ಗೀತಾಮೃತ - 51

*ಅಧ್ಯಾಯ ೧೩*
*ಜ್ಯೋತಿಷಾಮಪಿ ತಜ್ಜ್ಯೋಸ್ತಮಸ: ಪರಮುಚ್ಯತೇ/* *ಜ್ಞಾನಂ ಜ್ಞೇಯಂ ಜ್ಞಾನಗಮ್ಯಂ ಹೃದಿ ಸರ್ವಸ್ಯ ವಿಷ್ಠಿತಮ್//೧೪//*
ಆ ಪರಬ್ರಹ್ಮವು ಜ್ಯೋತಿಗಳಿಗೂ ಕೂಡ ಜ್ಯೋತಿಯು ಮತ್ತು ಮಾಯೆಗಿಂತ ಅತೀತವೂ ಭೋಧಸ್ವರೂಪವೂ ತಿಳಿಯಲು ಯೋಗ್ಯವೂ ಹಾಗೂ ತತ್ತ್ವಜ್ಞಾನದಿಂದ ಪಡೆಯಲು ಯೋಗ್ಯವೂ ಮತ್ತು ಎಲ್ಲರ ಹೃದಯದಲ್ಲಿ ವುಶೇಷರೂಪದಿಂದ ಸ್ಥಿತವೆಂದು ಹೇಳಲಾಗುತ್ತದೆ.
*ಇತಿ ಕ್ಷೇತ್ರಂ ತಥಾ ಜ್ಞಾನಂ ಜ್ಞೇಯಂ ಚೋಕ್ತಂ ಸಮಾಸತ: /* *ಮದ್ಭಕ್ತ ಏತದ್ವಿಜ್ಞಾಯ ಮದ್ಭಾವಾಯೋಪಪದ್ಯತೇ//೧೮//* ಈ ಪ್ರಕಾರವಾಗಿ ಕ್ಷೇತ್ರಹಾಗೂಜ್ಞಾನ ಮತ್ತು ತಿಳಿಯಲು ಯೋಗ್ಯವಾದ ಪರಮಾತ್ಮನ ಸ್ವರೂಪವನ್ನು ಸಂಕ್ಷೇಪವಾಗಿ ಹೇಳಲಾಯಿತು.ನನ್ನ ಭಕ್ತನು ಇದನ್ನು ತತ್ತ್ವಶ: ತಿಳಿದುಕೊಂಡು ನನ್ನ ಸ್ವರೂಪವನ್ನು ಪಡೆಯುತ್ತಾನೆ.
***
*ಪ್ರಕೃತಿಂ ಪುರುಷಂ ಚೈವ ವಿದ್ಯ್ದನಾದೀ ಉಭಾವಪಿ/*
*ವಿಕಾರಾಂಶ್ಚ ಗುಣಾಶ್ಚೈವ ವಿದ್ದಿ ಪ್ರಕೃತಿಸಂಭವಾನ್//೧೯//*
ಪ್ರಕೃತಿ ಮತ್ತು ಪುರುಷ ಇವೆರಡನ್ನೂ ಸಹ ನೀನು ಅನಾದಿಯೆಂದು ತಿಳಿ ಮತ್ತು ರಾಗ _ ದ್ವೇಷಾದಿ ವಿಕಾರಗಳನ್ನು ಹಾಗೂ ತ್ರಿಗುಣಾತ್ಮಕವಾದ ಸಂಪೂರ್ಣ ಪದಾರ್ಥಗಳನ್ನು ಸಹ ಪ್ರಕೃತಿಯಿಂದಲೇ ಉತ್ಪನ್ನವಾದುವು ಎಂದು ತಿಳಿ.
*ಕಾರ್ಯಕಾರಣಕರ್ತೃತ್ವೇ ಹೇತು: ಪ್ರಕೃತಿರುಚ್ಯತೇ/*
*ಪುರುಷ: ಸುಖದು:ಖಾನಾಂ ಭೋಕ್ತೃತ್ವೇ ಹೇತುರುಚ್ಯತೇ//೨೦//*
ಕಾರ್ಯ ಮತ್ತು ಕರಣಗಳನ್ನು ಉತ್ಪನ್ನಮಾಡುವುದರಲ್ಲಿ ಪ್ರಕೃತಿಯು ಕಾರಣವೆಂದು ಹೇಳಲಾಗುತ್ತದೆ ಮತ್ತು ಜೀವಾತ್ಮನು ಸುಖ _ದು:ಖಗಳ ಭೋಕ್ತೃತ್ವದಲ್ಲಿ ಅರ್ಥಾತ್ ಭೋಗಿಸುವುದರಲ್ಲಿ ಕಾರಣನೆಂದು ಹೇಳಲಾಗುತ್ತದೆ.
***
*ಪುರುಷ: ಪ್ರಕೃತಿಸ್ಥೋ ಹಿ ಭುಂಕ್ತೇ ಪ್ರಕೃತಿಜಾನ್ಗುಣಾನ್/*
*ಕಾರಣಂ ಗುಣ ಸಂಗೋಸ್ಯ ಸದಸದ್ಯೋನಿಜನ್ಮಸು//೨೦//*
ಪ್ರಕೃತಿ ಯಲ್ಲಿ ಸ್ಥಿತನಾದ ಪುರುಷನೇ ಪ್ರಕೃತಿಯಿಂದ ಉತ್ಪನ್ನವಾದ ತ್ರಿಗುಣಾತ್ಮಿಕವಾದ ಪದಾರ್ಥಗಳನ್ನು ಭೋಗಿಸುತ್ತಾನೆ ಮತ್ತು ಆ ಗುಣಗಳ ಸಂಗವೇ ಈ ಜೀವಾತ್ಮನು ಒಳ್ಳೆಯ ಮತ್ತು ಕೆಟ್ಟ ಯೋನಿಗಳಲ್ಲಿ ಜನಿಸುವುದಕ್ಕೆ ಕಾರಣವಾಗಿದೆ.
*ಉಪದ್ರಷ್ಟಾನಮಂತಾ ಚ ಭರ್ತಾ ಭೋಕ್ತಾ ಮಹೇಶ್ವರ:/*
*ಪರಮಾತ್ಮೇತಿ ಚಾಪ್ಯುಕ್ತೋ ದೇಹಸ್ಮಿನ್ ಪುರುಷ: ಪರ://೨೨//*
ಈ ದೇಹದಲ್ಲಿ ಸ್ಥಿತನಾಗಿದ್ದರೂ ಈ ಆತ್ಮನು ವಾಸ್ತವದಲ್ಲಿ ಪರಮಾತ್ಮನೇ ಆಗಿದ್ದಾನೆ.ಅವನೇ ಸಾಕ್ಷಿಯಾಗಿರುವುದರಿಂದ ಉಪದ್ರಷ್ಟಾ ಮತ್ತು ಯಥಾರ್ಥ ಸಮ್ಮತಿಕೊಡುವವನಾದ್ದರಿಂದ ಅನುಮಂತಾ,ಎಲ್ಲರ ಧಾರಣೆ ಪೋಷಣೆ ಮಾಡುವವನಾದ್ದರಿಂದ ಭರ್ತಾ,ಜೀವರೂಪದಿಂದ ಭೋಕ್ತಾ,ಬ್ರಹ್ಮಾ ಮೊದಲಾದವರ ಒಡೆಯನಾದ್ದರಿಂದ ಮಹೇಶ್ವರ ಮತ್ತು ಶುದ್ಧಸಚ್ಚಿದಾನಂದಘನನಾದ್ದರಿಂದ ಪರಮಾತ್ಮಾ ಎಂದು ಹೇಳಲಾಗಿದೆ.
***
*ಯ ಏವಂ ವೇತ್ತಿ ಪುರುಷಂ ಪ್ರಕೃತಿಂ ಚ ಗುಣೈ: ಸಹ/*
*ಸರ್ವಥಾ ವರ್ತಮಾನೋಪಿ ನ ಸ ಭೂಯೋಭಿಜಾಯತೇ/*
ಈ ಪ್ರಕಾರವಾಗಿ ಪುರುಷನನ್ನು ಮತ್ತು ಗುಣಗಳ ಸಹಿತವಾಗಿ ಪ್ರಕೃತಿಯನ್ನು ಯಾವ ಮನುಷ್ಯನು ತತ್ವಶ: ತಿಳಿಯುತ್ತಾನೋ ಅವನು ಎಲ್ಲ ಪ್ರಕಾರಗಳಿಂದ ಕರ್ತವ್ಯ ಕರ್ಮಗಳನ್ನು ಮಾಡುತ್ತಿದ್ದರೂ ಸಹ ಪುನ: ಜನಿಸುವುದಿಲ್ಲ.
*ಧ್ಯಾನೇನಾತ್ಮನಿ ಪಶ್ಯಂತಿ ಕೇಚಿದಾತ್ಮಾನಾಮಾತ್ಮಾನಾ/*
*ಅನ್ಯೇ ಸಾಂಖ್ಯೇನ ಯೋಗೇನ ಕರ್ಮಯೋಗೇನ ಚಾಪರೇ//೨೪//* ಆ ಪರಮಾತ್ಮನನ್ನು ಎಷ್ಟೋ ಮನುಷ್ಯರು ಶುದ್ಧವಾದ ಸೂಕ್ಷ್ಮಬುದ್ಧಿಯಿಂದ ಧ್ಯಾನದ ಮೂಲಕ ಹೃದಯದಲ್ಲಿ ನೋಡುತ್ತಾರೆ; ಬೇರೆ ಎಷ್ಟೋ ಜನರು ಜ್ಞಾನಯೋಗದ ಮೂಲಕ ಮತ್ತು ಇನ್ನೂ ಕೆಲವರು ಕರ್ಮಯೋಗದ ಮೂಲಕ ನೋಡುತ್ತಾರೆ ಅಂದರೆ ಪಡೆಯುತ್ತಾರೆ.
***
-ವಿಜಯಾ ಶೆಟ್ಟಿ ಸಾಲೆತ್ತೂರು (ಸಾರ ಸಂಗ್ರಹ)
ಚಿತ್ರ: ಇಂಟರ್ನೆಟ್ ತಾಣ