ಗೀತಾಮೃತ - 23

ಗೀತಾಮೃತ - 23

*ಅಧ್ಯಾಯ   ೭*

       *//ಅಥ ಸಪ್ತಮೋಧ್ಯಾಯ://*

  *ಜ್ಞಾನ ವಿಜ್ಞಾನ ಯೋಗವು*

       *ಶ್ರೀ ಭಗವಾನುವಾಚ*

 

*ಮಯ್ಯಾಸಕ್ತಮನಾ: ಪಾರ್ಥ ಯೋಗಂ ಯುಂಜನ್ಮದಾಶ್ರಯ:/*

*ಅಸಂಶಯಂ ಸಮಗ್ರಂ ಮಾಂ ಯಥಾ ಜ್ಞಾಸ್ಯಸಿ ತಚ್ಛೈಣು//೧//*

      ಶ್ರೀ ಭಗವಂತನು ಹೇಳಿದನು _

ಹೇ ಪಾರ್ಥನೇ! ಅನನ್ಯ ಪ್ರೇಮದಿಂದ ನನ್ನಲ್ಲಿ ಆಸಕ್ತಚಿತ್ತನಾಗಿ ಮತ್ತು ಅನನ್ಯಭಾವದಿಂದ ನನ್ನ ಪರಾಯಣನಾಗಿ ಯೋಗದಲ್ಲಿ ತೊಡಗಿರುವ ನೀನು ಯಾವ ಪ್ರಕಾರದಿಂದ ಸಂಪೂರ್ಣ ವಿಭೂತಿಗಳು,ಬಲ,ಐಶ್ವರ್ಯಾದಿ ಗುಣಗಳಿಂದ ಯುಕ್ತನಾಗಿ,ಎಲ್ಲರ ಆತ್ಮರೂಪನಾದ ನನ್ನನ್ನು ಸಂಶಯರಹಿತನಾಗಿ ತಿಳಿಯುವೆಯೋ ಅದನ್ನು ಕೇಳು.

       *ಜ್ಞಾನಂ ತೇಹಂ ಸವಿಜ್ಞಾನಮಿದಂ ವಕ್ಷ್ಯಾಮ್ಯಶೇಷತ:/*

*ಯಜ್ಞ್ಜತ್ವಾ ನೇಹ ಭೂಯೋನ್ಯಜ್ಞ್ಜಾತವ್ಯಮವಶಿಷ್ಯತೇ//೨//*

      ಯಾವುದನ್ನು ತಿಳಿದನಂತರ ಜಗತ್ತಿನಲ್ಲಿ ಮತ್ತೇ ಬೇರೆ ಏನನ್ನು ತಿಳಿಯಲು ಯೋಗ್ಯವಾದುದು ಉಳಿದಿರುವುದಿಲ್ಲವೋ ಅಂತಹ ವಿಜ್ಞಾನಸಹಿತವಾದ ತತ್ವಜ್ಞಾನವನ್ನು ನಾನು ನಿನಗಾಗಿ ಸಂಪೂರ್ಣವಾಗಿ ಹೇಳುವೆನು.

***

  *ಮನುಷ್ಯಾಣಾಂ ಸಹಸ್ರೇಷು ಕಶ್ಚದ್ಯತತಿ ಸಿದ್ಧಯೇ/*

*ಯತತಾಮಪಿ ಸಿದ್ದಾನಾಂ ಕಶ್ಚಿನ್ಮಾಂ ವೇತ್ತಿ ತತ್ತ್ವತ://೩//*

      ಸಾವಿರಾರು ಮನುಷ್ಯರಲ್ಲಿ ಯಾರೋ ಒಬ್ಬನು ನನ್ನ ಪ್ರಾಪ್ತಿಗಾಗಿ ಯತ್ನಿಸುತ್ತಾನೆ ಮತ್ತು ಹಾಗೆ ಯತ್ನಿಸುವ ಯೋಗಿಗಳಲ್ಲಿ ಕೂಡ ಯಾರೋ ಒಬ್ಬನು ನನ್ನ ಪರಾಯಣನಾಗಿ ನನ್ನನ್ನು ತತ್ವದಿಂದ ಅರ್ಥಾತ್ ಯಥಾರ್ಥ ರೂಪದಿಂದ ತಿಳಿಯುತ್ತಾನೆ.

   *ಭೂಮಿರಾಪೋನಲೋ ವಾಯು: ಖಂ ಮನೋ ಬುದ್ಧಿರೇವಚ/*

*ಅಹಂಕಾರ ಇತೀಯಂ ಮೇ ಭಿನ್ನಾ ಪ್ರಕೃತಿರಷ್ಟಧಾ//೪//*

   ಪೃಥ್ವಿ,ಜಲ,ಅಗ್ನಿ,ವಾಯು,ಆಕಾಶ,ಮನಸ್ಸು ಬುದ್ಧಿ ಮತ್ತು ಅಹಂಕಾರ ಈ ರೀತಿ ಎಂಟು ಪ್ರಕಾರವಾಗಿ ವಿಭಾಗಿಸಸಲ್ಪಟ್ಟ ನನ್ನ ಪ್ರಕೃತಿಯಾಗಿದೆ.ಇದು ಎಂಟು ಪ್ರಕಾರದಿಂದ ಭೇದವುಳ್ಳದ್ದಾದರೂ ಅಪರಾ ಅರ್ಥಾತ್ ನನ್ನ ಜಡ ಪ್ರಕೃತಿಯಾಗಿದೆ.

***

     *ಅಪರೇಯಮಿತಸ್ತ್ವನ್ಯಾಂ  ಪ್ರಕೃತಿಂ ವಿದ್ಧಿ ಮೇ ಪರಾಮ್/*

*ಜೀವಭೂತಾಂ ಮಹಾಬಾಹೋ ಯಯೇದಂ ಧಾರ್ಯತೇ ಜಗತ್//೫//*

     ಹೇ ಮಹಾಬಾಹೋ! ಇದಕ್ಕಿಂತ ಬೇರೆಯದಾದ ,ಯಾವುದರಿಂದ ಸಂಪೂರ್ಣವಾದ ಜಗತ್ತು ಧರಿಸಲ್ಪಡುತ್ತದೋ ಅದು ನನ್ನ ಜೀವರೂಪವಾದ 'ಪರಾ' ಅರ್ಥಾತ್ ಚೇತನ ಪ್ರಕೃತಿಯೆಂದು ತಿಳಿ.

     * *ಏತದ್ಯೋನೀನಿ ಭೂತಾನಿ ಸರ್ವಾಣೀತ್ಯುಪಧಾರಯ/*

*ಅಹಂ ಕೃತ್ಸ್ನಸ್ಯ ಜಗತ:  ಪ್ರಭವ: ಪ್ರಲಯಸ್ತಥಾ//೬//*

   ಹೇ ಅರ್ಜುನನೇ! ಸಮಸ್ತ ಭೂತಗಳು ಈ ಎರಡೂ ಪ್ರಕೃತಿಗಳಿಂದಲೇ ಉತ್ಪನ್ನವಾಗುತ್ತದೆ ಮತ್ತು ನಾನು ಸಂಪೂರ್ಣವಾದ ಜಗತ್ತಿನ ಉತ್ಪತ್ತಿ ಹಾಗೂ ಪ್ರಳಯವಾಗಿದ್ದೇನೆ,ಅರ್ಥಾತ್ ಸಮಸ್ತ ಜಗತ್ತಿನ ಮೂಲಕಾರಣವಾಗಿದ್ದೇನೆ ಎಂದು ನೀನು ತಿಳಿದುಕೋ.

***

*ಪುಣ್ಯೋ ಗಂಧ: ಪೃಥಿವ್ಯಾಂ ಚ ತೇಜಶ್ಚಾಸ್ಮಿ ವಿಭಾವಸೌ /*

*ಜೀವನಂ ಸರ್ವಭೂತೇಷು ತಪಶ್ಚಾಸ್ಮಿ ತಪಸ್ವಿಷು//೯//*

       ನಾನು ಪೃಥ್ವಿಯಲ್ಲಿ ಪವಿತ್ರವಾದ ಗಂಧವೂ ಮತ್ತು ಅಗ್ನಿಯಲ್ಲಿ ತೇಜಸ್ಸು ಆಗಿದ್ದೇನೆ.ಹಾಗೆಯೇ ಸಂಪೂರ್ಣ ಭೂತಗಳಲ್ಲಿ ಅವುಗಳ ಜೀವನವಾಗಿದ್ದೇನೆ ಮತ್ತು ತಪಸ್ವಿಗಳಲ್ಲಿ ತಪಸ್ಸು ಆಗಿದ್ದೇನೆ.

       *ಬೀಜಂ ಮಾಂ ಸರ್ವಭೂತಾನಾಂ ವಿದ್ಧಿಪಾರ್ಥ ಸನಾತನಮ್/*

*ಬುದ್ಧಿರ್ಬುದ್ಧಿಮತಾಮಸ್ಮಿ ತೇಜಸ್ತೇಜಸ್ವಿನಾಮಹಮ್//೧೦//*

     ಹೇ ಅರ್ಜುನಾ ! ನಾನು ಸಂಪೂರ್ಣ ಪ್ರಾಣಿಗಳ ಸನಾತನವಾದ ಬೀಜವು ಎಂದು ನೀನು ತಿಳಿ.ನಾನು ಬುದ್ಧಿವಂತ ರ ಬುದ್ಧಿಯೂ ಮತ್ತು ತೇಜಸ್ವಿಗಳ ತೇಜಸ್ಸೂ ಆಗಿದ್ದೇನೆ.

***

(ಸಾರ ಸಂಗ್ರಹ) ವಿಜಯಾ ಶೆಟ್ಟಿ ಸಾಲೆತ್ತೂರು

ಇಂಟರ್ನೆಟ್ ಸಂಗ್ರಹ ಚಿತ್ರ