ಗೀತಾಮೃತ - 24
*ಅಧ್ಯಾಯ ೭*
*ಬಲಂ ಬಲವತಾಂ ಚಾಹಂ ಕಾಮರಾಗವಿವರ್ಜಿತಮ್/*
*ಧರ್ಮಾವಿರುದ್ಧೋ ಭೂತೇಷು ಕಾಮೋಸ್ಮಿ ಭರತರ್ಷಭ//೧೧//*
ಹೇ ಭರತಶ್ರೇಷ್ಠನೆ! ನಾನು ಬಲಶಾಲಿಗಳ,ಆಸಕ್ತಿ ಮತ್ತು ಕಾಮನೆಗಳಿಂದ ರಹಿತವಾದ ಬಲ ಅರ್ಥಾತ್ ಸಾಮರ್ಥ್ಯ ವಾಗಿದ್ದೇನೆ ಮತ್ತು ಎಲ್ಲ ಪ್ರಾಣಿಗಳಲ್ಲಿ ಧರ್ಮಕ್ಕೆ ಅನುಕೂಲವಾದ ಅರ್ಥಾತ್ ಶಾಸ್ತ್ರ ಕ್ಕೆ ಅನುಕೂಲವಾದ ಕಾಮವಾಗಿದ್ದೇನೆ.
*ಯೇ ಚೈವ ಸಾತ್ವಿಕಾ ಭಾವಾ ರಾಜಾಸಾಸ್ತಾಮಸಾಶ್ಚಯೇ /*
*ಮತ್ತ ಏವೇತಿ ತಾನ್ವದ್ಧಿ ನ ತ್ವಹಂ ತೇಷು ತೇ ಮಯಿ//೧೨//*
ಇನ್ನೂ ಕೂಡ ಯಾವ ಸತ್ವ ಗುಣದಿಂದ ಉತ್ಪನ್ನವಾಗುವ ಭಾವಗಳಿವೆಯೋ ಮತ್ತು ಯಾವ ರಜೋಗುಣದಿಂದ ಹಾಗೂ ತಮೋಗುಣದಿಂದ ಉಂಟಾಗುವ ಭಾವಗಳಿವೆಯೋ,ಅವೆಲ್ಲವುಗಳನ್ನು ನೀನು ನನ್ನಿಂದಲೇ ಉಂಟಾಗುವುದೆಂದು ತಿಳಿ.ಆದರೆ ವಾಸ್ತವವಾಗಿ ಅವುಗಳನ್ನು ನಾನು ಮತ್ತು ಅವುಗಳು ನನ್ನಲ್ಲಿ ಇಲ್ಲ.
***
*ತ್ರಿಭಿರ್ಗುಣಮಯೈರ್ಭಾವೈರೇಭಿ: ಸರ್ವಮಿದಂ ಜಗತ್/*
*ಮೋಹಿತಂ ನಾಭಿಜಾನಾತಿ ಮಾಮೇಭ್ಯ: ಪರಮವ್ಯಯಮ್//೧೩//*
ಗುಣಗಳ ಕಾರ್ಯರೂಪವಾದ ಸಾತ್ವಿಕ ,ರಾಜಸ ಮತ್ತು ತಾಮಸಗಳೆಂಬ ಈ ಮೂರೂ ಪ್ರಕಾರದ ಭಾವಗಳಿಂದ ಈ ಎಲ್ಲ ಜಗತ್ತಿನ ಪ್ರಾಣಿ ಸಮುದಾಯವು ಮೋಹಿತವಾಗುತ್ತಿದೆ. ಆದ ಕಾರಣ ಈ ಮೂರು ಗುಣಗಳಿಂದ ಅತೀತನಾದ, ಅವಿನಾಶಿಯಾದ ನನ್ನನ್ನು ತಿಳಿಯುವುದಿಲ್ಲ.
*ದೈವೀ ಹ್ಯೇಷಾ ಗುಣಮಯೀ ಮಮ ಮಾಯಾ ದುರತ್ಯಯಾ/*
*ಮಾವೇನ ಯೇ ಪ್ರಪದ್ಯಂತೇ ಮಾಯಾಮೇತಾಂ ತರಂತಿ ತೇ//೧೪//*
ಏಕೆಂದರೆ, ಈ ಅಲೌಕಿಕವಾದ ಅರ್ಥಾತ್ ಅತಿ ಅದ್ಭುತವಾದ,ತ್ರಿಗುಣಮಯಿಯಾದ ನನ್ನ ಮಾಯೆಯು ಬಹಳ ದುಸ್ತರವಾಗಿದೆ; ಆದರೆ ಯಾವ ಪುರುಷರು ಕೇವಲ ನನ್ನನ್ನೇ ನಿರಂತರವಾಗಿ ಭಜಿಸುತ್ತಾರೋ ಅವರು ಈ ಮಾಯೆಯನ್ನು ದಾಟಿಬಿಡುತ್ತಾರೆ ಅರ್ಥಾತ್ ಜಗತ್ತಿನಿಂದ ಪಾರಾಗುತ್ತಾರೆ.
***
*ನ ಮಾಂ ದುಷ್ಕೃತನೋ ಮೂಢಾ: ಪ್ರಪದ್ಯಂತೇ ನರಾಧಮಾ:/*
*ಮಾಯಯಾಪಹೃತಜ್ಞಾನಾ ಅಸುರಂ ಭಾವಮಾಶ್ರಿತಾ://*
ಮಾಯೆಯ ಮೂಲಕ ಯಾರ ಜ್ಞಾನವು ಅಪಹರಿಸಲ್ಪಟ್ಟಿದೆಯೋ ಅಂತಹ ಅಸುರೀಸ್ವಭಾವವನ್ನು ಆಶ್ರಯಿಸಿರುವ ಮನುಷ್ಯರಲ್ಲಿ ನೀಚ ಮತ್ತು ದೂಷಿತ ಕರ್ಮ ಮಾಡುವ ಮೂಢಜನರು ನನ್ನನ್ನು ಭಜಿಸುವುದಿಲ್ಲ.
*ಚತುರ್ವಿಧಾ ಭಜಂತೇ ಮಾಂ ಜನಾ: ಸುಕೃತಿನೋರ್ಜುನ/*
*ಆರ್ತೋ ಜಿಜ್ಞಾಸುರರ್ಥಾರ್ಥಿ ಜ್ಞಾನೀ ಚ ಭರತವರ್ಷಭ//*
ಹೇ ಭರತವಂಶೀಯರಲ್ಲಿ ಶ್ರೇಷ್ಠ ನಾದ ಅರ್ಜುನಾ! ಉತ್ತಮ ಕರ್ಮಗಳನ್ನು ಮಾಡುವ ಅರ್ಥಾರ್ಥಿ,ಆರ್ತ,ಜಿಜ್ಞಾಸು ಮತ್ತು ಜ್ಞಾನೀ _ ಹೀಗೆ ನಾಲ್ಕು ಪ್ರಕಾರದ ಭಕ್ತಜನರು ನನ್ನನ್ನು ಭಜಿಸುತ್ತಾರೆ.
***
*ತೇಷಾಂ ಜ್ಞಾನೀ ನಿತ್ಯಯುಕ್ತ ಏಕಭಕ್ತಿರ್ವಿಶಿಷ್ಯತೇ/*
*ಪ್ರಿಯೋ ಹಿ ಜ್ಞಾನಿನೋತ್ಯರ್ಥಮಹಂ ಸ ಚ ಮಮ ಪ್ರಿಯ://೧೭//*
ಅವರಲ್ಲಿ ನಿತ್ಯವೂ ನನ್ನಲ್ಲಿ ಏಕೀಭಾವದಿಂದ ಸ್ಥಿತನಾಗಿರುವ ಅನನ್ಯ ಪ್ರೇಮ ಭಕ್ತಿಯುಳ್ಳ ಜ್ಞಾನೀ ಭಕ್ತನು ಅತಿ ಉತ್ತಮನಾಗಿದ್ದಾನೆ.ಏಕೆಂದರೆ ನನ್ನನ್ನು ತತ್ವದಿಂದ ತಿಳಿಯುವ ಜ್ಞಾನಿಗೆ ನಾನು ಅತ್ಯಂತ ಪ್ರಿಯನಾಗಿದ್ದೇನೆ ಮತ್ತು ಆ ಜ್ಞಾನಿಯು ನನಗೆ ಅತ್ಯಂತ ಪ್ರಿಯನಾಗಿದ್ದಾನೆ.
*ಉದಾರಾ: ಸರ್ವ ಏವೈತೇ ಜ್ಞಾನೀ ತ್ವಾತ್ಮೈವ ಮೇ ಮತಮ್/*
*ಆಸ್ಥಿತ: ಸ ಹಿ ಯುಕ್ತಾತ್ಮಾ ಮಾಮೇವಾನುತ್ತಮಾಂ ಗತಿಮ್//೧೮//*
ಇವರೆಲ್ಲರೂ ಉದಾರರಾಗಿದ್ದಾರೆ ಆದರೆ ,ಜ್ಞಾನಿಯಾದರೋ ಸಾಕ್ಷಾತ್ ನನ್ನ ಸ್ವರೂಪವೇ ಆಗಿದ್ದಾನೆ ಎಂಬುದು ನನ್ನ ಮತವಾಗಿದೆ.ಏಕೆಂದರೆ, ಮದ್ಗತ ಮನ _ ಬುದ್ಧಿಯುಳ್ಳ ಜ್ಞಾನಿಭಕ್ತನಾದ ಅವನು ಅತ್ಯುತ್ತಮ ಗತಿಸ್ವರೂಪೀ ನನ್ ನಲ್ಲಿ ಯೇ ಒಳ್ಳೆಯ ಪ್ರಕಾರದಿಂದ ಸ್ಥಿತನಾಗಿದ್ದಾನೆ.
***
(ಸಾರ ಸಂಗ್ರಹ) ವಿಜಯಾ ಶೆಟ್ಟಿ ಸಾಲೆತ್ತೂರು
ಇಂಟರ್ನೆಟ್ ಚಿತ್ರ ಕೃಪೆ