ಗೀತಾಮೃತ - 37

*ಅಧ್ಯಾಯ ೧೦*
*ಉಚ್ಛೈಶ್ರವಸಮಶ್ವಾನಾಂ ವಿದ್ಧಿ ಮಾಮಮೃತೋದ್ಭವಮ್ /*
*ಐರಾವತಂ ಗಜೇಂದ್ರಾಣಾಂ ನರಾಣಾಂ ಚ ನರಾಧಿಪಮ್//೨೭//*
ಕುದುರೆಗಳಲ್ಲಿ ಅಮೃತದ ಜೊತೆಯಲ್ಲಿ ಉತ್ಪನ್ನವಾದ ಉಚ್ಛೈಶ್ರವಾ ಎಂಬ ಹೆಸರಿನ ಕುದುರೆಯೂ ಶ್ರೇಷ್ಠವಾದ ಆನೆಗಳಲ್ಲಿ ಐರಾವತವೆಂಬ ಹೆಸರಿನ ಆನೆಯೂ ಮತ್ತು ಮನುಷ್ಯರಲ್ಲಿ ರಾಜನೂ ನಾನೇ ಎಂಬುದನ್ನು ತಿಳಿ.
*ಆಯುಧಾನಾಮಹಂ ವಜ್ರಂ ಧೇನೂನಾಮಸ್ಮಿ ಕಾಮಧುಕ್/*
*ಪ್ರಜನಶ್ಚಾಸ್ಮಿ ಕಂದರ್ಪ: ಸರ್ಪಣಾಮಸ್ಮಿ ವಾಸಿಕಿ://೨೮//*
ನಾನು ಶಸ್ರ್ತಗಳಲ್ಲಿ ವಜ್ರಾಯುಧವೂ ಮತ್ತು ಗೋವು ಗಳಲ್ಲಿ ಕಾಮಧೇನುವೂ ಆಗಿದ್ದೇನೆ. ಶಾಸ್ರ್ತೋಕ್ತವಾದ ರೀತಿಯಲ್ಲಿ ಸಂತಾನೋತ್ಪತ್ತಿಗೆ ಕಾರಣವಾದ ಕಾಮದೇವ ನಾಗಿದ್ದೇನೆ ಮತ್ತು ಸರ್ಪಗಳಲ್ಲಿ ಸರ್ಪರಾಜ ವಾಸುಕಿಯಾಗಿದ್ದೇನೆ.
***
*ಅನಂತಶ್ಚಾಸ್ಮಿ ನಾಗಾನಾಂ ವರುಣೋ ಯಾದಸಾಮಹಮ್/*
*ಪಿತೃ ಣಾಮರ್ಯಮಾ ಚಾಸ್ಮಿಯಮ: ಸಂಯಮತಾಮಹಮ್//೨೯//*
ನಾನು ನಾಗಗಳಲ್ಲಿ ಆದಿಶೇಷ ಮತ್ತು ಜಲಚರಗಳ ಅಧಿಪತಿ ವರುಣ ದೇವತೆ ಆಗಿದ್ದೇನೆ.ಪಿತೃದೇವತೆಗಳಲ್ಲಿ ಆರ್ಯಮಾ ಎಂಬ ಹೆಸರಿನ ಪಿತೃವು ಹಾಗೂ ಶಾಸನಮಾಡುವವರಲ್ಲಿ ಯಮಧರ್ಮನೂ ಆಗಿದ್ದೇನೆ.
*ಪ್ರಹ್ಲಾದಶ್ಚಾಸ್ಮಿ ದೈತ್ಯಾನಾಂ ಕಾಲ: ಕಲಯತಾಮಹಮ್/*
*ಮೃಗಣಾಂ ಚ ಮೃಗೇಂದ್ರೋಹಂ ವೈನತೇಯಶ್ಚಪಕ್ಷಿಣಾಮ್//೩೦//*
ನಾನು ದೈತ್ಯರಲ್ಲಿ ಪ್ರಹ್ಲಾದನು ಮತ್ತು ಎಣಿಸುವುದರಲ್ಲಿ ಸಮಯವು ಆಗಿದ್ದೇನೆ,ಮೃಗಗಳಲ್ಲಿ ಮೃಗರಾಜನಾದ ಸಿಂಹನೂ ಮತ್ತು ಪಕ್ಷಿಗಳಲ್ಲಿ ಗರುಡನೂ ಆಗಿದ್ದೇನೆ.
***
*ಪವನ: ಪವತಾಮಸ್ಮಿ ರಾಮ: ಶಸ್ತ್ರಭೃತಾಮಹಮ್/*
*ಝಷಾಣಾಂ ಮಕರಶ್ಚಾಸ್ಮಿ ಸ್ರೋತಸಾಮಸ್ಮಿ ಜಾಹ್ನವೀ//೩೧//* ನಾನು ಪವಿತ್ರಗೊಳಿಸುವವರಲ್ಲಿ ವಾಯುವು ಮತ್ತು ಶಸ್ತ್ರಧಾರಿಗಳಲ್ಲಿ ಶ್ರೀ ರಾಮನಾಗಿದ್ದೇನೆ.ಮೀನುಗಳಲ್ಲಿ ಮೊಸಳೆಯೂ ಮತ್ತು ನದಿಗಳಲ್ಲಿ ಗಂಗಾಭಾಗೀರಥೀ ಆಗಿದ್ದೇನೆ.
*ಸರ್ಗಾಣಾಮಾದಿರಂತಶ್ಚ ಮಧ್ಯಂ ಚೈವಾಹಮರ್ಜುನ/*
*ಆಧ್ಯಾತ್ಮವಿದ್ಯಾ ವಿದ್ಯಾನಾಂ ವಾದ: ಪ್ರವದತಾಮಹಮ್//೩೨//* ಹೇ ಅರ್ಜುನನೇ! ಸೃಷ್ಠಿ ಗಳ ಆದಿ,ಮಧ್ಯ ಮತ್ತು ಅಂತ್ಯವು ನಾನೇ ಆಗಿದ್ದೇನೆ.ವಿದ್ಯೆಗಳಲ್ಲಿ ಆಧ್ಯಾತ್ಮವಿದ್ಯೆ ಅರ್ಥಾತ್ ಬ್ರಹ್ಮವಿದ್ಯೆ ಮತ್ತು ಪರಸ್ಪರ ವಾದ ಮಾಡುವವರು ತತ್ವ ನಿರ್ಷಯಕ್ಕಾಗಿ ಮಾಡಲಾಗುವ ವಾದವು ನಾನೇ ಆಗಿದ್ದೇನೆ.
***
*ಅಕ್ಷರಾಣಾಮಕಾರೋಸ್ಮಿ ದ್ವಂದ್ವ ಸಾಮಾಸಿಕಸ್ಯ ಚ/*
*ಅಹಮೇವಾಕ್ಷಯ: ಕಾಲೋ ಧಾತಾಹಂ ವಿಶ್ವತೋಮುಖ:/*
ನಾನು ಅಕ್ಷರಗಳಲ್ಲಿ ಆಕಾರವು ಮತ್ತು ಸಮಾಸಗಳಲ್ಲಿ ದ್ವಂದ್ವ ಸಮಾಸವು ಆಗಿದ್ದೇನೆ.ಅಕ್ಷಯ ಕಾಲ ಅರ್ಥಾತ್ ಕಾಲಕ್ಕೂ ಮಹಾಕಾಲವಾದವನು ಹಾಗೂ ಎಲ್ಲ ಕಡೆ ಮುಖವುಳ್ಳವನಾದ ವಿರಾಟ್ ಸ್ವರೂಪನು,ಎಲ್ಲರ ಧಾರಣೆ ಪೋಷಣೆ ಮಾಡುವವನು ಸಹ ನಾನೇ ಆಗಿದ್ದೇನೆ.
*ಮೃತ್ಯು: ಸರ್ವಹರಶ್ಚಾಹಮುದ್ಭವಶ್ಚ ಭವಿಷ್ಯತಾಮ್/*
*ಕೀರ್ತಿ: ಶ್ರೀ ರ್ವಾಕ್ಚನಾರೀಣಾಂ ಸ್ಮೃತಿರ್ಮೇಧಾ ಧೃತಿ ಕ್ಷಮಾ//೩೪//* ನಾನು ಎಲ್ಲವನ್ನೂ ನಾಶಪಡಿಸುವ ಮೃತ್ಯು ಮತ್ತು ಉತ್ಪನ್ನವಾಗುವವರ ಉತ್ಪತ್ತಿಗೆ ಕಾರಣನೂ ಆಗಿದ್ದೇನೆ.ಹಾಗೆಯೇ ಸ್ತ್ರೀಯರ ಲ್ಲಿ ಕೀರ್ತಿ,ಶ್ರೀ, ವಾಕ್,ಸೃತಿ,ಮೇಧಾ,ಧೃತಿ ಮತ್ತು ಕ್ಷಮೆ ನಾನೇ ಆಗಿದ್ದೇನೆ.
***
*ಬೃಹತ್ಸಾಮ ತಥಾ ಸಾಮ್ನಾಂ ಗಾಯತ್ರೀ ಛಂದಸಾಮಹಮ್/*
*ಮಾಸಾನಾಂ ಮಾರ್ಗಶೀರ್ಷೋ ಹಮೃತೂನಾಂ ಕುಸುಮಾಕರ://೩೫//*
ಹಾಗೂ ಗಾಯನ ಮಾಡಲು ಯೋಗ್ಯವಾದ ಶ್ರುತಿಗಳಲ್ಲಿ ನಾನು ಬೃಹತ್ಸಾಮನೂ ಮತ್ತು ಛಂದಸ್ಸುಗಳಲ್ಲಿ ಗಾಯತ್ರೀ ಛಂದಸ್ಸು ನಾನು.ಮಾಸಗಳಲ್ಲಿ ಮಾರ್ಗಶೀರ್ಷವೂ,ಋತುಗಳಲ್ಲಿ ವಸಂತನೂ ನಾನಾಗಿದ್ದೇನೆ.
*ದ್ಯೂತಂ ಛಲಯತಾಮಸ್ಮಿ ತೇಜಸ್ತೇಜಸ್ವಿನಾಮಹಮ್/*
*ಜಯೋಸ್ಮಿ ವ್ಯವಸಾಯೋಸ್ಮಿ ಸತ್ವಂ ಸತ್ವ್ತವತಾಮಹಮ್//೩೬//* ನಾನು ಕಪಟ ಮಾಡುವವರಲ್ಲಿ ದ್ಯೂತನಾಗಿದ್ದೇನೆ ಮತ್ತು ಪ್ರಭಾವಶಾಲಿ ಪುರುಷರ ಪ್ರಭಾವವಾಗಿದ್ದೇನೆ.ನಾನು ಜಯಶಾಲಿಗಳ ಜಯವು ಆಗಿದ್ದೇನೆ.ನಿಶ್ಚಯಿಸುವವರ ನಿಶ್ಚಯಾತ್ಮಿಕಾ ಬುದ್ಧಿ ಮತ್ತು ಸಾತ್ವಿಕ ಪುರುಷರ ಸಾತ್ವಿಕ ಭಾವವಾಗಿದ್ದೇನೆ.
***
(ಸಾರ ಸಂಗ್ರಹ) - ವಿಜಯಾ ಶೆಟ್ಟಿ ಸಾಲೆತ್ತೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ