ಗೀತಾಮೃತ - 36

ಗೀತಾಮೃತ - 36

*ಅಧ್ಯಾಯ  ೧೦*

          *ಕಥಂ ವಿದ್ಯಾಮಹಂ ಯೋಗಿಂಸ್ತ್ವಾಂ  ಸದಾ ಪರಿಚಿಂತಯನ್/*

*ಕೇಷು ಕೇಷು ಚ ಭಾವೇಷು ಚಿಂತ್ಯೋಸಿ ಭಗವನ್ಮಯಾ//೧೭//*      ಹೇ ಯೋಗೀಶ್ವರ! ನಾನು ಯಾವ ಪ್ರಕಾರವಾಗಿ ನಿರಂತರ ಚಿಂತನೆ ಮಾಡುತ್ತಾ ನಿನ್ನನ್ನು ಅರಿಯಲಿ; ಮತ್ತು ಹೇ ಭಗವಂತಾ! ನೀನು ಯಾವ ಯಾವ ಭಾವಗಳಿಂದ ನನ್ನ ಮೂಲಕ ಚಿಂತಿಸಲ್ಪಡಲು ಯೋಗ್ಯನಾಗಿರುವೆ?

     *ವಿಸ್ತರೇಣಾತ್ಮನೋ ಯೋಗ: ವಿಭೂತಿಂ ಚ ಜನಾರ್ದನ/*

*ಭೂಯ: ಕಥಯ ತೃಪ್ತಿರ್ಹಿ ಶೃಣ್ವತೋ ನಾಸ್ತಿ ಮೇಮೃತಮ್//೧೮//*    

ಹೇ ಜನಾರ್ದನ! ನಿನ್ನ ಯೋಗಶಕ್ತಿಯನ್ನು ಮತ್ತು ವಿಭೂತಿಗಳನ್ನು ಇನ್ನೂ ವಿಸ್ತಾರ ಪೂರ್ವಕವಾಗಿ ಹೇಳು.ಏಕೆಂದರೆ ನಿನ್ನ ಅಮೃತಮಯವಾದ ವಚನಗಳನ್ನು ಕೇಳಿದಷ್ಟು ತೃಪ್ತಿ ಯಾಗುವುದಿಲ್ಲ.ಅರ್ಥಾತ್ ಕೇಳಬೇಕೆನ್ನುವ ಉತ್ಕಂಠತೆ ಹೆಚ್ಚುತ್ತಾ ಇದೆ.

***

*ಶ್ರೀ ಭಗವಾನುವಾಚ*

*ಹಂತ ತೇ ಕಥಯಿಷ್ಯಾಮಿ ದಿವ್ಯಾ ಹ್ಯಾತ್ಮವಿಭೂತಯ:/*

*ಪ್ರಾಧಾನ್ಯತ: ಕುರುಶ್ರೇಷ್ಠನಾಸ್ತ್ಯಂತೋ ವಿಸ್ತರಸ್ಯ ಮೇ//೧೯//*

      ಶ್ರೀ ಭಗವಂತನು ಹೇಳಿದನು _ ಹೇ ಕುರುಶ್ರೇಷ್ಠನೇ! ನಾನು ನನ್ನ ದಿವ್ಯವಾದ ವಿಭೂತಿಗಳನ್ನು ಈಗ ನಿನಗೋಸ್ಕರ ಪ್ರಧಾನತೆಯಿಂದ ಹೇಳುವೆನು.ಏಕೆಂದರೆ ನನ್ನ ವಿಸ್ತಾರದ ಅಂತ್ಯ ಇರುವುದಿಲ್ಲ.

      *ಅಹಮಾತ್ಮಾ ಗುಡಾಕೇಶ ಸರ್ವಭೂತಾಶಯಸ್ಥಿತ:/*

*ಅಹಮಾದಿಶ್ಚ ಮಧ್ಯಂ ಚ ಭೂತಾನಾಮಂತ ಏವ ಚ//೨೦//*

      ಹೇ ಅರ್ಜುನನೇ! ನಾನು ಎಲ್ಲ ಭೂತಗಳ ಹೃದಯದಲ್ಲಿ ಸ್ಥಿತನಾಗಿದ್ದು ಎಲ್ಲರ ಆತ್ಮವಾಗಿದ್ದೇನೆ ಹಾಗೂ ಸಂಪೂರ್ಣ ಭೂತಗಳ ಆದಿ,ಮಧ್ಯ ಮತ್ತು ಅಂತ್ಯವು ಸಹ ನಾನೇ ಆಗಿದ್ದೇನೆ.

***

*ಆದಿತ್ಯನಾಮಹಂ ವಿಷ್ಣುರ್ಜೋತಿಷಾಂ ರವಿರಂಶುಮಾನ್/*

*ಮರೀಚಿರ್ಮರುತಾಮಸ್ಮಿ ನಕ್ಷತ್ರಾಣಾಮಹಂ ಶಶೀ//೨೧//*

   ನಾನು ಅದಿತಿಯ ಹನ್ನೆರಡು ಪುತ್ರರಲ್ಲಿ ವಿಷ್ಣುವು ಮತ್ತು ಜ್ಯೋತಿಗಳಲ್ಲಿ ಕಿರಣಗಳುಳ್ಳ ಸೂರ್ಯನಾಗಿದ್ದೇನೆ.ಹಾಗೆಯೇ ನಾನು ನಲವತ್ತೊಂಭತ್ತು ವಾಯುದೇವತೆಗಳ ತೇಜಸ್ಸು ಮತ್ತು ನಕ್ಷತ್ರಗಳ ಅಧಿಪತಿಯಾದ ಚಂದ್ರನಾಗಿದ್ದೇನೆ.

     *ವೇದಾನಾಂ ಸಾಮವೇದೋಸ್ಮಿ ದೇವನಾಮಸ್ಮಿ ವಾಸವ:/*

*ಇಂದ್ರಿಯಾಣಾಂ ಮನಶ್ಚಾಸ್ಮಿ ಭೂತಾನಾಮಸ್ಮಿ ಚೇತಾನಾಮಸ್ಮಿಚೇತನಾ//೨೨//*

   ನಾನು ವೇದಗಳಲ್ಲಿ ಸಾಮವೇದವಾಗಿದ್ದೇನೆ,ದೇವತೆಗಳಲ್ಲಿ ಇಂದ್ರನಾಗಿದ್ದೇನೆ.ಇಂದ್ರಿಯಗಳಲ್ಲಿ ಮನಸ್ಸಾಗಿದ್ದೇನೆ ಮತ್ತು ಭೂತ _ ಪ್ರಾಣಿಗಳ ಚೇತನ ಅರ್ಥಾತ್ ಜೀವನ ಶಕ್ತಿಯಾಗಿದ್ದೇನೆ.

***

    *ಮಹರ್ಷೀಣಾಂ ಭೃಗುರಹಂ ಗಿರಾಮಸ್ಮ್ಯೇಕಮಕ್ಷರಮ್*

*ಯಜ್ಞಾನಾಂ ಜಪಯಜ್ಞೋಸ್ಮಿ ಸ್ಥಾವರಾಣಾಂ ಹಿಮಾಲಯ://೨೫//*

    ಮಹರ್ಷಿಗಳಲ್ಲಿ ಭೃಗುವು ನಾನು ಮತ್ತು ಶಬ್ದಗಳಲ್ಲಿ ಏಕಾಕ್ಷರ ಅರ್ಥಾತ್ ಓಂಕಾರನಾಗಿದ್ದೇನೆ.ಎಲ್ಲ ಪ್ರಕಾರದ ಯಜ್ಞಗಳಲ್ಲಿ ಜಪಯಜ್ಞವೂ ಮತ್ತು ಸ್ಥಿರವಾಗಿರುವುದರಲ್ಲಿ ಹಿಮಾಲಯ ಪರ್ವತವು ನಾನಾಗಿದ್ದೇನೆ.

*ಅಶ್ವತ್ಥ:  ಸರ್ವವೃಕ್ಷಾಣಾಂ ದೇವರ್ಷೀಣಾಂ  ಚ ನಾರದ: /*

*ಗಂಧರ್ವಾಣಾಂ ಚಿತ್ರರಥ: ಸಿದ್ಧಾನಾಂ ಕಪಿಲೋ ಮುನಿ://೨೬//*

  ನಾನು ಎಲ್ಲಾ ವೃಕ್ಷಗಳಲ್ಲಿ ಅಶ್ವತ್ಥ ವೃಕ್ಷವೂ ದೇವರ್ಷಿಗಳಲ್ಲಿ ನಾರದಮುನಿಯೂ ಗಂಧರ್ವರಲ್ಲಿ ಚಿತ್ರರಥನು ಮತ್ತು ಸಿದ್ಧರಲ್ಲಿ ಕಪಿಲಮುನಿಯು ಆಗಿದ್ದೇನೆ.

***

(ಸಾರ ಸಂಗ್ರಹ) - ವಿಜಯಾ ಶೆಟ್ಟಿ ಸಾಲೆತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ