ಗೀತಾಮೃತ - 25

ಗೀತಾಮೃತ - 25

*ಅಧ್ಯಾಯ ೭*

  *ಬಹೂನಾಂ  ಜನ್ಮನಾಮಂತೇ ಜ್ಞಾನವಾನ್ಮಾಂ ಪ್ರಪದ್ಯತ್ಯೇ/*

*ವಾಸುದೇವ: ಸರ್ವಮಿತಿ ಸ ಮಹಾತ್ಮಾ ಸುದುರ್ಲಭ://೧೯//*

    ಅನೇಕ ಜನ್ಮಗಳ ಕೊನೆಯ ಜನ್ಮದಲ್ಲಿ ತತ್ವಜ್ಞಾನವನ್ನು ಪಡೆದ ಪುರುಷನು ಎಲ್ಲವೂ 'ವಾಸುದೇವನೇ ಆಗಿದ್ದಾನೆ'  ಈ ಪ್ರಕಾರವಾಗಿ ನನ್ನನ್ನು ಭಜಿಸುತ್ತಾನೋ , ಅಂತಹ ಮಹಾತ್ಮನು ಅತ್ಯಂತ ದುರ್ಲಭನಾಗಿದ್ದಾನೆ.

*ಕಾಮೈಸ್ತೈರ್ಹೃ ತಜ್ಞಾನಾ:  ಪ್ರಪದ್ಯಂತೇ ನ್ಯದೇವತಾ/*

*ತಂ ತಂ ನಿಯಮಮಾಸ್ಥಾಯ ಪ್ರಕೃತ್ಯಾ ನಿಯತಾ: ಸ್ವಯಾ//೨೦//*

   ಆಯಾಯ ಭೊಗಗಳ ಕಾಮನೆಯ ಮೂಲಕ ಯಾರ ಜ್ಞಾನವು ಅಪಹರಿಸಲ್ಪಟ್ಟಿದೆಯೋ, ಆ ಜನರು ತಮ್ಮ ಸ್ವಭಾವದಿಂದ ಪ್ರೇರಿತರಾಗಿ ಆಯಾಯಾ ನಿಯಮಗಳನ್ನು ಧಾರಣೆಮಾಡಿ ಬೇರೆ ದೇವತೆಗಳನ್ನು ಭಜಿಸುತ್ತಾರೆ.ಅರ್ಥಾತ್ ಪೂಜಿಸುತ್ತಾರೆ.

***

     *ಯೋಯೋ ಯಾಂ ಯಾಂ ತನುಂ ಭಕ್ತ: ಶ್ರದ್ಧಯಾರ್ಚಿತುಮಿಚ್ಛತಿ/*

*ತಸ್ಯ ತಸ್ಯಾಚಲಾಂ ಶ್ರದ್ಧಾಂ ತಾಮೇವ ವಿದಧಾಮ್ಯಹಮ್//*

      ಯಾವ ಯಾವ ಸಕಾಮ ಭಕ್ತರು ಯಾವ ಯಾವ ದೇವತೆಯ ಸ್ವರೂಪವನ್ನು ಶ್ರದ್ಧೆ ಯಿಂದ ಪೂಜಿಸಲು ಬಯಸುತ್ತಾರೋ ಆಯಾ ಭಕ್ತನ ಶ್ರದ್ಧೆ ಯನ್ನು ನಾನು ಅದೇ ದೇವತೆಯ ಕುರಿತು ಸ್ಥಿರ ಗೊಳಿಸುತ್ತೇನೆ.

     *ಸ ತಯಾ ಶ್ರದ್ಧಯಾ ಯುಕ್ತಸ್ತಸ್ಯಾರಾಧನಮೀಹತೇ/*

*ಲಭತೇ ಚ ತತ: ಕಾಮಾನ್ಮಯೈವ ವಿಹಿತಾನ್ಹಿ ತಾನ್//೨೨//*

     ಆ ಪುರುಷನು ಅಂತಹ ಶ್ರದ್ಧೆ ಯಿಂದ ಯುಕ್ತನಾಗಿ ಆ ದೇವತೆಯ ಪೂಜೆಯನ್ನು ಮಾಡುತ್ತಾನೆ ಮತ್ತು ಆ ದೇವತೆಯಿಂದ ನನ್ನಿಂದಲೇ ವಿಧಿಸಲ್ಪಟ್ಟ ಆ ಬಯಸಿದ ಭೋಗಗಳನ್ನು ನಿಸ್ಸಂದೇಹವಾಗಿ ಪಡೆಯುತ್ತಾನೆ.

***

*ಅಂತವತ್ತು ಫಲಂ ತೇಷಾಂ ತದ್ಭವತ್ಯಲ್ಪಮೇಧಸಾಮ್ /*

*ದೇವಾನ್ ದೇವಯಜೋ ಯಾಂತಿ ಮದ್ಬಕ್ತಾಯಾಂತಿ ಮಾಮಪಿ//೨೩//*

    ಆದರೆ ಅಲ್ಪ ಬುದ್ಧಿ ಯುಳ್ಳವರ  ಆ ಫಲವು ನಾಶಯುಕ್ತವಾಗಿದೆ, ಹಾಗೂ ಆ ದೇವತೆಗಳನ್ನು ಪೂಜಿಸುವವರು ದೇವತೆಗಳನ್ನು ಪಡೆಯುತ್ತಾರೆ.ಆದರೆ ನನ್ನ ಭಕ್ತರು ಹೇಗಾದರೂ ಭಜಿಸಲಿ,ಕಡೆಯಲ್ಲಿ ಅವರು ನನ್ನನ್ನೇ ಸೇರುತ್ತಾರೆ.

        *ಅವ್ಯಕ್ತಂ ವ್ಯಕ್ತಿಮಾಪನ್ನಂ ಮನ್ಯಂತೇ ಮಾಮಬುದ್ದಯ:/*

*ಪರಂ ಭಾವಮಜಾನಂತೋ ಮಮಾವ್ಯಯಮನುತ್ತಮಮ್//೨೪//*

 ಬುದ್ಧಿಹೀನರಾದ ಪುರುಷರು ನನ್ನ ಉತ್ಕೃಷ್ಟ ವೂ, ಅನಿನಾಶಿಯೂ ಆದ ಪರಮ ಭಾವವನ್ನು ತಿಳಿಯದೆ ಮನಸ್ಸು _ ಇಂದ್ರಿಯಗಳಿಗಿಂತ ಪರನಾದ ಸಚ್ಚಿದಾನಂದಘನ ಪರಮಾತ್ಮನಾದ ನನ್ನನ್ನು ಮನುಷ್ಯರಂತೆ ಹುಟ್ಟಿ ಬಂದು ವ್ಯಕ್ತಿಭಾವವನ್ನು ಪಡೆದಿರುವನೆಂದು ತಿಳಿಯುತ್ತಾರೆ.

***

 *ನಾಹಂ ಪ್ರಕಾಶ: ಸರ್ವಸ್ಯ ಯೋಗಮಾಯಾಸಮಾವೃತ:/*

*ಮೂಢೋಯಂ ನಾಭಿಜಾನಾತಿ ಲೋಕೋ ಮಾಮಜವ್ಯಯಮ್//೨೫//*

  ನನ್ನ ಯೋಗಮಾಯೆಯಿಂದ ಅಡಗಿರುವ ನಾನು ಎಲ್ಲರಿಗೂ ಪ್ರತ್ಯಕ್ಷನಾಗುವುದಿಲ್ಲ.ಆದ್ದರಿಂದ ಈ ಅಜ್ಞಾನಿ ಜನಸಮುದಾಯವು ಜನ್ಮರಹಿತನಾದ , ಅವಿನಾಶಿಯಾದ ,ಪರಮೇಶ್ವರನಾದ ನನ್ನನ್ನು ತಿಳಿಯುವುದಿಲ್ಲ ಅರ್ಥಾತ್ ನನ್ನನ್ನು ಜಙ _ ಮರಣವುಳ್ಳವನೆಂದು ತಿಳಿಯುತ್ತದೆ.

      *ವೇದಾಹಂ ಸಮತೀತಾನಿ ವರ್ತಮಾನಾನಿ ಚಾರ್ಜುನ/*

*ಭವಿಷ್ಯಾಣಿ ಚ ಭೂತಾನಿ ಮಾಂ ತು ವೇದ ನ ಕಶ್ಚನ//೨೬//*

    ಹೇ ಅರ್ಜುನಾ! ಹಿಂದೆ ಕಳೆದು ಹೋದ ಮತ್ತು ವರ್ತಮಾನದಲ್ಲಿ ಇರುವ ಹಾಗೂ ಮುಂದೆ ಹುಟ್ಟಲಿರುವ ಎಲ್ಲ ಪ್ರಾಣಿಗಳನ್ನು ನಾನು ಬಲ್ಲೆ. ಆದರೆ, ನನ್ನನ್ನು ಶ್ರದ್ಧಾ _ ಭಕ್ತಿರಹಿತನಾದ ಯಾವ ಪುರುಷನೂ ತಿಳಿಯುವುದಿಲ್ಲ.

***

-ವಿಜಯಾ ಶೆಟ್ಟಿ ಸಾಲೆತ್ತೂರು (ಸಾರ ಸಂಗ್ರಹ)