ಗೀತಾಮೃತ- 34
*ಅಧ್ಯಾಯ ೧೦*
*//ಅಥ ದಶಮೋಧ್ಯಾಯ://*
*ವಿಭೂತಿಯೋಗವು*
*ಶ್ರೀ ಭಗವಾನುವಾಚ*
*ಭೂಯ ಏವ ಮಹಾಬಾಹೋ ಶೃಣು ಮೇ ಪರಮಂ ವಚ:/*
*ಯತ್ತೇಹಂ ಪ್ರೀಯಮಾಣಾಯ ವಕ್ಷ್ಯಾಮಿ ಹಿತಕಾಮ್ಯಯಾ//೧//*
ಶ್ರೀ ಭಗವಂತನು ಹೇಳಿದನು _ ಹೇ ಮಹಾಬಾಹುವೇ! ನನ್ನಲ್ಲಿ ಮಿಗಿಲಾದ ಪ್ರೀತಿಯುಳ್ಳವನಾದ ನಿನಗೆ ನನ್ನ ಪರಮ ರಹಸ್ಯವಾದ ಮತ್ತು ಮಹಾತ್ಮ್ಯಸಹಿತ ವಚನಗಳನ್ನು ನಿನ್ನ ಹಿತಕ್ಕಾಗಿ ಇನ್ನೊಮ್ಮೆ ಹೇಳಿದೆನು,ಅದನ್ನು ಕೇಳು.
*ನ ಮೇ ವಿದು: ಸುರಗಣಾ: ಪ್ರಭವಂ ನ ಮಹರ್ಷಯಂ/*
*ಅಹಮಾದಿರ್ಹಿ ದೇವಾನಾಂ ಮಹರ್ಷಿಣಾಂ ಚ ಸರ್ವಶ://೨//*
ನನ್ನ ಉತ್ಪತ್ತಿ ಯನ್ನು ಅರ್ಥಾತ್ ಲೀಲೆಯಿಂದ ಪ್ರಕಟವಾಗುವುದನ್ನು ದೇವತೆಗಳಾಗಲೀ,ಮಹರ್ಷಿಗಳಾಗಲಿ ತಿಳಿಯುವುದಿಲ್ಲ; ಏಕೆಂದರೆ ನಾನು ಎಲ್ಲ ಪ್ರಕಾರದಿಂದ ದೇವತೆಗಳಿಗೂ ಮತ್ತು ಮಹರ್ಷಿಗಳಿಗೂ ಕೂಡ ಆದಿಕಾರಣನಾಗಿದ್ದೇನೆ.
***
*ಯೋ ಮಾಮಜಮನಾದಿಂ ಚ ವೇತ್ತಿ ಲೋಕಮಹೇಶ್ವರಮ್/*
*ಅಸಮ್ಮೂಢ: ಸ ಮರ್ತ್ಯೇಷು ಸರ್ವಪಾಪೈ: ಪ್ರಮುಚ್ಯತೇ//೩//*
ಯಾರು ನನ್ನನ್ನು ಆಜನ್ಮಾ ಅರ್ಥಾತ್ ವಾಸ್ತವವಾಗಿ ಜನ್ಮರಹಿತ,ಅನಾದಿ ಮತ್ತು ಲೋಕಗಳ ಮಹಾನ್ ಒಡೆಯನೆಂದು ತತ್ವದಿಂದ ತಿಳಿಯುತ್ತಾನೋ,ಮನುಷ್ಯರಲ್ಲಿ ಜ್ಞಾನಿಯಾದ ಅವನು ಸಮಸ್ತ ಪಾಪಗಳಿಂದ ಮುಕ್ತನಾಗಿ ಬಿಡುತ್ತಾನೆ.
*ಬುದ್ಧಿರ್ಜ್ಞಾನಮಸಂಮೋಹ: ಕ್ಷಮಾ ಸತ್ಯಂ ದಮ: ತಮ:/*
*ಸುಖಂ ದು:ಖಂ ಭವೋಭಾವೋ ಭಯಂ ಚಾಭಯಮೇವ ಚ//೪//*
ನಿಶ್ಚಯ ಮಾಡುವ ಶಕ್ತಿ,ಯಥಾರ್ಥಜ್ಞಾನ,ಅಸಂಮೂಢತೆ,ಕ್ಷಮಾಗುಣ,ಸತ್ಯ,ಇಂದ್ರಿಯಗಳನ್ನು ವಶದಲ್ಲಿಡುವುದು,ಮನೋನಿಗ್ರಹ ಹಾಗೂ ಸುಖ ದು:ಖ,ಉತ್ಪತ್ತಿ ಪ್ರಳಯ ಮತ್ತುಭಯ ಅಭಯಗಳು ನನ್ನಿಂದಲೇ.
***
*ಅಹಿಂಸಾ ಸಮತಾ ತುಷ್ಟಿಸ್ತಪೋ ದಾನಂ ಯಶೋಯಶ:/*
*ಭವಂತಿ ಭಾವಾ ಭೂತಾನಾಂ ಮತ್ತ ಏವ ಪೃಥಗ್ವಿಧಾ://೫//*
ಭಯ ಅಭಯ ಹಾಗೂ ಅಹಿಂಸೆ,ಸಮತ್ವ ,ಸಂತೋಷ,ತಪಸ್ಸು,ದಾನ,ಕೀರ್ತಿ ಮತ್ತು ಅಪಕೀರ್ತಿ ಇಂತಹ ಅನೇಕ ಪ್ರಕಾರದ ಪ್ರಾಣಿಗಳ ಭಾವಗಳೆಲ್ಲವೂ ನನ್ನಿಂದಲೇ ಉತ್ಪತ್ತಿಯಾಗುತ್ತವೆ.
* *ಮಹರ್ಷಯ: ಸಪ್ತ ಪೂರ್ವೇ ಚತ್ವಾರೋ ಮನವಸ್ತಥಾ/*
*ಮದ್ಭಾವಾ ಮಾನಸಾ ಜಾತಾ ಯೇಷಾಂ ಲೋಕ ಇಮಾ: ಪ್ರಜಾ://೬//*
ಈ ಜಗತ್ತಿನಲ್ಲಿ ಯಾವ ಸಮಸ್ತಪ್ರಜೆಗಳು ಇವೆಯೋ ಅಂತಹ _ ಸಪ್ತೃಷಿಗಳು,ಅವರಿಗಿಂತಲೂ ಹಿಂದೆ ಆಗಿಹೋದ ನಾಲ್ವರು ಸನಕಾದಿಗಳು ಹಾಗೂ ಸ್ವಾಯಂಭುವ ಮೊದಲಾದ ಹದಿನಾಲ್ಕು ಮನುಗಳು,ಇವರೆಲ್ಲ ನನ್ನಲ್ಲಿ ಭಾವವುಳ್ಳವರಾಗಿ ನನ್ನ ಸಂಕಲ್ಪದಿಂದಲೇ ಹುಟ್ಟಿದವರಾಗಿದ್ದಾರೆ.
***
*ಏತಾಂ ವಿಭೂತಿಂ ಯೋಗಂ ಚ ಮಮ ಯೋ ವೇತ್ತಿ ತತ್ತ್ವತ:/*
*ಸೋವಿಕಂಪೇನ ಯೋಗೇನ ಯುಜ್ಯತೇ ನಾತ್ರ ಸಂಶಯ:/*
ಯಾವ ಪುರುಷನು ನನ್ನ ಈ ಪರಮೈಶ್ಚರ್ಯರೂಪೀ ವಿಭೂತಿಯನ್ನು ಮತ್ತು ಯೋಗಶಕ್ತಿಯನ್ನು ತತ್ವದಿಂದ ತಿಳಿಯುತ್ತಾನೋ ಅವನು ನಿಶ್ಚಲವಾದ ಭಕ್ತಿಯೋಗದಿಂದ ಯುಕ್ತನಾಗುತ್ತಾನೆ ಎಂಬುದರಲ್ಲಿ ಯಾವುದೇ ಸಂಶಯವೂ ಇಲ್ಲ.
*ಅಹಂ ಸರ್ವಸ್ವ ಪ್ರಭವೋ ಮತ್ತ: ಸರ್ವಂ ಪ್ರವರ್ತತೇ/*
*ಇತಿ ಮತ್ವಾ ಭಜಂತೇ ಮಾಂ ಬುಧಾ ಭಾವಸಮನ್ವಿತಾ://೮//*
ವಾಸುದೇವನಾದ ನಾನೇ ಸಂಪೂರ್ಣ ಜಗತ್ತಿನ ಉತ್ಪತ್ತಿಗೆ ಕಾರಣನಾಗಿದ್ದೇನೆ ಮತ್ತು ನನ್ನಿಂದಲೇ ಎಲ್ಲ ಜಗತ್ತು ವರ್ತಿಸುತ್ತದೆ.ಈ ಪ್ರಕಾರವಾಗಿ ತಿಳಿದುಕೊಂಡು ಶ್ರದ್ಧೆ ಮತ್ತು ಭಕ್ತಿಯಿಂದ ಕೂಡಿದವರು ಬುದ್ಧಿವಂತರಾದ ಭಕ್ತಜನರು ಪರಮೇಶ್ವರನಾದ ನನ್ನನ್ನೇ ನಿರಂತರ ಭಜಿಸುತ್ತಾರೆ.
***
(ಸಾರ ಸಂಗ್ರಹ) - ವಿಜಯಾ ಶೆಟ್ಟಿ ಸಾಲೆತ್ತೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ