ಗೀತಾಮೃತ - 58

*ಗಾಮಾವಿಶ್ಯ ಚ ಭೂತಾನಿ ಧಾರಯಾಮ್ಯಹಮೋಜಸಾ/*
*ಪುಷ್ಣಾಮಿ ಚೌಷಧೀ: ಸರ್ವಾ: ಸೋಮೋ ಭೂತ್ವಾರಸಾತ್ಮಕ://೧೩//*
ಮತ್ತು ನಾನೇ ಪೃಥ್ವಿಯಲ್ಲಿ ಪ್ರವೇಶ ಮಾಡಿ ನನ್ನ ಶಕ್ತಿಯಿಂದ ಎಲ್ಲ ಪ್ರಾಣಿಗಳನ್ನು ಧರಿಸುತ್ತೇನೆ ಮತ್ತು ರಸ ಸ್ವರೂಪೀ ಅರ್ಥಾತ್ ಅಮೃತಮಯ ಚಂದ್ರನಾಗಿ ಸಂಪೂರ್ಣ ವನಸ್ಪತಿಗಳನ್ನು ಪುಷ್ಟಿಗೊಳಿಸುತ್ತೇನೆ.
*ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತ:/*
*ಪ್ರಾಣಾಪಾನಸಮಾಯುಕ್ತ: ಪಚಾಮ್ಯನ್ನಂ ಚತುರ್ವಿಧಮ್//೧೪//*
ನಾನೇ ಎಲ್ಲ ಪ್ರಾಣಿಗಳ ಶರೀರದಲ್ಲಿ ಸ್ಥಿತನಾಗಿ ,ಪ್ರಾಣ ಮತ್ತು ಅಪಾನಗಳಿಂದ ಕೂಡಿದ ವೈಶ್ವಾನರ ಅಗ್ನಿರೂಪಿಯಾಗಿ ನಾಲ್ಕು ಪ್ರಕಾರವಾದ ಅನ್ನವನ್ನು ಜೀರ್ಣವಾಗಿಸುತ್ತೇನೆ.
***
*ಸರ್ವಸ್ವ ಚಾಹಂ ಹೃದಿ ಸಂನಿವಿಷ್ಟೋ ಮತ್ತ: ಸ್ಮೃತಿರ್ಜ್ಞಾನಮಪೋಹನಂ ಚ/*
*ವೇದೈಶ್ಚ ಸರ್ವೈರಹಮೇವ ವೇದ್ಯೋ ವೇದಾಂತಕೃದ್ವೇದವಿದೇವ ಚಾಹಮ್//೧೫//*
ನಾನೇ ಎಲ್ಲ ಪ್ರಾಣಿಗಳ ಹೃದಯದಲ್ಲಿ ಅಂತರ್ಯಾಮಿ ರೂಪದಿಂದ ಸ್ಥಿತನಾಗಿದ್ದೇನೆ; ನನ್ನಿಂದಲೇ ಸ್ಮೃತಿಜ್ಞಾನ ಉಂಟಾಗುತ್ತದೆ ಹಾಗೂ ಸಂಶಯಾದಿ ದೋಷಗಳ ನಿವಾರಣೆಯಾಗುತ್ತದೆ ಮತ್ತು ಎಲ್ಲ ವೇದಗಳ ಮೂಲಕ ನಾನೇ ತಿಳಿಯಲು ಯೋಗ್ಯನಾಗಿದ್ದೇನೆ ಹಾಗೂ ವೇದಾಂತದ ಕರ್ತೃ ಮತ್ತು ವೇದಗಳನ್ನು ಬಲ್ಲವನೂ ಸಹ ನಾನೇ ಆಗಿದ್ದೇನೆ.
*ದ್ವಾವಮೌ ಪುರುಷೌ ಲೋಕೇ ಕ್ಷರಶ್ಚಾಕ್ಷರ ಏವ ಚ /*
*ಕ್ಷರ: ಸರ್ವಾಣಿ ಭೂತಾನಿ ಕೂಟಸ್ಥೋಕ್ಷರ ಉಚ್ಯತೇ//೧೬//*
ಈ ಜಗತ್ತಿನಲ್ಲಿ ನಾಶವಾಗುವ ಹಾಗೂ ನಾಶವಾಗದೇ ಇರುವ ಎರಡು ಪ್ರಕಾರದ ಪುರುಷರಿದ್ದಾರೆ.ಇವರಲ್ಲಿ ಸಂಪೂರ್ಣ ಭೂತಪ್ರಾಣಿಗಳ ಶರೀರವಾದರೋ ನಾಶವಾಗುವಂತಹುದು ಮತ್ತು ಜೀವಾತ್ಮನು ಅವಿನಾಶಿಯೆಂದು ಹೇಳಲಾಗುತ್ತದೆ.
***
*ಉತ್ತಮ: ಪುರುಷಸ್ತ್ವನ್ಯ: ಪರಮಾತ್ಮೇತ್ಯುದಾಹೃತ:/*
*ಯೋ ಲೋಕತ್ರಯಮಾವಿಶ್ಯ ಬಿಭರ್ತ್ಯವ್ಯಯ ಈಶ್ವರ://೧೭//*
ಇವರಿಬ್ಬರಿಗಿಂತ ಉತ್ತಮ ಪುರುಷನಾದರೋ ಬೇರೆಯೇ ಆಗಿದ್ದಾನೆ.ಯಾರು ಮೂರೂ ಲೋಕಗಳಲ್ಲಿ ಪ್ರವೇಶಮಾಡಿ ಎಲ್ಲರ ಧಾರಣೆ,ಪೋಷಣೆ ಮಾಡುತ್ತಾನೆಯೋ ಅವನನ್ನು ಅವಿನಾಶಿ,ಪರಮೇಶ್ವರ ಮತ್ತು ಪರಮಾತ್ಮ ಈ ಪ್ರಕಾರವಾಗಿ ಹೇಳಲಾಗಿದೆ.
*ಯಸ್ಮಾತ್ ಕ್ಷರಮತೀತೋಹಮಕ್ಷರಾದಪಿ ಚೋತ್ತಮ:/*
*ಆತೋಸ್ಮಿ ಲೋಕೇ ವೇದೇ ಚ ಪ್ರಥಿತ: ಪುರುಷೋತ್ತಮ://೧೮//*
ಏಕೆಂದರೆ ನಾನು ನಾಶವಾಗುವ ಜಡವರ್ಗ ಕ್ಷೇತ್ರಕ್ಕಿಂತಲಾದರೋ ಸರ್ವಥಾ ಅತೀತನಾಗಿದ್ದೇನೆ ಮತ್ತು ಅವಿನಾಶಿಯಾದ ಜೀವಾತ್ಮನಿಗಿಂತಲೂ ಕೂಡ ಉತ್ತಮನಾಗಿದ್ದೇನೆ ಆದ್ದರಿಂದ ಲೋಕದಲ್ಲಿ ಮತ್ತು ವೇದದಲ್ಲಿ ಕೂಡ ಪುರುಷೋತ್ತಮನೆಂಬ ಹೆಸರಿನಿಂದ ಪ್ರಸಿದ್ದನಾಗಿದ್ದೇನೆ.
***
*ಯೋ ಮಾಮೇವಮಸಮ್ಮೂಢೋ ಜಾನಾತಿ ಪುರುಷೋತ್ತಮಮ್/*
*ಸ ಸರ್ವವಿದ್ಭಜತಿ ಮಾಂ ಸರ್ವಭಾವೇನ ಭಾರತ//೧೯//*
ಹೇ ಅರ್ಜುನಾ! ಯಾವ ಜ್ಞಾನಿ ಪುರುಷನು ನನ್ನನ್ನು ಈ ಪ್ರಕಾರವಾಗಿ ತತ್ವದಿಂದ ಪುರುಷೋತ್ತಮನೆಂದು ತಿಳಿಯುತ್ತಾನೋ ಆ ಸರ್ವಜ್ಞನಾದ ಪುರುಷನು ಎಲ್ಲ ಪ್ರಕಾರದಿಂದ ನಿರಂತರವಾಗಿ ವಾಸುದೇವ ಪರಮೇಶ್ವರನಾದ ನನ್ನನ್ನೇ ಭಜಿಸುತ್ತಾನೆ.
*ಇತಿ ಗುಹ್ಯತಮಂ ಶಾಸ್ತ್ರವಿಂದಮುಕ್ತಂ ಮಯಾನಘ/*
*ಏತದ್ ಬುದ್ಧ್ಯಾ ಬುದ್ಧಿಮಾನ್ನ್ಸ್ಯಾತ್ಕೃತಕೃತ್ಯಶ್ಚ ಭಾರತ//೨೦//*
ಹೇ ನಿಷ್ಪಾಪನಾದ ಅರ್ಜುನಾ! ಈ ಪ್ರಕಾರವಾಗಿ ಈ ಅತಿರಹಸ್ಯಯುಕ್ತವಾದ ,ಗೋಪ್ಯವಾದ ಶಾಸ್ತ್ರವು ನನ್ನ ಮೂಲಕ ಹೇಳಲಾಯಿತು.ಇದನ್ನು ತತ್ವಶ: ತಿಳಿದು ಮನುಷ್ಯನು ಜ್ಞಾನಿಯೂ ಮತ್ತು ಕೃತಾರ್ಥನೂ ಆಗಿಬಿಡುತ್ತಾನೆ.
*ಓಂ ತತ್ಸದಿತಿ ಶ್ರೀ ಮದ್ಭಗವದ್ಗೀತಾಸೂಪನಿಷತ್ತು ಬ್ರಹ್ಮವಿದ್ಯಾಯಾಂ ಯೋಗಶಾಸ್ರ್ತೇ ಶ್ರೀ ಕೃಷ್ಣಾರ್ಜುನ ಸಂವಾದೇ ಪುರುಷೋತ್ತಮಯೋಗೋ ನಾಮ ಪಂಚದಶೋಧ್ಯಾಯ://೧೫//*
***
-ವಿಜಯಾ ಶೆಟ್ಟಿ ಸಾಲೆತ್ತೂರು (ಸಾರ ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್ ತಾಣ