ಗೀತಾಮೃತ - 47

ಗೀತಾಮೃತ - 47

*ಅಧ್ಯಾಯ ೧೨*

*//ಅಥ ದ್ವಾದಶೋಧ್ಯಾಯ://*

             *ಭಕ್ತಿಯೋಗವು*

*ಅರ್ಜುನ ಉವಾಚ* 

*ಏವಂ ಸತತಯುಕ್ತಾ ಯೇ ಭಕ್ತಾಸ್ತ್ವಾಂ ಪರ್ಯುಪಾಸತೇ ಯೇ ಚಾಪ್ಯಕ್ಷರಮವ್ಯಕ್ತಂ ತೇಷಾಂ ಕೇ ಯೋಗವಿತ್ತಮಾ://೧//*

ಅರ್ಜುನನು ಹೇಳಿದನು _ ಹೇ ಮನಮೋಹನಾ! ಯಾವ ಅನನ್ಯ ಪ್ರೇಮೀ,ಭಕ್ತಜನರೂ ಹಿಂದೆ ಹೇಳಿದ ಪ್ರಕಾರವಾಗಿ ನಿರಂತರವಾಗಿ ನಿನ್ನ ಭಜನೆ ಧ್ಯಾನದಲ್ಲಿ ತೊಡಗಿದ್ದು,ಸಗುಣರೂಪೀ ಪರಮೇಶ್ರನಾದ ನಿನ್ನನ್ನು ಉಪಾಸನೆ ಮಾಡುತ್ತಾರೆ ಮತ್ತು ಬೇರೆಯವರು ಕೇವಲ ಅವಿನಾಶಿ ಸಚಗಚಿದಾನಂದಘನ ನಿರಾಕಾರ ಬ್ರಹ್ಮನನ್ನೇ ಅತಿಶ್ರೇಷ್ಠಸ್ವಭಾವದಿಂದ ಭಜಿಸುತ್ತಾರೆ.ಈ ಎರಡೂ ಪ್ರಕಾರದ ಉಪಾಸಕರಲ್ಲಿ ಅತ್ಯುತ್ತಮ ಯೋಗವೇತ್ತರು ಯಾರಾಗಿದ್ದಾರೆ?

*ಶ್ರೀ ಭಗವಾನುವಾಚ* _

*ಮಯ್ಯಾವೇಶ್ಯ ಮನೋ ಯೇ ಮಾಂ ನಿತಗಯಮುಕ್ತಾ ಉಪಾಸತೇ  /*

*ಶ್ರದ್ಧಯಾ ಪರಯೋಪೇತಾಸ್ತೇ ಮೇ ಯುಕ್ತತಮಾ ಮತಾಂ//೨//*

ಶ್ರೀ ಭಗವಂತನು ಹೇಳಿದನು _ ನನ್ನಲ್ಲಿ ಮನಸ್ಸನ್ನು ಏಕಾಗ್ರಮಾಡಿ,ನಿರಂತರ ನನ್ನ ಭಜನೆ ಧ್ಯಾನದಲ್ಲಿ ತೊಡಗಿದ್ದು ಯಾವ ಭಕ್ತ ಜನರು ಅತಿಶಯ,ಶ್ರೇಷ್ಠವಾದ ಶ್ರದ್ಧೆಯಿಂದ ಕೂಡಿದವರಾಗಿ,ಸಗುಣರೂಪೀ,ಪರಮೇಶ್ವರನಾದ. ನನ್ನನ್ನು ಭಜಿಸುತ್ತಾರೋ ಅವರು ನನಗೆ ಯೋಗಿಗಳಲ್ಲಿ ಅತಿ ಉತ್ತಮಯೋಗಿಯೆಂದು  ಮಾನ್ಯರಾಗಿದ್ದಾರೆ

***

 *ಅಥೈತದಪ್ಯಶಕ್ತೋಸಿ ಕರ್ತುಂ ಮದ್ಯೋಗಮಾಶ್ರತ:/*

*ಸರ್ವಕರ್ಮಫಲತ್ಯಾಗಂ ತತ: ಕುರು ಯತಾತ್ಮವಾನ್//೧೧//*

ಒಂದು ವೇಳೆ ನನ್ನ ಪ್ಪಾಪ್ತರೂಪೀ ಯೋಗದ ಆಶ್ರಿತನಾಗಿ ಮೇಲೆ ಹೇಳಿದ ಸಾಧನೆಯನ್ನು ಮಾಡುವುದರಲ್ಲಿಯೂ ಕೂಡ ನೀನು ಅಸಮರ್ಥನಾಗಿದ್ದರೆ, ಮನಸ್ಸು ಬುದ್ಧಿ ಮೊದಲಾದುವುಗಳ ಮೇಲೆ ವಿಜಯವನ್ನು ಪಡೆಯುವವನಾಗಿ ಎಲ್ಲ ಕರ್ಮಗಳ ಫಲದ ತ್ಯಾಗಮಾಡು.

*ಶ್ರೇಯೋ ಹಿ ಜ್ಞಾನಮಭ್ಯಾಸಾಜ್ಜ್ಞಾನಾದ್ದ್ಯಾನಂ ವಿಶಿಷ್ಯತೇ/*

*ಧ್ಯಾನಾತ್ ಕರ್ಮಫಲತ್ಯಾಗಸ್ತ್ಯಾಗಾಚ್ಛಾಂತಿರನಂತರಮ್//೧೨//*

ಮರ್ಮವನ್ನರಿಯದೆ ಮಾಡಲ್ಪಟ್ಟ ಅಭ್ಯಾಸಕ್ಕಿಂತ ಜ್ಞಾನವು ಶ್ರೇಷ್ಠ ವಾಗಿದೆ. ಜ್ಞಾನಕ್ಕಿಂತ ಪರಮೇಶ್ವರನಾದ ನನ್ನ ಸ್ವರೂಪದ ಧ್ಯಾನವು ಶ್ರೇಷ್ಠ ವಾಗಿದೆ ಮತ್ತು ಧ್ಯಾನಕಿಂತಲೂ ಸಹ ಎಲ್ಲ ಕರ್ಮಗಳ ಫಲದ ತ್ಯಾಗವು ಶ್ರೇಷ್ಠ ವಾಗಿದೆ,ಏಕೆಂದರೆ,ತ್ಯಾಗದಿಂದ ತತ್ಕಾಲದಲ್ಲಿಯೇ ಪರಮಶಾಂತಿಯು ದೊರೆಯುತ್ತದೆ.

***

*ಅದ್ವೇಷ್ಟಾ ಸರ್ವಭೂತಾನಾಂ ಮೈತ್ರ: ಕರುಣ ಏವ ಚ/*

*ನಿರ್ಮಮೋ ನಿರಹಂಕಾರ: ಸಮದು:ಖಸುಖ: ಕ್ಷಮೀ//೧೩//*

ಯಾವ ಪುರುಷನು ಎಲ್ಲ ಪ್ರಾಣಿಗಳಲ್ಲಯೂ ದ್ವೇಷಭಾವರಹಿತನಾಗಿ,ಸ್ವಾರ್ಥರಹಿತ ಎಲ್ಲರ ಪ್ರೇಮಿಯಾಗಿದ್ದಾನೋ ಮತ್ತು ಕಾರಣವಿಲ್ಲದೇ ದಯಾಳುವಾಗಿದ್ದಾನೋ ಹಾಗೂ ಮಮತಾರಹಿತನೋ,ಅಹಂಕಾರರಹಿತನೋ,ಸುಖ ದು:ಖಗಳ ಪ್ರಾಪ್ತಿಯಲ್ಲಿ ಸಮನಾಗಿರುವವನೋ ಕ್ಷಮಾವಂತನಾಗಿರುವನೋ

   *ಸಂತುಷ್ಟಂ ಸತತಂ ಯೋಗೀ ಯತಾತ್ಮಾ ಧೃಢನಿಶ್ಚಯ: /*

*ಮಯ್ಯರ್ಪಿತಮನೋಬುದ್ಧಿರ್ಯೋ ಮದ್ಭಕ್ತ: ಸಮೇ ಪ್ರಯ://೧೪//*/*ಅಪರಾಧಮಾಡುವವರಿಗೂ ಕೂಡ ಅಭಯ ನೀಡುವವನಾಗಿರುವನೋ ಹಾಗೂ ಯಾವ ಯೋಗಿಯು, ನಿರಂತರವಾಗಿ ಸಂತುಷ್ಟನಾಗಿರುವನೋ,ಮನಸ್ಸು ಇಂದ್ರಿಯಗಳ ಸಹಿತ ಶರೀರವನ್ನು ವಶದಲ್ಲಿಟ್ಟುಕೊಂಡಿರುವನೋ ಮತ್ತು ನನ್ನಲ್ಲಿ ದೃಢನಿಶ್ಚಯವುಳ್ಳವನಾಗಿದ್ದಾನೋ _ ನನ್ನಲ್ಲಿ ಮನಸ್ಸು ಬುದ್ಧಿಗಳನ್ನು ಅರ್ಪಿಸಿರುವ ಆ ನನ್ನ ಭಕ್ತನು ನನಗೆ ಪ್ರಿಯನಾಗಿದ್ದಾನೆ.

***

   *ಯಸ್ಮಾನ್ನೋದ್ವಿಜತೇ ಲೋಕೋ ಲೋಕಾನ್ನೋದ್ವಿಜತೇ ಚ ಯ:/*

*ಹರ್ಷಾಮರ್ಷಭಯೋದ್ವೇಗೈರ್ಮುಕ್ತೋ ಯ: ಸ ಚ ಮೇ ಪ್ರಿಯ://೧೫//*

ಯಾರಿಂದ ಯಾವುದೇ ಜೀವಿಯು ಉದ್ವೇಗವನ್ನು ಪಡೆಯುವುದಿಲ್ಲವೋ  ಮತ್ತು ಯಾರು,ತಾನೂ ಸಹ ಯಾವುದೇ ಜೀವಿಯಿಂದ ಉದ್ವೇಗವನ್ನು ಪಡೆಯುವುದಿಲ್ಲವೋ ಹಾಗೂ ಯಾರು ಹರ್ಷ,ಅಮರ್ಷ,ಭಯ ಮತ್ತು ಉದ್ವೇಗಾದಿಗಳಿಂದ ರಹಿತನಾಗಿದ್ದಾನೋ ಆ ಭಕ್ತರು ನನಗೆ ಪ್ರಿಯನಾಗಿದ್ದಾನೆ.

*ಅನಪೇಕ್ಷ ಶುಚಿರ್ದಕ್ಷ ಉದಾಸೀನೋ ಗತವ್ಯಥ: /*

*ಸರ್ವಾರಂಭಸದಿಇತ್ಯಾಗೀ ಯೋ ಮದ್ಭಕ್ತ  ಸ ಮೇ ಪ್ರಿಯ://೧೬//*

ಯಾವ ಪುರುಷನು ಆಕಾಂಕ್ಷಾರಹಿತನಾಗಿದ್ದಾನೋ,ಒಳಹೊರಗಿನಿಂದ ಶುದ್ಧನಾಗಿದ್ದಾನೋ,ದಕ್ಷನೂ,ಪಕ್ಷಪಾತರಹಿತನೂ,ದು:ಖರಹಿತನಾಗಿದ್ದಾನೋ ಎಲ್ಲಾ ಕ್ರಿಯೆಗಳಲ್ಲಿ ಕರ್ತೃತ್ವದ ಅಭಿಮಾನದ ತ್ಯಾಗಿಯಾದ ಆ ನನ್ನ ಭಕ್ತನು ನನಗೆ ಪ್ರಿಯನಾಗಿದ್ದಾನೆ.

***

(ಸಾರ ಸಂಗ್ರಹ) - ವಿಜಯಾ ಶೆಟ್ಟಿ ಸಾಲೆತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ