ಗೀತಾಮೃತ - 48
*ಅಧ್ಯಾಯ. ೧೨*
*ಯೋ ನ ಹೃಷ್ಯತಿ ನ ದ್ವೇಷ್ಟಿ ನ ಶೋಚತಿ ನ ಕಾಂಕ್ಷತಿ ನ ಕಾಂಕ್ಷತಿ/*
*ಶುಭಾಶುಭಪರಿತ್ಯಾಗೀ ಭಕ್ತಿಮಾನ್ಯ: ಸ ಮೇ ಪ್ರಿಯ://೧೭//*
ಯಾರು ಎಂದಿಗೂ ಹರ್ಷಿತರಾಗುವುದಿಲ್ಲವೋ, ದ್ವೇಷಿಸುವುದಿಲ್ಲವೋ,ಶೋಕಿಸುವುದಿಲ್ಲವೋ, ಏನನ್ನೂ ಬಯಸುವುದಿಲ್ಲವೋ ಹಾಗೂ ಯಾರು ಶುಭ ಮತ್ತು ಅಶುಭವಾದ ಸಂಪೂರ್ಣ ಕರ್ಮಗಳ ತ್ಯಾಗಿಯಾಗಿದ್ದಾನೋ ಆ ಭಕ್ತಿಯುಕ್ತನಾದ ಪುರುಷನು ನನಗೆ ಪ್ರಿಯನಾಗಿದ್ದಾನೆ.
*ಸರ್ವ ಶತ್ರೌ ಚ ಮಿತ್ರೇ ಚ ತಥಾ ಮಾನಾಪಮಾನಯೋ:/*
*ಶೀತೋಷ್ಣಸುಖದು:ಖೇಷು ಸಮ: ಸಂಗವಿವರ್ಜಿತ://೧೮//*
ಯಾರು ಶತ್ರು _ ಮಿತ್ರರಲ್ಲಿ ಮತ್ತು ಮಾನಾಪಮಾನಗಳಲ್ಲಿ ಸಮನಾಗಿದ್ದಾನೋ ಹಾಗೂ ಚಳಿ,ಸೆಕೆ ಮತ್ತು ಸುಖ _ ದು:ಖ ಮೊದಲಾದ ದ್ವಂದ್ವಗಳಲ್ಲಿ ಸಮನಾಗಿದ್ದಾನೋ ಮತ್ತು ಆಸಕ್ತಿಯಿಂದ ರಹಿತನಾಗಿದ್ದಾನೋ_\
***
*ತುಲ್ಯನಿಂದಾಸ್ತುತಿರ್ಮೌನೀ ಸಂತುಷ್ಟೋ ಯೇನ ಕೇನಚಿತ್/*
*ಅನಿಕೇತ: ಸ್ಥಿರಮತಿರ್ಭಕ್ತಿಮಾನ್ ಮೇ ಪ್ರಿಯೋ ನರ:*
ಹಾಗೂ ಯಾರು ನಿಂದಾಸ್ತುತಿಯನ್ನು ಸಮಾನವಾಗಿ ತಿಳಿಯುತ್ತಾನೋ ,ಮನನಶೀಲನೋ ಮತ್ತು ಯಾವುದೇ ಪ್ರಕಾರದಿಂದಲಾದರೂ ಶರೀರ ನಿರ್ವಾಹವಾಗುವುದರಲ್ಲಿ ಸದಾ ಸಂತುಷ್ಟನಾಗಿದ್ದಾನೋ ಮತ್ತು ಇರುವ ಸ್ಥಾನದಲ್ಲಿ ಮಮತೆ ಮತ್ತು ಆಸಕ್ತಿಯಿಂದ ರಹಿತನಾಗಿದ್ದಾನೆಯೋ , ಆ ಸ್ಥಿರಬುದ್ಧಿಯುಳ್ಳ,ಭಕ್ತಿಸಂಪನ್ನರಾದ ಪುರುಷನು ನನಗೆ ಪ್ರಿಯನು.
* *ಯೇ ತು ಧರ್ಮ್ಯಾಮೃತಮಿದಂ ಯಥೋಕ್ತಂ ಪರ್ಯುಪಾಸತೇ/*
*ಶ್ರದ್ಧಾಧಾನಾ ಮತ್ಪರಮಾ ಭಕ್ತಾಸ್ತೇತೀವ ಮೇ ಪ್ರಿಯಾ//೨೦//*
ಆದರೆ ಯಾರು ಶ್ರದ್ಧೆಯಿಂದ ಕೂಡಿದ ಪುರುಷರು,ನನ್ನ ಪರಾಯಣರಾಗಿ,ಈ ಮೇಲೆ ಹೇಳಿರುವ ಧರ್ಮಮಯ ವಾದ ಅಮೃತವನ್ನು ನಿಷ್ಕಾಮಪ್ರೇಮಭಾವದಿಂದ ಸೇವನೆ ಮಾಡುವರೋ ಆ ಭಕ್ತರು ನನಗೆ ಅತಿಶಯವಾಗಿ ಪ್ರಿಯರಾಗಿದ್ದಾರೆ.
*ಓಂ ತತ್ಸದಿತಿ ಶ್ರೀ ಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀ ಕೃಷ್ಣಾರ್ಜುನಸಂವಾದೇ ಭಕ್ತಿಯೋಗೋ ನಾಮ ದ್ವಾದಶೋಧ್ಯಾಯ://೧೨//*
***
(ಅಧ್ಯಾಯ ೧೨ ಮುಕ್ತಾಯ)
-ವಿಜಯಾ ಶೆಟ್ಟಿ ಸಾಲೆತ್ತೂರು (ಸಾರ ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್ ತಾಣ