ಗೀತಾಮೃತ - 3

ಅಧ್ಯಾಯ ೨
ಏಷಾ ತೇ ಭಿಹಿತಾ ಸಾಂಖ್ಯೇ ಬುದ್ಧಿರ್ಯೋಗೇ ತ್ವಿಮಾಂ ಶೃಣು/
ಬುದ್ಧ್ಯಾ ಯುಕ್ತೋ ಯಯಾ ಪಾರ್ಥ ಕರ್ಮಬಂಧಂ ಪ್ರಹಾಸ್ಯಸಿ//೩೯//
ಹೇ ಪಾರ್ಥನೇ ! ಈ ಬುದ್ಧಿಯು ನಿನಗೆ ಜ್ಞಾನಯೋಗದ ವಿಷಯದಲ್ಲಿ ಹೇಳಲ್ಪಟ್ಟಿತು.ಮತ್ತು ಈಗ ಅದನ್ನು ಕರ್ಮಯೋಗದ ವಿಷಯದಲ್ಲಿ ಕೇಳು.ಇಂತಹ ಸಮಬುದ್ಧಿಯಿಂದ ಯುಕ್ತನಾಗಿ ನೀನು ಕರ್ಮಗಳ ಬಂಧನವನ್ನು ಸಂಪೂರ್ಣವಾಗಿ ಕಳೆದುಕೊಳ್ಳುವೆ, ಆದರೆ ಕರ್ಮಬಂಧನದಿಂದ ಬಿಡುಗಡೆ ಹೊಂದುವೆ.
ನೇಹಾಭಿಕ್ರಮನಾಶೋಸ್ತಿ ಪ್ರತ್ಯವಾಯೋ ನ ವಿದ್ಯತೇ/
ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್//೪೦//
ಈ ಕರ್ಮಯೋಗದಲ್ಲಿ ಉಪಕ್ರಮ ಅರ್ಥಾತ್ ಬೀಜದ ನಾಶವಾಗುವುದಿಲ್ಲ ಮತ್ತು ಇದರಲ್ಲಿ ವಿರುದ್ಧವಾದ ಫಲರೂಪೀ ದೋಷವೂ ಕೂಡ ಇಲ್ಲ. ಅಲ್ಲದೆ ಈ ಕರ್ಮಯೋಗ ರೂಪೀ ಧರ್ಮದ ಸ್ವಲ್ಪವಾದ ಸಾಧನವೂ ಕೂಡ ಜನ್ಮ ಮೃತ್ಯುವಾದ ಮಹಾನ್ ಭಯದಿಂದ ರಕ್ಷಿಸುತ್ತದೆ.
*****
ಕಾಮಾತ್ಮಾನ: ಸ್ವರ್ಗಪದಾ ಜನ್ಮಕರ್ಮಫಲಪ್ರದಾಮ್/
ಕ್ರಿಯಾವಿಶೇಷಬಹುಲಾಂ ಭೋಂಗೈಶ್ವರ್ಯಗತಿಂ ಪ್ರತಿ//೪೩//
ಭೋಗೈಶ್ವರ್ಯಪ್ರಸಕ್ತಾನಾಂ ತಯಾಪಹೃತಚೇತಸಾಮ್/
ವ್ಯವಸಾಯಾತ್ಮಿಕಾ ಬುದ್ಧಿ: ಸಮಧೌ ನ ವಿಧೀಯತೇ//೪೪//
ಯಾರ ಬುದ್ಧಿಯಲ್ಲಿ ಸ್ವರ್ಗವೇ ಪರಮಪ್ರಾಪ್ಯವಸ್ತುವಾಗಿದೆಯೋ ಮತ್ತು ಸ್ವರ್ಗಕ್ಕಿಂತ ಮಿಗಿಲಾದ ಎರಡನೇ ವಸ್ತುವೇ ಇಲ್ಲ __ ಹೀಗೆ ಹೇಳುವವರಿದ್ದಾರೋ ಆ ಅವಿವೇಕಿ ಜನರು ಈ ಪ್ರಕಾರದ ಯಾವ ಪುಷ್ಟಿತವಾದ ಅರ್ಥಾತ್ ತೋರಿಕೆಗೆ ಮಾತ್ರ ಶೋಭೆಯಿಂದ ಕೂಡಿದ ವಾಣಿಯನ್ನು ಹೇಳುತ್ತಿರುತ್ತಾರೋ, ಅದು ಜನ್ಮ ರೂಪೀ _ ಕರ್ಮಫಲವನ್ನು ಕೊಡುವುದಾಗಿಯೂ ಮತ್ತು ಭೋಗ ಹಾಗೂ ಐಶ್ವರ್ಯದ ಪ್ರಾಪ್ತಿ ಗಾಗಿ ನಾನಾ ಪ್ರಕಾರದ, ಬಹಳಷ್ಟು ಕ್ರಿಯೆಗಳ ವರ್ಣನೆಯನ್ನು ಮಾಡುವುದಾಗಿದೆಯೋ ಆ ವಾಣಿಯ ಮೂಲಕ ಯಾರ ಚಿತ್ತವು ಅಪಹರಿಸಲ್ಪಟ್ಟಿದೆಯೋ ಯಾರು ಭೋಗ ಮತ್ತು ಐಶ್ವರ್ಯದಲ್ಲಿ ಅತ್ಯಂತ ಆಸಕ್ತ ಆಸಕ್ತರಾಗಿದ್ದಾರೋ ಆ ಪುರುಷರಿಗೆ ಪರಮಾತ್ಮನಲ್ಲಿ ನಿಶ್ಚಯಾತ್ಮಿಕಾ ಬುದ್ಧಿಯು ಇರುವುದಿಲ್ಲ.
ಸಾರ ಸಂಗ್ರಹ: ವಿಜಯಾ ಶೆಟ್ಟಿ, ಸಾಲೆತ್ತೂರು