ಗೀತಾಮೃತ - 60
*ಅಧ್ಯಾಯ ೧೬*
*ಚಿಂತಾಮಪರಿಮೇಯಾಂ ಚ ಪ್ರಲಯಾಂತಾಮುಪಾಶ್ರಿತಾ:/*
*ಕಾಮೋಪಭೋಗಪರಮಾ ಏತಾವದಿತಿ ನಿಶ್ಚಿತಾ://೧೧//*
ಹಾಗೂ ಅವರು ಮರಣಪರ್ಯಂತವಾಗಿ ಇರುವ ಅಸಂಖ್ಯಾತ ಚಿಂತೆಗಳ ಆಶ್ತಯ ಪಡೆದವರು, ವಿಷಯ ಭೋಗಗಳನ್ನು ಭೋಗಿಸುವುದರಲ್ಲಿ ತತ್ಪರರಾದವರು ಮತ್ತು 'ಇಷ್ಟೇ ಸುಖ' ಎಂದು ಈ ಪ್ರಕಾರವಾಗಿ ತಿಳಿದವರಾಗಿರುತ್ತಾರೆ.
*ಆಶಾಪಾಶಶತೈರ್ಬದ್ಧಾ: ಕಾಮಕ್ರೋಧಪರಾಯಣಾ:/*
*ಈಹಂತೇ ಕಾಮಭೋಗಾರ್ಥಮನ್ಯಾಯೇನಾರ್ಥಸಂಚಯಾನ್//೧೨//*
ನೂರಾರು ಆಸೆಗಳ ಪಾಶಗಳಿಂದ ಬಂಧಿತರಾದ ಆ ಪುರುಷರು ಕಾಮಕ್ರೋಧಗಳ ಪರಾಯಣರಾಗಿ, ವಿಷಯ ಭೋಗಗಳಿಗಾಗಿ,ಅನ್ಯಾಯಪೂರ್ವಕವಾಗಿ ಧನವೇ ಮುಂತಾದ ಪದಾರ್ಥಗಳನ್ನು ಸಂಗ್ರಹಿಸುವ ಪ್ರಯತ್ನವನ್ನು ಮಾಡುತ್ತಿರುತ್ತಾರೆ.
***
*ಅಢ್ಯೋಭಿಜನವಾನಸ್ಮಿ ಕೋನ್ಯೋಸ್ತಿ ಸದೃಶೋ ಮಯಾ/* *ಯಕ್ಷ್ಮೇ ದಾಸ್ಯಾಮಿ ಮೋದಿಷ್ಯ ಇತ್ಯಜ್ಞಾನವಿಮೋಹಿತಾ://೧೫//*
*ಅನೇಕ ಚಿತ್ತವಿಭ್ರಾಂತಾ ಮೋಹಜಾಲಸಮಾವೃತಾ:/*
*ಪ್ರಸಕ್ತಾ: ಕಾಮಭೋಗೇಷು ಪತಂತಿ ನರಕೇ ಶುಚೌ//೧೬//*
ನಾನು ದೊಡ್ಡ ಶ್ರೀಮಂತ, ದೊಡ್ಡ ಕುಟುಂಬವುಳ್ಳವನಾಗಿದ್ದೇನೆ,ನನ್ನ ಸಮಾನವಾಗಿ ಬೇರೆಯವರು ಯಾರಿದ್ದಾರೆ? ನಾನು ಯಜ್ಞವನ್ನು ಮಾಡುವೆನು; ದಾನವನ್ನು ಕೊಡುವೆನು ಮತ್ತು ಆಮೋದ _ ಪ್ರಮೋದ ಮಾಡುವೆನು. ಈ ಪ್ರಕಾರವಾಗಿ ಅಜ್ಞಾನದಿಂದ ಮೋಹಿತರಾಗಿರುವ ಹಾಗೂ ಅನೇಕ ಪ್ರಕಾರದಿಂದ ಭ್ರಮಿತ ಚಿತ್ತವುಳ್ಳವರು,ಮೋಹರೂಪೀ ಜಾಲದಲ್ಲಿ ಸಿಕ್ಕಿಹಾಕಿಕೊಂಡು ಮತ್ತು ವಿಷಯ ಭೋಗಗಳಲ್ಲಿ ಅತ್ಯಂತ ಆಸಕ್ತರಾದ ಅಸುರರು,ಮಹಾನ್ ಅಪವಿತ್ರ ನರಕದಲ್ಲಿ ಬೀಳುತ್ತಾರೆ.
***
*ಆತ್ಮಸಂಭಾವಿತಾ: ಸ್ತಬ್ದಾ ಧನಮಾನಮದಾನ್ವಿತಾ:/*
*ಯಜಂತೇ ನಾಮಯಜ್ಞೈಸ್ತೇ ದಂಭೇನಾವಿಧಿಪೂರ್ವಕಮ್//೧೭//*
ತಾವು _ ತಮ್ಮನ್ನೇ ಶ್ರೇಷ್ಠ ರೆಂದು ತಿಳಿದ ಆ ಅಹಂಕಾರೀ ಪುರುಷರು ಧನ ಮತ್ತು ಮಾನದ ಮದದಿಂದ ಕೂಡಿದವರಾಗಿ ಕೇವಲ ಹೆಸರಿಗೆ ಮಾತ್ರ ಯಜ್ಞಗಳ ಮೂಲಕ ಪಾಖಂಡತೆಯಿಂದ ಶಾಸ್ತ್ರವಿಧಿರಹಿತವಾದ ಯಜ್ಞವನ್ನು ಮಾಡುತ್ತಾರೆ.
*ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಚ ಸಂಶ್ರಿತಾ:/*
*ಮಾಮಾತ್ಮಪರದೇಹೇಷು ಪ್ರದ್ವಿಪಂತೋಭ್ಯಸೂಯಕಾ://೧೮//*
ಅವರು ಅಹಂಕಾರ,ಬಲ,ದರ್ಪಕಾಮನೆ ಮತ್ತು ಮೊದಲಾದವುಗಳ ಪರಾಯಣರಾಗಿರುತ್ತಾರೆ.ಇಷ್ಟೇ ಅಲ್ಲ ಇನ್ನೂ ಅನಾಚಾರದಲ್ಲಿ ನಿರತರಾಗಿದ್ದು ಮತ್ತು ಇತರರನ್ನು ನಿಂದಿಸುತ್ತ ತಮ್ಮ ಮತ್ತು ಇತರರ ಶರೀರದಲ್ಲಿ ಸ್ಥಿತನಾಗಿರುವ ಅಂತರ್ಯಾಮಿಯಾಗಿರುವ ನನ್ನೊಡನೆ ದ್ವೇಷ ಮಾಡುತ್ತಾರೆ.
***
*ತಾನಹಂ ದ್ವಿಷತ: ಕ್ರೂರಾನ್ಸಂಸಾರೇಷು ನರಾಧಮಾನ್/*
*ಕ್ಷಿಪಾಮ್ಯಜಸ್ರಮಶುಭಾನಾಸುರೀಷ್ವೇವ ಯೋನಿಷು//೧೯//*
ಈ ದ್ವೇಷಮಾಡುವ ಪಾಪಾಚಾರಿಗಳೂ ಮತ್ತು ಕ್ರೂರ ಕರ್ಮಿಗಳೂ ಆದ ನರಾಧಮರನ್ನು ನಾನು ಪ್ರಪಂಚದಲ್ಲಿ ಪದೇಪದೇ ಅಸುರೀ ಯೋನಿಗಳಲ್ಲಿಯೇ ಹಾಕುತ್ತೇನೆ.
*ಅಸುರೀಂ ಯೋನಿಮಾಪನ್ನಾ ಮೂಢಾ ಜನ್ಮನಿ ಜನ್ಮನಿ/*
*ಮಾಮಪ್ರಾಪ್ಯೈವ ಕೌಂತೇಯ ತತೋ ಯಾಂತ್ಯಧಮಾಂ ಗತಿಮ್//೨೦//*
ಹೇ ಅರ್ಜುನಾ! ಆ ಮೂಢರು ನನ್ನನ್ನು ಪಡೆಯದೆ ಜನ್ಮಜನ್ಮಗಳಲ್ಲಿ ಅಸುರೀ ಯೋನಿಯನ್ನು ಪಡೆಯುತ್ತಾರೆ.ಅನಂತರ ಅದಕ್ಕಿಂತಲೂ ಕೂಡ ಅತಿ ನೀಚ ಗತಿಯನ್ನೇ ಪಡೆಯುತ್ತಾರೆ ಅಂದರೆ ಘೋರವಾದ ನರಕದಲ್ಲಿ ಬೀಳುತ್ತಾರೆ.
***
-ವಿಜಯಾ ಶೆಟ್ಟಿ ಸಾಲೆತ್ತೂರು (ಸಾರ ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್ ತಾಣ