ಗೀತಾಮೃತ-32
*ಅಧ್ಯಾಯ ೯*
*ತಪಾಮ್ಯಹಮಹಂ ವರ್ಷಂ ನಿಗೃಹ್ಣಾಮ್ಯುತ್ಸೃಜಾಮಿ ಚ/*
*ಅಮೃತಂ ಚೈವ ಮೃತ್ಯುಶ್ಚ ಸದಸಚ್ಚಾಹಮರ್ಜುನ//೧೯//*
ನಾನೇ ಸೂರ್ಯನ ರೂಪದಿಂದ ಬೆಳಗುತ್ತಿದ್ದೇನೆ,ಮಳೆಯನ್ನು ಆಕರ್ಷಿಸಿ ಅದನ್ನು ಸುರಿಸುತ್ತೇನೆ.ಹೇ ಅರ್ಜುನನೇ ! ನಾನೇ ಅಮೃತ ಮತ್ತು ಮೃತ್ಯುವಾಗಿದ್ದೇನೆ ಮತ್ತು ಸತ್ _ ಅಸತ್ ಕೂಡ ನಾನೇ ಆಗಿದ್ದೇನೆ.
*ತ್ರೈವಿದ್ಯಾ ಮಾಂ ಸೋಮಪಾ: ಪೂತಪಾಪಾ ಯಜ್ಞೈ ರಿಷ್ಟ್ವಾ ಸ್ವರ್ಗತಿಂ ಪ್ರಾರ್ಥಯಂತೇ/*
*ತೇ ಪುಣ್ಯಮಾಸಾದ್ಯ ಸುರೇಂದ್ರ ಲೋಕಮಶ್ನಂತಿ ದಿವ್ಯಾನ್ದಿವಿ ದೇವಭೋಗಾನ್//೨೦//*
ಮೂರೂ ವೇದಗಳಲ್ಲಿ ವಿಧಿಸಿರುವ ಸಕಾಮ ಕರ್ಮಗಳನ್ನು ಮಾಡುವ,ಸೋಮರಸ ಪಾನಮಾಡುವ ಪಾಪರಹಿತ ಪರುಷರು ನನ್ನನ್ನು ಯಜ್ಞಗಳ ಮೂಲಕ ಪೂಜಿಸಿ ಸ್ವರ್ಗದ ಪ್ರಾಪ್ತಿಯನ್ನು ಬಯಸುತ್ತಾರೆ.ಆ ಪುರುಷರು ತಮ್ಮ ಪುಣ್ಯಗಳ ಫಲರೂಪವಾದ ಸ್ವರ್ಗಲೋಕವನ್ನು ಪಡೆದು ಸ್ವರ್ಗದಲ್ಲಿ ದಿವ್ಯವಾದ ದೇವತೆಗಳ ಭೋಗಗಳನ್ನು ಭೋಗಿಸುತ್ತಾರೆ.
***
*ತೇ ತಂ ಭುಕ್ತ್ವಾ ಸ್ವರ್ಗಲೋಕಂ ವಿಶಾಲಂ ಕ್ಷೀಣೇ ಪುಣ್ಯೇ ಮರ್ತ್ಯಲೋಕಂ ವಿಶಂತಿ/* *ಏವಂ ತ್ರಯಾಧರ್ಮಮನುಪ್ರಸನ್ನಾ ಗತಾಗತಂ ಕಾಮಕಾಮಾ ಲಭಂತೇ//೨೧//*
ಅವರು ಆ ವಿಶಾಲವಾದ ಸ್ವರ್ಗಲೋಕವನ್ನು ಭೋಗಿಸಿ ಪುಣ್ಯವು ಕ್ಷೀಣಿಸಿದ ನಂತರ ಮರ್ತ್ಯಲೋಕವನ್ನು ಪಡೆಯುತ್ತಾರೆ.ಈ ಪ್ರಕಾರವಾಗಿ ಸ್ವರ್ಗದ ಸಾಧನರೂಪೀ ಮೂರೂ ವೇದಗಳಲ್ಲಿ ಹೇಳಿರುವ ಸಕಾಮಕರ್ಮದ ಆಶ್ರಯವನ್ನು ಪಡೆಯುವ ಮತ್ತು ಭೋಗಗಳ ಕಾಮನೆಯುಳ್ಳ ಪುರುಷರು ಪದೇ ಪದೇ ಆವಾಗಮನವನ್ನು ಪಡೆಯುತ್ತಾರೆ.ಅರ್ಥಾತ್ ಪುಣ್ಯದ ಪ್ರಭಾವದಿಂದ ಸ್ವರ್ಗಕ್ಕೆ ಹೋಗುತ್ತಾರೆ ಮತ್ತು ಪುಣ್ಯವು ಕ್ಷೀಣಿಸಿದ ನಂತರ ಮರ್ತ್ಯಲೋಕಕ್ಕೇ ಬರುತ್ತಾರೆ.
*ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾ: ಪರ್ಯುಪಾಸತೇ/*
*ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ಮಹಾಮ್ಯಹಮ್//೨೨//*
ಯಾವ ಅನನ್ಯ ಪ್ರೇಮೀ ಭಕ್ತಜನರು ಪರಮೇಶ್ವರನಾದ ನನ್ನನ್ನು ನಿರಂತರ ಚಿಂತಿಸುತ್ತಾ ನಿಷ್ಕಾಮಭಾವದಿಂದ ಭಜಿಸುತ್ತಾರೋ,ಆ ನಿತ್ಯ ನಿರಂತರ ನನ್ನ ಚಿಂತನೆಯನ್ನು ಮಾಡುವ ಪುರುಷರ ಯೋಗಕ್ಷೇಮವನ್ನು ನಾನೇ ಸ್ವಯಂ ವಹಿಸಿಕೊಳ್ಳುತ್ತೇನೆ.
***
*ಯೇಪ್ಯನ್ಯದೇವತಾ ಭಕ್ತಾ ಯಜಂತೇ ಶ್ರದ್ಧಯಾನ್ವಿತಾ:/*
*ತೇಪಿ ಮಾಮೇವ ಕೌಂತೇಯ ಯಜಂತ್ಯವಿಧಿಪೂರ್ವಕಮ್//೨೩//*
ಹೇ ಅರ್ಜುನನೇ! ಒಂದೊಮ್ಮೆ ಶ್ರದ್ಧೆಯಿಂದ ಯುಕ್ತರಾದ ಯಾವ ಸಕಾಮ ಭಕ್ತರು ಬೇರೆ ದೇವತೆಗಳನ್ನು ಪೂಜಿಸಿದರೂ ಅದು ಕೂಡ ನನ್ನ ಪೂಜೆಯೇ ಆಗಿದೆ.ಆದರೆ ಅವರ ಆ ಪೂಜೆಯು ಅವಧಿಪೂರ್ವಕ ಅರ್ಥಾತ್ ಅಜ್ಞಾನಪೂರ್ವಕವಾಗಿದೆ.
*ಅಹಂ ಹಿ ಸರ್ವಯಜ್ಞಾನಾಂ ಭೋಕ್ತಾಚ ಪ್ರಭುರೇವ ಚ/*
*ನ ತು ಮಾಮಭಿಜಾನಂತಿ ತತ್ತ್ವೇನಾತಶ್ಚ್ಯವಂತಿ ತೇ//೨೪//*
ಏಕೆಂದರೆ ಸಂಪೂರ್ಣ ಯಜ್ಞಗಳ ಬೋಕ್ತ್ಯವು ಮತ್ತು ಒಡೆಯನೂ ಕೂಡ ನಾನೇ ಆಗಿದ್ದೇನೆ,ಆದರೆ ಅವರು ಪರಮೇಶ್ವರನಾದ ನನ್ನನ್ನು ತತ್ತ್ವದಿಂದ ತಿಳಿಯುವುದಿಲ್ಲ,ಇದರಿಂದ ಪತನರಾಗುತ್ತಾರೆ ಅರ್ಥಾತ್ ಪುನರ್ಜನ್ಮವನ್ನು ಪಡೆಯುತ್ತಾರೆ.
***
*ಯಾಂತಿ ದೇವವ್ರತಾ ದೇವಾನ್ ಪಿತೃನ್ಯಾಂತಿ ಪಿತೃವ್ರತಾ:/*
*ಭೂತಾನಿ ಯಾಂತಿ ಭೂತೇಜ್ಯಾ ಯಾಂತಿ ಮದ್ಯಾಜಿನೋಪಿ ಮಾವ್//೨೫//*
ದೇವತೆಗಳನ್ನು ಪೂಜಿಸುವವರು ದೇವತೆಗಳನ್ನು ಪಡೆಯುತ್ತಾರೆ..ಪಿತೃಗಳನ್ನು ಪೂಜಿಸುವವರು ಪಿತೃಗಳನ್ನು ಪಡೆಯುತ್ತಾರೆ,ಭೂತಗಲನ್ನು ಪೂಜಿಸುವವರು ಭೂತಗಳನ್ನು
ಪಡೆಯುತ್ತಾರೆ ಮತ್ತು ನನ್ನನ್ನು ಪೂಜಿಸುವವರು ನನ್ನನ್ನೇ ಪಡೆಯುತ್ತಾರೆ. ಅದಕ್ಕಾಗಿ ನನ್ನ ಭಕ್ತರಿಗೆ ಪುನರ್ಜನ್ಮವಾಗುವುದಿಲ್ಲ.
*ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ /*
*ತದಹಂ ಭಕ್ತ್ಯಾಪಹೃತಮಶ್ನಾಮಿ ಪ್ರಯತಾತ್ಮನ://೨೬//*
ಯಾವ ಭಕ್ತನೇ ಆಗಲಿ ನನಗೆ ಪ್ರೇಮದಿಂದ ಪತ್ರ,ಪುಷ್ಪ,ಫಲ ಮೊದಲಾದುವುಗಳನ್ನು ಅರ್ಪಿಸುತ್ತಾನೆಯೋ ,ಆ ಶುದ್ಧಬುದ್ಧಿಯುಳ್ಳ ನಿಷ್ಕಾಮ ಪ್ರೇಮಿಯಾದ ಭಕ್ತನು ,ಪ್ರೇಮಪೂರ್ವಕವಾಗಿ ಅರ್ಪಿಸಿದ ಆ ಪತ್ರಪುಷ್ಪಾದಿಗಳನ್ನು ನಾನು ಸಗುಣರೂಪದಿಂದ ಪ್ರಕಟನಾಗಿ ಪ್ರೀತಿಸಹಿತ ಸ್ವೀಕರಿಸುತ್ತೇನೆ.
***
-ವಿಜಯಾ ಶೆಟ್ಟಿ ಸಾಲೆತ್ತೂರು (ಸಾರ ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್