ಗೀತಾಮೃತ - 38
*ಅಧ್ಯಾಯ ೧೦*
*ದೃಷ್ಣೀನಾಂ ವಾಸುದೇವೋ ಸ್ಮಿ ಪಾಂಡವಾನಾಂ ಧನಂಜಯ:/*
*ಮುನೀನಾಮಪ್ಯಹಂ ವ್ಯಾಸ: ಕವೀನಾಮುಶನಾ ಕವಿ://೩೭//*
ವೃಷ್ಣಿವಂಶೀಯರಲ್ಲಿ ವಾಸುದೇವ,ಅರ್ಥಾತ್ ಸ್ವತ: ನಿನ್ನ ಸಖನಾದ ನಾನು,ಪಾಂಡವರಲ್ಲಿ ಧನಂಜಯ,ಅರ್ಥಾತ್ ನೀನು,ಮುನಿಗಳಲ್ಲಿ ವೇದವ್ಯಾಸರು ಮತ್ತು ಕವಿಗಳಲ್ಲಿ ಶುಕ್ರಾಚಾರ್ಯ ಕವಿಗಳು ನಾನೇ ಆಗಿದ್ದೇನೆ.
*ದಂಡೋ ದಮಯಿತಾಮಸ್ಮಿ ನೀತಿರಸ್ಮಿ ಜಿಗೀಪತಾಮ್/*
*ಮೌನಂ ಚೈವಾಸ್ಮಿ ಗುಹ್ಯಾನಾಂ ಜ್ಞಾನಂ ಜ್ಞಾನವತಾಮಹಮ್//೩೮//*
ನಾನು ದಮನ ಮಾಡುವವರ ದಂಡ ಅರ್ಥಾತ್ ದಮನ ಮಾಡುವ ಶಕ್ತಿಯು ಆಗಿದ್ದೇನೆ; ಜಯಗಳಿಸುವ ಇಚ್ಛೆಯುಳ್ಳವರ ನೀತಿಯೂ ಆಗಿದ್ದೇನೆ; ಗೋಪ್ಯವಾಗಿಡಲು ಯೋಗ್ಯವಾದ ಭಾವಗಳ ರಕ್ಷಕವಾದ 'ಮೌನ'ವಾಗಿದ್ದೇನೆ ಮತ್ತು ಜ್ಞಾನವಂತರ ತತ್ವಜ್ಞಾನವು ನಾನೇ ಆಗಿದ್ದೇನೆ.
***
*ಯಚ್ಛಾಪಿ ಸರ್ವಭೂತಾನಾಂ ಬೀಜಂ ತದಮಹಮರ್ಜುನ/*
*ನ ತದಸ್ತಿವಿನಾ ಯತ್ಸ್ಯಾನ್ಮಯಾ ಭೂತಂ ಚರಾಚರಮ್//೩೯//*
ಮತ್ತು ಹೇ ಅರ್ಜುನಾ! ಯಾವುದು ಎಲ್ಲ ಭೂತಗಳ ಉತ್ಪತ್ತಿಗೆ ಕಾರಣವಾಗಿರುವುದೋ ಅದು ಕೂಡ ನಾನೇ ಆಗಿದ್ದೇನೆ; ಏಕೆಂದರೆ, ನನ್ನಿಂದ ರಹಿತವಾದಂತಹ ಯಾವುದೇ ಚರ ಮತ್ತು ಅಚರ ಪ್ರಾಣಿಗಳು ಇರುವುದಿಲ್ಲ.
*ನಾಂತೋಸ್ತಿ ಮಮ ದಿವ್ಯಾನಾಂ ವಿಭೂತೀನಾಂ ಪರಂತಪ/*
*ಏಷ ತೂದ್ದೇಶತ: ಪ್ರೋಕ್ತೋ ವಿಭೂತೇರ್ವಿಸ್ತರೋ ಮಯಾ//೪೦//*
ಹೇ ಪರಂತಪ ಅರ್ಜುನಾ! ನನ್ನ ದಿವ್ಯವಾದ ವಿಭೂತಿಗಳಿಗೆ ಅಂತ್ಯವೆಂಬುದೇ ಇಲ್ಲ.ನನ್ನ ವಿಭೂತಿಗಳ ಈ ವಿಸ್ತಾರವಾದರೋ ನಿನಗಾಗಿ ಏಕದೇಶದಿಂದ ಅರ್ಥಾತ್ ಸಂಕ್ಷೇಪವಾಗಿ ನಾನು ಹೇಳಿದ್ದೇನೆ.
***
*ಯದ್ಯದ್ವಿಭೂತಿಮತ್ಸತ್ತ್ವಂ ಶ್ರೀ ಮದೂರ್ಜಿತಮೇವ ವಾ/*
*ತತ್ತದೇವಾವಗಚ್ಛ ತ್ವಂ ಮಮ ತೇಜೋಂಶಸಂಭವಾಮ್//೪೧//*
ಯಾವ ಯಾವುದು ವಿಭೂತಿಯುಕ್ತವಾಗಿವೆಯೋ ಅರ್ಥಾತ್ ಐಶ್ಚರ್ಯಯುಕ್ತವಾದ, ಕಾಂತಿಯುಕ್ತವಾದ ಮತ್ತು ಶಕ್ತಿಯುಕ್ತವಾದ ವಸ್ತುಗಳಿವೆಯೋ ಅವೆಲ್ಲವನ್ನು ನೀನು ನನ್ನ ತೇಜಸ್ಸಿನ ಅಂಶದ ಅಭಿವ್ಯಕ್ತಿಯೇ ಎಂದು ತಿಳಿ.
*ಅಥವಾ ಬಹುನೈತೇನ ಕಿಂ ಜ್ಞಾತೇನ ತವಾರ್ಜುನ/*
*ವಿಷ್ಟಭ್ಯಾಹಮಿದಂ ಕೃತ್ಸ್ನಮೇಕಾಂಶೇನ ಸ್ಥಿತೋ ಜಗತ್//೪೨//*
ಅಥವಾ,ಹೇ ಅರ್ಜುನಾ! ಇದಲ್ಲದೆ,ಇದಕ್ಕಿಂತ ಹೆಚ್ಚು ವಿಶದವಾಗಿ ತಿಳಿಯುವುದರಿಂದ ನಿನಗೆ ಯಾವ ಪ್ರಯೋಜನವಿದೆ? ನಾನು ಈ ಸಂಪೂರ್ಣ ಜಗತ್ತನ್ನು ನನ್ನ ಯೋಗಶಕ್ತಿಯ ಒಂದಂಶ ಮಾತ್ರದಿಂದ ಧರಿಸಿಕೊಂಡು ಸ್ಥಿತನಾಗಿದ್ದೇನೆ.
*ಓಂ ತತ್ಸದಿತಿ ಶ್ರೀ ಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀ ಕೃಷ್ಣಾರ್ಜುನ ಸಂವಾದೇ ವಿಭೂತಿಯೋಗೋನಾಮ ದಶಮೋಧ್ಯಾಯ://೧೦//*
***
(ಸಾರ ಸಂಗ್ರಹ)- ವಿಜಯಾ ಶೆಟ್ಟಿ ಸಾಲೆತ್ತೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ