ಗೀತಾಮೃತ - 53

*ಅಧ್ಯಾಯ ೧೩*
*ಯಥಾ ಪ್ರಕಾಶಯತ್ಯೇಕ: ಕೃತ್ಸ್ನಂ ಲೋಕಮಿಮಂ ರವಿ:/*
*ಕ್ಷೇತ್ರಂ ಕ್ಷೇತ್ರೀ ತಥಾ ಕೃತ್ಸ್ನಂ ಪ್ರಕಾಶಯತಿ ಭಾರತ//೩೩//*
ಹೇ ಅರ್ಜುನಾ! ಯಾವ ಪ್ರಕಾರವಾಗಿ ಒಬ್ಬನೇ ಸೂರ್ಯನು ಈ ಸಂಪೂರ್ಣ ಬ್ರಹ್ಮಾಂಡ ವನ್ನು ಬೆಳಗಿಸುತ್ತಾನೋ ಅದೇ ಪ್ರಕಾರ ಒಬ್ಬನೇ ಆತ್ಮನು ಸಂಪೂರ್ಣ ಕ್ಷೇತ್ರ ವನ್ನು ಪ್ರಕಾಶಿಸುತ್ತಾನೆ.
*ಕ್ಷೇತ್ರ ಕ್ಷೇತ್ರ ಜ್ಞಯೋರೇವಮಂತರಂ ಜ್ಞಾನಚಕ್ಷುಷಾ /*
*ಭೂತಪ್ರಕೃತಿಮೋಕ್ಷಂ ಚ ಯೇ ವಿದುರ್ಯಾಂತಿ ತೇ ಪರಮ್//೩೪//*
ಈ ಪ್ರಕಾರವಾಗಿ ಕ್ಷೇತ್ರ ಮತ್ತು ಕ್ಷೇತ್ರಜ್ಞರ ಭೇದವನ್ನು ಹಾಗೂ ಕಾರ್ಯಸಹಿತ ಪ್ರಕೃತಿಯಿಂದ ಮುಕ್ತರಾಗುವುದನ್ನು ಯಾವ ಪುರುಷರು ಜ್ಞಾನನೇತ್ರಗಳಿಂದ ತತ್ತ್ವಶ: ತಿಳಿಯುತ್ತಾರೋ ಆ ಮಹಾತ್ಮರು ಪರಬ್ರಹ್ಮ ಪರಮಾತ್ಮನನ್ನು ಪಡೆಯುತ್ತಾರೆ.
***
*ಅಧ್ಯಾಯ ೧೪*
*ಅಥ ಚತುರ್ದಶೋಧ್ಯಾಯ: //*
*ಗುಣತ್ರಯವಿಭಾಗಯೋಗವು*
*ಶ್ರೀ ಭಗವಾನುವಾಚ*
*ಪರಂ ಭೂಯ: ಪ್ರವಕ್ಷ್ಯಾಮಿ ಜ್ಞಾನಾನಾಂ ಜ್ಞಾನಮುತ್ತಮಮ್/*
*ಯಜ್ಞ್ಜತ್ವಾಮುನಯ: ಸರ್ವೇ ಪರಾಂ ಸಿದ್ಧಿಮಿತೋ ಗತಾ://೧//*
ಶ್ರೀ ಭಗವಂತನು ಹೇಳಿದನು _ ಯಾವುದನ್ನು ತಿಳಿದುಕೊಂಡು ಎಲ್ಲ ಮುನಿಜನರು ಜಗತ್ತಿನಿಂದ ಮುಕ್ತರಾಗಿ ಪರಮಸಿದ್ಧಿಯನ್ನು ಪಡೆದಿದ್ದಾರೋ ಅಂತಹ ಜ್ಞಾನಗಳಲ್ಲಿ ಅತ್ಯತ್ತಮವಾದ ಆ ಪರಮ ಜ್ಞಾನವನ್ನು ನಾನು ಪುನ: ನಿನಗೆ ಹೇಳುವೆನು.
*ಇದಂ ಜ್ಞಾನಮುಪಾಶ್ರಿತ್ಯ ಮಮ ಸಾಧರ್ಮ್ಯಮಾಗತಾ:/*
*ಸರ್ಗೇಪಿ ನೋಪಜಾಯಂತೇ ಪ್ರಲಯೇ ನ ವ್ಯಥಂತಿ ಚ//೨//*
ಈ ಜ್ಞಾನವನ್ನಾಶ್ರಯಿಸಿ ಅರ್ಥಾತ್ ಧಾರಣೆಮಾಡಿ ನನ್ನ ಸ್ವರೂಪವನ್ನು ಪ್ರಾಪ್ತಿಮಾಡಿಕೊಂಡ ಪುರುಷರು ಸೃಷ್ಟಿ ಯ ಆದಿಯಲ್ಲಿ ಪುನ: ಹುಟ್ಟುವುದಿಲ್ಲ ಮತ್ತು ಪ್ರಳಯಕಾಲದಲ್ಲಿಯೂ ಸಹ ದು:ಖಿತನಾಗುವುದಿಲ್ಲ.
***
*ಮಮ ಯೋನಿರ್ಮಹದ್ಬ್ರಹ್ಮತಸ್ಮಿನ್ ಗರ್ಭಂ ದಧಾಮ್ಯಹಮ್/*
*ಸಂಭವ: ಸರ್ವಭೂತಾನಾಂ ತತೋ ಭವತಿ ಭಾರತ//೩//*
ಹೇ ಅರ್ಜುನಾ! ನನ್ನ ಮಹತ್ ಬ್ರಹ್ಮರೂಪೀ ಮೂಲಪ್ರಕೃತಿಯು ಸಮಸ್ತ ಪ್ರಾಣಿಗಳ ಯೋನಿಯಾಗಿದೆ ಅರ್ಥಾತ್ ಗರ್ಭಾಧಾನದ ಸ್ಥಾನವಾಗಿದೆ ಮತ್ತು ನಾನು ಆ ಯೋನಿಯಲ್ಲಿ ಚೇತನ ಸಮುದಾಯರೂಪೀ ಗರ್ಭವನ್ನು ಸ್ಥಾಪಿಸುತ್ತೇನೆ.ಆ ಜಡ ಚೇತನದ ಸಂಯೋಗದಿಂದ ಎಲ್ಲ ಪ್ರಾಣಿಗಳ ಉತ್ಪತ್ತಿಯಾಗುತ್ತದೆ.
*ಸರ್ವಯೋನೀಷು ಕೌಂತೇಯ ಮೂರ್ತೇಯ: ಸಂಭವಂತಿ ಯಾ:/* *ತಾಸಾಂ ಬ್ರಹ್ಮ ಮಹದ್ಯೋನಿರಹಂ ಬೀಜಪ್ರದ: ಪಿತಾ//೪//*
ಹೇ ಅರ್ಜುನಾ! ನಾನಾ ಪ್ರಕಾರದ ಎಲ್ಲಾ ಯೋನಿಗಳಲ್ಲಿ ಎಷ್ಟು ಮೂರ್ತಿಗಳು ಅರ್ಥಾತ್ ಶರೀರಧಾರಿ ಪ್ರಾಣಿಗಳು ಹುಟ್ಟುತ್ತವೆಯೋ, ಪ್ರಕೃತಿಯಾದರೋ ಅವೆಲ್ಲದರ ಗರ್ಭಧಾರಣೆ ಮಾಡುವ ತಾಯಿಯಾಗಿದ್ದಾಳೆ ಮತ್ತು ನಾನು ಬೀಜವನ್ನು ಸ್ಥಾಪಿಸುವ ತಂದೆಯಾಗಿದ್ದೇನೆ.
***
*ಸತ್ತ್ವಂ ರಜಸ್ತಮ ಇತಿ ಗುಣಾ: ಪ್ರಕೃತಿಸಂಭವಾ:/*
*ನಿಬಧ್ನಂತಿ ಮಹಾಬಾಹೋ ದೇಹೇ ದೇಹಿನಮವ್ಯಯಮ್//೫//*
ಹೇ ಅರ್ಜುನಾ! ಸತ್ವಗುಣ,ರಜೋಗುಣ ಮತ್ತು ತಮೋಗುಣಗಳೆಂಬ ಈ ಮೂರೂ ಗುಣಗಳು ಪ್ರಕೃತಿಯಿಂದ ಉತ್ಪನ್ನವಾಗಿ ಅವಿನಾಶಿಯಾದ ಜೀವಾತ್ಮನನ್ನು ದೇಹದಲ್ಲಿ ಬಂಧಿಸುತ್ತದೆ.
*ತತ್ರ ಸತ್ತ್ವಂ ನಿರ್ಮಲತ್ವಾತ್ಪ್ರಕಾಶಕಮನಾಮಯಮ್/*
*ಸುಖಸಂಗೇನ ಬಧ್ನಾತಿ ಜ್ಞಾನಸಂಗೇನ ಚಾನಘ//೬//*
ಹೇ ಪಾಪರಹಿತನೇ! ಆ ಮೂರೂ ಗುಣಗಳಲ್ಲಿ ಸತ್ವಗುಣವಾದರೋ ನಿರ್ಮಲವಾದ ಕಾರಣ ಪ್ರಕಾಶಗೊಳಿಸುವಂತಹುದು ಮತ್ತು ವಿಕಾರರಹಿತವಾಗಿದೆ,ಆದರೆ ಅದು ಸುಖದ ಸಂಬಂಧದಿಂದ ಮತ್ತು ಜ್ಞಾನದ ಸಂಬಂಧದಿಂದ ಅರ್ಥಾತ್ ಅದರ ಅಭಿಮಾನದಿಂದ ಬಂಧಿಸುತ್ತದೆ.
***
-ವಿಜಯಾ ಶೆಟ್ಟಿ ಸಾಲೆತ್ತೂರು (ಸಾರ ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್ ತಾಣ