಡಿಸಿಕೊಂಡಿರುವ ಪ್ರಯತ್ನಶೀಲರಾದ ಪುರುಷರ ಮೂಲಕ ಸಾಧನೆಯಿಂದ ಅದು ಪ್ರಾಪ್ತವಾಗುವುದು ಸಹಜವಾಗಿದೆ.ಇದು ನನ್ನ ಮತವಾಗಿದೆ.

***

  *ಶ್ರೀ ಭಗವಾನುವಾಚ*

*ಅಸಂಶಯಂ ಮಹಾಬಾಹೋ ಮನೋ ದುರ್ನಿಗ್ರಹಂ ಚಲಮ್/*

*ಅಭ್ಯಾಸೇನ ತು ಕೌಂತೇಯ ವೈರಾಗ್ಯೇಣ ಚ ಗೃಹ್ಯತೇ//೩೫//*

  ಶ್ರೀ ಭಗವಂತನು ಹೇಳಿದನು _ ಹೇ ಮಹಾಬಾಹುವೇ!ನಿಸ್ಸಂದೇಹವಾಗಿ ಮನಸ್ಸು ಚಂಚಲ ಮತ್ತು ಕಷ್ಟದಿಂದ ವಶವಾಗುವಂತಹುದಾಗಿದೆ.ಆದರೆ ಹೇ ಕುಂತೀಪುತ್ರನಾದ ಅರ್ಜುನನೇ! ಇದು ಅಭ್ಯಾಸದಿಂದ ಮತ್ತು ವೈರಾಗ್ಯದಿಂದ ವಶವಾಗುತ್ತದೆ.

   *ಅಸಂಯತಾತ್ಮನಾ ಯೋಗೋ ದುಷ್ಟ್ರಾಪ ಇತಿ ಮೇ ಮತಿ:/*

*ವಶ್ಯಾತ್ಮನಾ ತು ಯತತಾ ಶಕ್ಯೋವಾಪ್ತುಮುಪಾಯತ://೩೬//*

ಯಾರು ಮನಸ್ಸನ್ನು ವಶಪಡಿಸಿಕೊಳ್ಳಲಿಲ್ಲವೋ ಅಂತಹ ಪುರುಷರ ಮೂಲಕ ಯೋಗವು ಪಡೆಲಶಕ್ಯವಾಗಿದೆ.ಆದರೆ ಮನಸ್ಸನ್ನು ವಶಪಡಿಸಿಕೊಂಡಿರುವ ಪ್ರಯತ್ನಶೀಲರಾದ ಪುರುಷರ ಮೂಲಕ ಸಾಧನೆಯಿಂದ ಅದು ಪ್ರಾಪ್ತವಾಗುವುದು ಸಹಜವಾಗಿದೆ.ಇದು ನನ್ನ ಮತವಾಗಿದೆ.

***

*ಅರ್ಜುನ ಉವಾಚ*

  *ಅಯತಿ: ಶ್ರದ್ಧಯೋಪೇತೋ ಯೋಗಾಚ್ಚಲಿತಮಾನಸ:/*

*ಅಪ್ರಾಪ್ಯ ಯೋಗಸಂಸಿದ್ಧಿಂ ಕಾಂ ಗತಿಂ ಕೃಷ್ಣ ಗಚ್ಛತಿ//೩೭//*

   ಅರ್ಜುನನು ಹೇಳಿದನು_

ಹೇ ಶ್ರೀ ಕೃಷ್ಣ! ಯಾರು ಯೋಗದಲ್ಲಿ ಶ್ರದ್ಧೆಯನ್ನಿಟ್ಟಿದ್ದಾರೋ ,ಆದರೆ ಸಂಯಮಿಗಳಲ್ಲವೋ,ಈ ಕಾರಣದಿಂದ ಅಂತ್ಯಕಾಲದಲ್ಲಿ ಯಾರ ಮನಸ್ಸು ಯೋಗದಿಂದ ವಿಚಲಿತನಾಗಿ ಹೋಗಿದೆಯೋ ಅಂತಹ ಸಾಧಕನು ಯೋಗದ ಸಿದ್ಧಿಯನ್ನು ಅರ್ಥಾತ್ ಭಗವಂತನ ಸಾಕ್ಷಾತ್ಕಾರವನ್ನು ಪಡೆಯದೆ ಯಾವ ಗತಿಯನ್ನು ಪಡೆಯುತ್ತಾನೆ?

*ಕಚ್ಛಿನ್ನೋಭಯವಿಭ್ರಷ್ಟಶ್ಚಿನ್ನಾಭ್ರಮಿವ ನಶ್ಯತಿ/*

*ಅಪ್ರತಿಷ್ಠೋ ಮಹಾನಾಹೋ ವಿಮೂಢೋ ಬ್ರಹ್ಮಣ: ಪಥಿ//೩೮//*

 ಹೇ ಮಹಾಬಾಹುವೇ! ಆ ಭಗವತ್ಪ್ರಾಪ್ತಿಯ ಮಾರ್ಗದಲ್ಲಿ ಮೋಹಿತನಾದ ಮತ್ತು ಆಶ್ರಯರಹಿತನಾದ ಪುರುಷನು ಭಿನ್ನಭಿನ್ನವಾದ ಮೋಡದಂತೆ ಎರಡೂ ಕಡೆಗಳಿಂದ ಭ್ರಷ್ಟನಾಗಿ ನಷ್ಟನಾಗುವುದಿಲ್ಲವೇನು?

***

*ಏತನ್ಮೇ ಸಂಶಯಂ ಕೃಷ್ಣ ಛೇತ್ತುಮರ್ಹಸ್ಯಶೇಷತ:/*

*ತ್ವದನ್ಯ:  ಸಂಶಯಸ್ಯಾಸ್ಯ ಛೇತ್ತಾ ನ ಹ್ಯುಪ ಪದ್ಯತೇ//೩೯//*

   ಹೇ ಶ್ರೀ ಕೃಷ್ಣಾ! ನನ್ನ ಈ ಸಂಶಯವನ್ನು ಸಂಪೂರ್ಣವಾಗಿ ಭೇದಿಸಲು  ನೀನೇ ಸಮರ್ಥನಾಗಿದ್ದೀಯೆ; ಏಕೆಂದರೆ ನೀನಲ್ಲದೆ ಬೇರೆ ಯಾರೂ ಈ ಸಂಶಯವನ್ನು ಛೇದಿಸುವವರು ಸಿಕ್ಕುವುದು ಸಂಭವವಿಲ್ಲ.

     *ಶ್ರೀ ಭಗವಾನುವಾಚ*

*ಪಾರ್ಥ ನೈವೇಹ ನಾಮುತ್ರ ವಿನಾಶಸ್ತಸ್ಯ ವಿದ್ಯತೇ/*

*ನ ಹಿ ಕಲ್ಯಾಣಕೃತ್ ಕಶ್ಚಿದ್ದುರ್ಗತಿಂ ತಾತ ಗಚ್ಛತಿ//೪೦//*

     ಶ್ರೀ ಭಗವಂತನು ಹೇಳಿದನು_ 

ಹೇ ಪಾರ್ಥನೇ! ಆ ಪುರುಷನ ವಿನಾಶವು ಈ ಲೋಕದಲ್ಲಿಯಾಗಲಿ ಮತ್ತು ಪರಲೋಕದಲ್ಲಿಯೇ ಆಗಲಿ ಆಗುವುದಿಲ್ಲ.ಏಕೆಂದರೆ,ಹೇ ಪ್ರೀತಿಪಾತ್ರನೇ! ಆತ್ಮೋದ್ಧಾರಕ್ಕಾಗಿ ಅರ್ಥಾತ್ ಭಗವತ್ಪ್ರಾಪ್ತಿಗಾಗಿ ಕರ್ಮಮಾಡುವ ಯಾವ ಮನುಷ್ಯನೂ ದುರ್ಗತಿ ಯನ್ನು ಹೊಂದುವುದಿಲ್ಲ.

***

(ಸಾರ ಸಂಗ್ರಹ) ವಿಜಯಾ ಶೆಟ್ಟಿ ಸಾಲೆತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣದಿಂದ