ಗೀತಾಮೃತ - 46
*ಅಧ್ಯಾಯ ೧೨*
*ಯೇ ತ್ವಕ್ಷರಮನಿರ್ದೇಶ್ಯಮವ್ಯಕ್ತಂ ಪರ್ಯುಪಾಸತೇ/*
*ಸರ್ವತ್ರಗಮಚಿಂತ್ಯಂ ಚ ಕೂಟಸ್ಥಮಚಲಂ ಧ್ರುವಮ್//೩//* ಆದರೆ ಯಾವ ಪುರುಷರು,ಇಂದ್ರಿಯಗಳ ಸಮುದಾಯವನ್ನು ಸಂಪೂರ್ಣ ವಾಗಿ ವಶಪಡಿಸಿಕೊಂಡು,ಮನಸ್ಸು ಬುದ್ಧಿಗಳಿಗೆ ಅತೀತವಾದ,ಸರ್ವವ್ಯಾಪೀ ಅವರ್ಣನೀಯ ಸ್ವರೂಪವುಳ್ಳವನೂ ಮತ್ತು ಸದಾ ಏಕರಸವಾಗಿರುವ ನಿತ್ಯನು,ಅಚಲನು,ನಿರಾಕಾರನೂ ಅವಿನಾಶಿಯೂ ಆದ
*ಸಂನಿಯಮ್ಯೇಂದ್ರಿಯಗ್ರಾಮಂ ಸರ್ವತ್ರ ಸಮಬುದ್ಧಯ:/*
*ತೇ ಪ್ರಪ್ನುವಂತಿ ಮಾಮೇವ ಸರ್ವಭೂತಹಿತೇ ರತಾ://೪//*
ಸಚ್ಚಿದಾನಂದಘನನಾದ ಬ್ರಹ್ಮನನ್ನು ನಿರಂತರ ಏಕೀಭಾವದಿಂದ ಧ್ಯಾನಿಸುತ್ತ ಭಜಿಸುತ್ತಾರೋ ಅವರು ಸಮಸ್ತ ಪ್ರಾಣಿಗಳ ಹಿತದಲ್ಲಿ ನಿರತರಾಗಿ ಮತ್ತು ಎಲ್ಲರಲ್ಲಿ ಸಮಾನಭಾವವುಳ್ಳ ಯೋಗಿಗಳು ನನ್ನನ್ನೇ ಪಡೆಯುತ್ತಾರೆ.
***
*ಕ್ಲೇಶೋಧಿಕತರಸ್ತೇಷಾಮವ್ಯಕ್ತಾಸಕ್ತಚೇತಸಾಮ್/*
*ಅವ್ಯಕ್ತಾ ಹಿ ಗತಿರ್ದು:ಖಂ ದೇಹವದ್ಭಿರವಾಪ್ಯತೇ//೫//*
ಆದರೆ ಆ ಸಚ್ಚಿದಾನಂದಘನ ನಿರಾಕಾರಬ್ರಹ್ಮನಲ್ಲಿ ಆಸಕ್ತಚಿತ್ತರಾದ ಪುರುಷರ ಸಾಧನೆಯಲ್ಲಿ ಪರಿಶ್ರಮವು ವಿಶೇಷವಾಗಿದೆ.ಏಕೆಂದರೆ ದೇಹಾಭಿಮಾನಿಗಳ ಮೂಲಕ ಅವ್ಯಕ್ತವಿಷಯಕವಾದ ಗತಿಯು ದು:ಖಪೂರ್ವಕವಾಗಿ ಪಡೆಯಲಾಗುತ್ತದೆ.ಅರ್ಥಾತ್ ದೇಹಾಭಿಮಾನವಿರುವಾಗ ನಿರ್ಗುಣ ಬ್ರಹ್ಮನ ಪ್ರಾಪ್ತಿಯು ಕಠಿಣವಾಗಿದೆ.
*ಯೇ ತು ಸರ್ವಾಣಿ ಕರ್ಮಾಣಿ ಮಯಿ ಸಂನ್ಯಸ್ಯ ಮತ್ಪರಾ: /*
*ಅನನ್ಯೇನೈವ ಯೋಗೇನ ಮಾಂ ಧ್ಯಾಯಂತ ಉಪಾಸತೇ//೬//*
ಆದರೆ ಯಾರು ನನ್ನ ಪರಾಯಣರಾಗಿರುವ ಭಕ್ತಜನರು ಸಂಪೂರ್ಣ ಕರ್ಮಗಳನ್ನು ನನ್ನಲ್ಲಿ ಅರ್ಪಣೆಮಾಡಿ,ಸಗುಣ ರೂಪೀ ಪರಮೇಶ್ವರನಾದ ನನ್ನನ್ನೇ ಅನನ್ಯವಾದ ಭಕ್ತಿಯೋಗದಿಂದ ನಿರಂತರವಾಗಿ ಚಿಂತನೆಮಾಡುತ್ತಾ ಭಜಿಸುತ್ತಾರೋ..
***
*ಶೇಷಾಮಹಂ ಸಮುದ್ಧಾರ್ಥಾ ಮೃತ್ಯುಸಂಸಾರಸಾಗರಾತ್/*
*ಭವಾಮಿ ನಚಿರಾತ್ಪಾರ್ಥ ಮಯ್ಯವೇಶಿತಚೇತಸಾಮ್//೭//*
ಹೇ ಅರ್ಜುನಾ! ನನ್ನಲ್ಲಿ ಚಿತ್ತವನ್ನು ತೊಡಗಿಸುವ ಆ ಪ್ರೇಮಿಭಕ್ತರನ್ನು ನಾನು ಶೀಘ್ರವಾಗಿಯೇ ಮೃತ್ಯುರೂಪವಾದ ಸಂಸಾರಸಾಗರದಿಂದ ಉದ್ಧರಿಸುತ್ತೇನೆ.
*ದುಯ್ಯೇವ ಮನ ಆಧತ್ವ ಮಯ ಬುದ್ಧಿಂ ನಿವೇಶಯ/*
*ನಿವಸಿಷ್ಯಸಿ ಮಯ್ಯೇವ ಅತ ಊರ್ಧ್ವಂ ನ ಸಂಶಯ://೮//*
ಮನಸ್ಸನ್ನು ನನ್ನಲ್ಲಿ ತೊಡಗಿಸು ಮತ್ತು ಬುದ್ಧಿಯನ್ನು ನನ್ನಲ್ಲೇ ತೊಡಗಿಸು; ಇದಾದನಂತರ ನೀನು ನನ್ನಲ್ಲಯೇ ನೆಲೆಸುವೆ, ಇದರಲ್ಲಿ ಯಾವುದೇ ಸಂಶಯವಿಲ್ಲ.
***
*ಅಥ ಚಿತ್ತಂ ಸಮಾಧಾತುಂ ನ ಶಕ್ನೋಷಿ ಮಯ ಸ್ಥಿರಮ್/*
*ಅಭ್ಯಾಸಯೋಗೇನ ತತೋ ಮಾಮಿಚ್ಛಾಪ್ತುಂ ಧನಂಜಯ//೯//* ಒಂದು ವೇಳೆ ನೀನು ಮನಸ್ಸನ್ನು ನನ್ನಲ್ಲಿ ಅಚಲವಾಗಿ ಸ್ಥಾಪಿಸಲು ಸಮರ್ಥನಲ್ಲವಾದರೆ, ಹೇ ಅರ್ಜುನ! ಅಭ್ಯಾಸ ರೂಪೀ ಯೋಗದ ಮೂಲಕ ನನ್ನನ್ನು ಹೊಂದುವುದಕ್ಕಾಗಿ ಇಚ್ಛಿಸು.
*ಅಭ್ಯಾಸೇಪ್ಯಸಮರ್ಥೋಸಿ ಮತ್ಕರ್ಮಪರಮೋ ಭವ/*
*ಮದರ್ಥಮಪಿ ಕರ್ಮಾಣಿ ಕುರ್ಮನ್ಸಿದ್ಧಿಮವಾಪ್ಸ್ಯಸಿ//೧೦//* ಒಂದು ವೇಳೆ ಅಭ್ಯಾಸದಲ್ಲಿಯೂ ಕೂಡ ನೀನು ಅಸಮರ್ಥನಾಗಿರುವೆಯಾದರೆ ಕೇವಲ ನನಗಾಗಿಯೇ ಕರ್ಮ ಮಾಡಲಿಕ್ಕಾಗಿ ಪರಾಯಣನಾಗು.ಈ ಪ್ರಕಾರ ನನ್ನ ನಿಮಿತ್ತ ವಾಗಿ ಕರ್ಮಗಳನ್ನು ಮಾಡುತ್ತಾ ನನ್ನ ಪ್ರಾಪ್ತಿರೂಪೀ ಸಿದ್ಧಿಯನ್ನು ಪಡೆಯುವೆ.
***
-ವಿಜಯಾ ಶೆಟ್ಟಿ ಸಾಲೆತ್ತೂರು (ಸಾರ ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್ ತಾಣ