ಗೀತಾಮೃತ - 49

ಗೀತಾಮೃತ - 49

*ಅಧ್ಯಾಯ ೧೩*

*//ಅಥ ತ್ರಯೋದಶೋಧ್ಯಾಯ: //*

*ಕ್ಷೇತ್ರ ಕ್ಷೇತ್ರಜ್ಞವಿಭಾಗ ಯೋಗವು*

*ಶ್ರೀ ಭಗವಾನುವಾಚ*

        *ಇದಂ ಶರೀರಂ ಕೌಂತೇಯ ಕ್ಷೇತ್ರಮಿತ್ಯಭಿಧೀಯತೇ/*

*ಏತದ್ಯೋ ವೇತ್ತಿ ತಂ ಪ್ರಾಹು: ಕ್ಷೇತ್ರಜ್ಞ ಇತಿ ತದ್ವಿದ://೧//*

    ಶ್ರೀ ಭಗವಂತನು ಹೇಳಿದನು _

ಹೇ ಅರ್ಜುನಾ! ಈ ಶರೀರವು 'ಕ್ಷೇತ್ರ' ಎಂಬ ಹೆಸರಿನಿಂದ ಮತ್ತು ಇದನ್ನು ಯಾರು ತಿಳಿದಿರುವನೋ ಅವನನ್ನು 'ಕ್ಷೇತ್ರಜ್ಞ' ಎಂಬ ಹೆಸರಿನಿಂದ ಹೇಳಲಾಗಿದೆ.ಅವುಗಳ ತತ್ವ್ತವನ್ನು ಅರಿತಿರುವ ಜ್ಞಾನಿಗಳು ಹೀಗೆ ತಿಳಿಸುತ್ತಾರೆ.

*ಕ್ಷೇತ್ರಜ್ಞಂ ಚಾಪಿ ಮಾಂ ವಿದ್ದಿ ಸರ್ವಕ್ಷೇತ್ರೇಷು ಭಾರತ/*

*ಕ್ಷೇತ್ರ ಕ್ಷೇತ್ರಜ್ಞಯೋರ್ಜ್ಞಾನಂ  ಯತ್ತಜ್ಞ್ಜಾನಂ ಮತಂ ಮಮ//೨//*

ಹೇ ಅರ್ಜುನಾ! ನೀನು ಎಲ್ಲಾ ಕ್ಷೇತ್ರಗಳಲ್ಲಿ ಕ್ಷೇತ್ರಜ್ಞ ಅರ್ಥಾತ್ ಜೀವಾತ್ಮನು ಸಹ ನಾನೆಂದೇ ತಿಳಿ,ಮತ್ತು ಕ್ಷೇತ್ರ _ ಕ್ಷೇತ್ರಜ್ಞನ ಅರ್ಥಾತ್ ವಿಕಾರಸಹಿತ ಪ್ರಕೃತಿಯ ಮತ್ತು ಪುರುಷನನ್ನು ಯಾವುದು ತತ್ವದಿಂದ ತಿಳಿಯುವುದಾಗಿದೆಯೋ ಅದು ಜ್ಞಾನವಾಗಿದೆ _ ಎಂಬುದೇ ನನ್ನ ಮತವಾಗಿದೆ.

***

*ತತ್ಕ್ಷೇತ್ರಂ ಯಚ್ಚ ಯಾದೃಚ್ಛ ಯದ್ವಿಕಾರಿ ಯತಶ್ಚ ಯತ್/*

*ಸ ಚ ಯೋ ಯತ್ಪ್ರಭಾವಶ್ಚ ತತ್ಸಮಾಸೇನ ಮೇ ಶೃಣು//೩//*

       ಆ ಕ್ಷೇತ್ರವು ಯಾವುದು ಮತ್ತು ಹೇಗಿದೆ ಹಾಗೂ ಯಾವ ವಿಕಾರವುಳ್ಳದ್ದಾಗಿದೆ ಮತ್ತು ಯಾವುದರಿಂದ ಯಾವುದು ಉಂಟಾಗಿದೆ,ಹಾಗೂ ಆ ಕ್ಷೇತ್ರಜ್ಞನೂ ಕೂಡ ಯಾರು ಮತ್ತು ಯಾವ ಪ್ರಭಾವವುಳಳವನಾಗಿದ್ದಾನೆ _ ಅದೆಲ್ಲವನ್ನೂ ಸಂಕ್ಷೇಪವಾಗಿ ನನ್ನಿಧ ಕೇಳು.

*ಋಷಿಭಿರ್ಬಹುಧಾ ಗೀತಂ ಛಂದೋಭಿರ್ವಿವದೈ: ಪೃಥಕ್/*

*ಬ್ರಹ್ಮಸೂತ್ರಪದೈಶ್ಯೈವ  ಹೇತುಮದ್ಬಿರ್ವಿನಿಶ್ಚಿತೈ://೪//*

   ಈ ಕ್ಷೇತ್ರ ಮತ್ತು ಕ್ಷೇತ್ರಜ್ಞನ ತತ್ವವು ಋಷಿಗಳ ಮೂಲಕ ಅನೇಕ ಪ್ರಕಾರಗಳಿಂದ ಹೇಳಲ್ಪಟ್ಟಿದೆ ಮತ್ತು ವಿವಿಧ ವೇದ ಮಂತ್ರಗಳ ಮೂಲಕವೂ ವಿಭಾಗಪೂರ್ವಕವಾಗಿ ಹೇಳಲಾಗಿದೆ,ಹಾಗೆಯೇ ಚೆನ್ನಾಗಿ ನಿಶ್ಚಯಿಸಲ್ಪಟ್ಟು ಯುಕ್ತಿಯುಕ್ತವಾದ ಬ್ರಹ್ಮಸೂತ್ರದ ಪದಗಳ ಮೂಲಕವೂ ಹೇಳಲಾಗಿದೆ.

***

  *ಮಹಾಭೂತಾನ್ಯಹಂಕಾರೋ ಬುದ್ಧಿರವ್ಯಕ್ತಮೇವ ಚ/*

*ಇಂದ್ರಿಯಾಣಿ ದಶೈಕಂ ಚ ಪಂಚ ಚೇಂದ್ರಿಯಗೋಚರಾ://೫//*

ಐದು ಮಹಾಭೂತಗಳು,ಅಹಂಕಾರ,ಬುದ್ಧಿ ಮತ್ತು ಮೂಲಪ್ರಕೃತಿ ಕೂಡ ಹಾಗೂ ಹತ್ತು ಇಂದ್ರಿಯಗಳು ,ಒಂದು ಮನಸ್ಸು ಮತ್ತು ಐದು ಇಂದ್ರಿಯಗಳ ವಿಷಯಗಳು ಅರ್ಥಾತ್ ಶಬ್ಧ,ಸ್ಪರ್ಶ,ರೂಪ,ರಸ ಮತ್ತು ಗಂಧ _

     *ಇಚ್ಛಾ ದ್ವೇಷ ಸುಖಂ ದು:ಖಂ ಸಂಘಾತಶ್ಚೇತನಾ ಧೃತಿ:/*

*ಏತಕ್ಷೇತ್ರಂ ಸಮಾಸೇನ ಸವಿಕಾರಮುದಾಹೃತಮ್//೬//*

ಹಾಗೂ ಇಚ್ಛೆ,ದ್ವೇಷ,ಸುಖ,ದು:ಖ,ಸ್ಥೂಲ ದೇಹದ ಪಿಂಡ,ಚೈತನ್ಯ ಮತ್ತು ಧೃತಿ _ ಈ ಪ್ರಕಾರವಾಗಿ ವಿಕಾರಗಳ ಸಹಿತ ಈ ಕ್ಷೇತ್ರವನ್ನು ಸಂಕ್ಷೇಪವಾಗಿ ಹೇಳಲಾಗಿದೆ.

***

*ಅಮಾನಿತ್ವಮದಂಭಿತ್ವಮಹಿಂಸಾ ಕ್ಷಾಂತಿರಾರ್ಜವಮ್/*

*ಆಚಾರ್ಯೋಪಾಸನಂ ಶೌಚಂ ಸ್ಥೈರ್ಯಮಾತ್ಮವಿನಿಗ್ರಹ://೭//*

      ಶ್ರೇಷ್ಠ ತೆಯ ಅಭಿಮಾನದ ಅಭಾವ,ಡಂಭಾಚಾರದ ಅಭಾವ,ಯಾವುದೇ ಪ್ರಾಣಿಯನ್ನು ಯಾವ ರೀತಿಯಲ್ಲಿಯೂ ಹಿಂಸಿಸದಿರುವುದು,ಕ್ಷಮಾಗುಣ,ಮನಸ್ಸು _ ವಾಣಿ ಮೊದಲಾದುವುಗಳ ಸರಳತೆ,ಶ್ರದ್ಧಾಭಕ್ತಿ ಸಹಿತ ಗುರುಗಳ ಸೇವೆ,ಹೊರಗೊಳಗಿನ ಶುದ್ಧಿ,ಅಂತ:ಕರಣದ ಸ್ಥಿರತೆ ಮತ್ತು ಮನಸ್ಸು ಇಂದ್ರಿಯಗಳ ಸಹಿತ ಶರೀರದ ನಿಗ್ರಹ _

        *ಇಂದ್ರಿಯಾರ್ಥೇಷು ವೈರಾಗ್ಯಮನಹಂಕಾರ ಏವ ಚ/*

*ಜನ್ಮಮೃತ್ಯುಜರಾವ್ಯಾಧಿದು:ಖದೋಷಾನುದರ್ಶನಮ್//೮//*

       ಈ ಲೋಕ ಮತ್ತು ಪರಲೋಕದ ಸಂಪೂರ್ಣವಾದ ಭೋಗಗಳಲ್ಲಿ ಆಸಕ್ತಿಯ ಅಭಾವ ಮತ್ತು ಅಹಂಕಾರವು ಕೂಡ ಇಲ್ಲದಿರುವುದು,ಜನ್ಮ,ಮೃತ್ಯು,ಜರಾ ಮತ್ತು ರೋಗ ಮುಂತಾದುವುಗಳಲ್ಲಿ ದು:ಖ ಮತ್ತು ದೋಷಗಳನ್ನು ಪದೇ ಪದೇ ವಿಚಾರ ಮಾಡುವುದು _

***

-ವಿಜಯಾ ಶೆಟ್ಟಿ ಸಾಲೆತ್ತೂರು (ಸಾರ ಸಂಗ್ರಹ)

ಚಿತ್ರ ಕೃಪೆ: ಇಂಟರ್ನೆಟ್ ತಾಣ