ಗೀತಾಮೃತ - 56
*ಅಧ್ಯಾಯ ೧೪*
*ಮಾನಾಪಮಾನಯೋಸ್ತುಲ್ಯಸ್ತುಲ್ಯೋ ಮಿತ್ರಾರಿಪಕ್ಷಯೋ:/*
*ಸರ್ವಾರಂಭಪರಿತ್ಯಾಗೀ ಗುಣಾತೀತ: ಸ ಉಚ್ಯತೇ//೨೫//*
ಯಾರು ಮಾನ ಮತ್ತು ಅಪಮಾನಗಳಲ್ಲಿ ಸಮನಾಗಿದ್ದಾನೋ,ಮಿತ್ರ ಮತ್ತು ವೈರಿಯ ಪಕ್ಷದಲ್ಲಿ ಸಹ ಸಮನಾಗಿದ್ದಾನೋ ಮತ್ತು ಸಂಪೂರ್ಣವಾದ ಕರ್ಮಗಳಲ್ಲಿ ಕರ್ತೃತ್ವದ ಅಭಿಮಾನ ರಹಿತನಾಗಿದ್ದಾನೋ _ ಆ ಪುರುಷನು ಗುಣಾತೀತನೆಂದು ಹೇಳಲ್ಪಡುತ್ತಾನೆ.
*ಮಾಂ ಚ ಯೋವ್ಯಭಿಚಾರೇಣ ಭಕ್ತಿಯೋಗೇನ ಸೇವತೇ/*
*ಸಗುಣಾನ್ಸಮತೀತ್ಯೈತಾನ್ಬ್ರಹ್ಮಭೂಯಾಯ ಕಲ್ಪತೇ//೨೬//*
ಯಾವ ಪುರುಷನು ಅವ್ಯಭಿಚಾರೀ ಭಕ್ತಿಯೋಗದ ಮೂಲಕ ನನ್ನನ್ನು ನಿರಂತರ ಭಜಿಸುತ್ತಾನೋ ಅವನು ಕೂಡ ಈ ಮೂರೂ ಗುಣಗಳನ್ನು ಚೆನ್ನಾಗಿ ದಾಟಿಕೊಂಡು ಸಚ್ಚಿದಾನಂದಘನ ಬ್ರಹ್ಮವನ್ನು ಪಡೆಯಲು ಯೋಗ್ಯನಾಗುತ್ತಾನೆ.
***
*ಬ್ರಹ್ಮಣೋ ಹಿ ಪ್ರತಿಷ್ಠಾಹಮಮೃತಸ್ಯಾವ್ಯಯಸ್ಯ ಚ/*
*ಶಾಶ್ವತಸ್ಯ ಚ ಧರ್ಮಸ್ಯ ಸುಖಸ್ಯೈಕಾಂತಿಕಸ್ಯ ಚ//೨೭//*
ಏಕೆಂದರೆ ಆ ಅವಿನಾಶಿಯಾದ ಪರಬ್ರಹ್ಮನ ಮತ್ತು ಅಮೃತದ ಹಾಗೂ ನಿತ್ಯವಾದ ಧರ್ಮದ ಮತ್ತು ಅಖಂಡ ಏಕರಸ ಆನಂದದ ಆಶ್ರಯವು ನಾನೇ ಆಗಿದ್ದೇನೆ.
*ಓಂ ತತ್ಸದಿತಿ ಶ್ರೀ ಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಸಯಾಂ ಯೋಗಶಾಸ್ತ್ರೇ ಶ್ರೀ ಕೃಷ್ಣಾರ್ಜುನ ಸಂವಾದೇ ಗುಣತ್ರಯ ವಿಭಾಗಯೋಗೋನಾಮ ಚತುರ್ದಶೋಧ್ಯಾಯ://೧೪//*
***
*ಅಧ್ಯಾಯ ೧೫*
*//ಅಥ ಪಂಚ್ ಶೋಧದ ಯಾ://* *ಪುರುಷೋತ್ತಮಯೋಗ:*
*ಶ್ರೀ ಭಗವಾನುವಾಚ*
*ಊರ್ಧ್ವಮೂಲಮಧ:ಶಾಖಮಶ್ವತ್ಥಂ ಪ್ರಾಹುರವ್ಯಯಮ್/*
*ಛಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್//*
ಶ್ರೀ ಭಗವಂತನು ಹೇಳಿದನು _ ಆದಿಪುರುಷ ಪರಮೇಶ್ವರ ನು ಯಾವುದರ ಬೇರು ಆಗಿದ್ದಾನೋ,ಬ್ರಹ್ಮದೇವರು ಯಾವುದರ ಮುಖ್ಯಕಾಂಡವಾಗಿದ್ದಾರೋ ಆ ಜಗತ್ಪ್ರೂಪೀ ಅಶ್ವತ್ಥವೃಕ್ಷವನ್ನು ಅವಿನಾಶೀ ಎಂದು ಹೇಳುತ್ತಾರೆ; ಹಾಗೂ ವೇದಗಳು ಯಾವುದರ ಎಲೆಗಳೆಂದು ಹೇಳಲ್ಪಟ್ಟಿದೆಯೋ _ ಆ ಜಗದ್ರೂಪೀ ಅಶ್ವತ್ಥ ವೃಕ್ಷವನ್ನು ಯಾರು ತತ್ತ್ವದಿಂದ ತಿಳಿಯುತ್ತಾನೋ ಅವನು ವೇದಗಳ ತಾತ್ಪರ್ಯವನ್ನು ತಿಳಿದವನಾಗಿದ್ದಾನೆ.
*ಅಧೋಶ್ಚೋರ್ಧ್ವಂ ಪ್ರಸೃತಾಸ್ತಸ್ಯ ಶಾಖಾ ಗುಣಪ್ರವೃದ್ಧಾ ವಿಷಯಪ್ರವಾಲಾ:/*
*ಅಧಶ್ಚ ಮೂಲಾನ್ಯನುಸಂತತಾನಿ ಕರ್ಮಾನುಬಂಧೀನಿ ಮನುಷ್ಯಲೋಕೇ//೨//*
ಆ ಜಗತ್ತೆಂಬ ಅಶ್ವತ್ಥವೃಕ್ಷದ ಮೂರು ಗುಣರೂಪೀ ನೀರಿನಿಂದ ಬೆಳೆದಿರುವ ವಿಷಯ ಭೋಗರೂಪೀ ಚಿಗುರುಗಳುಳ್ಳ ದೇವ,ಮನುಷ್ಯ ಮತ್ತು ತಿರ್ಯಕ್ ಮೊದಲಾದ ಯೋನಿರೂಪವಾದ ಕೊಂಬೆಗಳು ಕೆಳಗೆ ಮತ್ತು ಮೇಲೆ ಎಲ್ಲೆಲ್ಲಿಯೂ ಹರಡಿಕೊಂಡಿವೆ ಹಾಗೂ ಮನುಷ್ಯ ಜನ್ಮದಲ್ಲಿ ಕರ್ಮಗಳಿಗನುಸಾರವಾಗಿ ಬಂಧಿಸುವಂತಹ ಅಹಂತೆ,ಮಮತೆ ಮತ್ತು ವಾಸನಾರೂಪೀ ಬಿಳಲುಗಳೂ ಕೂಡ ಕೆಳಗೆ ಮತ್ತು ಮೇಲೆ ಎಲ್ಲ ಲೋಕಗಳಲ್ಲಿ ಹರಡಿಕೊಳ್ಳುತ್ತವೆ.

-ವಿಜಯಾ ಶೆಟ್ಟಿ ಸಾಲೆತ್ತೂರು (ಸಾರ ಸಂಗ್ರಹ)
ಚಿತ್ರ: ಇಂಟರ್ನೆಟ್ ತಾಣ