ಗೀತಾಮೃತ - 5

ಅಧ್ಯಾಯ ೨
ಕರ್ಮಜಂ ಬುದ್ಧಿಯುಕ್ತಾ ಹಿ ಫಲಂ ತ್ಯಕ್ತ್ವಾ ಮನೀಷಿಣ:/
ಜನ್ಮಬಂಧವಿನಿರ್ಮುಕ್ತಾ: ಪದಂ ಗಚ್ಛಂತ್ಯನಾಮಯಮ್//೫೧//
ಏಕೆಂದರೆ, ಸಮಬುದ್ಧಿಯಿಂದ ಯುಕ್ತರಾದ ಜ್ಞಾನಿಗಳು ಕರ್ಮಗಳಿಂದ ಉಂಟಾಗುವ ಫಲವನ್ನು ತ್ಯಾಗಮಾಡಿ ಜನ್ಮರೂಪೀ ಬಂಧನದಿಂದ ಮುಕ್ತರಾಗಿ ನಿರ್ವಿಕಾರ ಪರಮಪದವನ್ನು ಹೊಂದುತ್ತಾರೆ.
ಯದಾ ತೇ ಮೋಹಕಲಿಲಂ ಬುದ್ಧಿರ್ವ್ಯತಿತರಿಷ್ಯತಿ /
ತದಾ ಗಂತಾಸಿ ನಿರ್ವೇದಂ ಶ್ರೋತವ್ಯಸ್ಯ ಶ್ರುತಸ್ಯ ಚ //೫೨//
ಯಾವ ಕಾಲದಲ್ಲಿ ನಿನ್ನ ಬುದ್ಧಿಯು ಮೋಹರೂಪೀ ಕೆಸರನ್ನು ದಾಟಿಬಿಡುವುದೋ ಆ ಸಮಯದಲ್ಲಿ ನೀನು ಕೇಳಿರುವ , ಕೇಳಿಬರುವ ಈ ಲೋಕ ಮತ್ತು ಪರಲೋಕ ಸಂಬಂಧವಾದ ಎಲ್ಲ ಭೋಗಗಳಂತೆ ವೈರಾಗ್ಯ ವನ್ನು ಪಡೆಯುವೆ.
***
ಶ್ರುತಿವಿಪ್ರತಿಪನ್ನಾ ತೇ ಯದಾ ಸ್ಥಾಸ್ಯತಿ ನಿಶ್ಚಲಾ/
ಸಮಾಧಾವಚಲಾ ಬುದ್ಧಿಸ್ತದಾ ಯೋಗಮವಾಪ್ಸ್ಯಸಿ//೫೩//
ಬಗೆಬಗೆಯ ವಚನಗಳನ್ನು ಕೇಳುವುದರಿಂದ ವಿಚಲಿತ ವಾಗಿರುವ ನಿನ್ನ ಬುದ್ಧಿಯು ಯಾವಾಗ ಪರಮಾತ್ಮನಲ್ಲಿ ಅಚಲ ಮತ್ತು ಸ್ಥಿರವಾಗಿ ನಿಲ್ಲುವುದೋ ಆಗ ಯೋಗವನ್ನು ಪಡೆಯುವೆ ಅರ್ಥಾತ್ ಪರಮಾತ್ಮನೊಡನೆ ನಿನ್ನ ನಿತ್ಯ ಸಂಯೋಗವು ಉಂಟಾಗುವುದು.
ಅರ್ಜುನ ಉವಾಚ:
ಸ್ಥಿತಪ್ರಜ್ಞಸ್ಯ ಕಾ ಭಾಷಾ ಸಮಾಧಿಸ್ಥಸ್ಯ ಕೇಶವ/
ಸ್ಥಿತಧೀ: ಕಿಂ ಪ್ರಭಾಷೇತ ಕಿಮಾಸೀತ ವ್ರಜೇತ ಕಿಮ್//೫೪//
ಅರ್ಜುನನು ಹೇಳಿದನು :
ಹೇ ಕೇಶವಾ! ಸಮಾಧಿಸ್ಥ ನಾಗಿ ಪರಮಾತ್ಮನನ್ನು ಪಡೆದಿರುವ ಸ್ಥಿರಬುದ್ಧಿಯುಳ್ಳ ಪುರುಷನ ಲಕ್ಷಣಗಳೇನು? ಆ ಸ್ಥಿರ ಬುದ್ಧಿಯ ಪುರುಷನು ಹೇಗೆ ಮಾತನಾಡುತ್ತಾನೆ,ಹೇಗೆ ಕುಳಿತಿರುತ್ತಾನೆ ಮತ್ತು ಹೇಗೆ ನಡೆಯುತ್ತಾನೆ?
***
ಯ: ಸರ್ವತ್ರಾನಭಿಸ್ನೇಹಸ್ತತ್ತತ್ಪ್ರಾಪ್ಯ ಶುಭಾಶುಭಮ್/
ನಾಭಿನಂದತಿ ನ ದ್ವೇಷ್ಟಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ//೫೭//
ಯಾವ ಪುರುಷನು ಸರ್ವತ್ರ ಸ್ನೇಹರಹಿತನಾಗಿದ್ದು ಆಯಾಯಾ ಶುಭಾಶುಭ ವಸ್ತುಗಳನ್ನು ಪಡೆದುಕೊಂಡು ಪ್ರಸನ್ನನಾಗುವುದಿಲ್ಲವೋ ಮತ್ತು ದ್ವೇಷಿಸುವುದಿಲ್ಲವೋ ಅವನ ಬುದ್ಧಿಯು ಸ್ಥಿರವಾಗಿದೆ.
ಯದಾ ಸಂಹರತೇ ಚಾಯಂ ಕೂರ್ಮೋಂಗಾನೀವ ಸರ್ವಶ:/
ಇಂದ್ರಿಯಾಣೀಂದ್ರಿಯಾರ್ಥೇಭ್ಯಸ್ತಸ್ಯ ಪ್ರಜ್ಞಾ ಪ್ರತಿಷ್ಠಿತಾ//೫೮//
ಮತ್ತು ಆಮೆಯು ಎಲ್ಲ ಕಡೆಯಿಂದ ತನ್ನ ಅಂಗಗಳನ್ನು ಹೇಗೆ ಒಳಕ್ಕೆ ಸೆಳೆದುಕೊಳ್ಳುತ್ತದೆಯೋ ಹಾಗೆಯೇ ಯಾವಾಗ ಈ ಪುರುಷನು ಇಂದ್ರಿಯಗಳ ವಿಷಯಗಳಿಂದ ಇಂದ್ರಿಯಗಳನ್ನು ಎಲ್ಲ ಪ್ರಕಾರಗಳಿಂದ ಹಿಂದಕ್ಕೆಳೆದು ಕೊಳ್ಳುತ್ತಾನೆಯೋ ಆಗ ಅವನ ಬುದ್ಧಿಯು ಸ್ಥಿರವಾಗಿದೆಯೆಂದು ತಿಳಿಯಬೇಕು.
ಸಾರ ಸಂಗ್ರಹ : ವಿಜಯಾ ಶೆಟ್ಟಿ ಸಾಲೆತ್ತೂರು