ಗೀತಾಮೃತ - 61

ಗೀತಾಮೃತ - 61

*ಅಧ್ಯಾಯ ೧೬*

        *ತ್ರಿವಿಧಂ ನರಕಸ್ಯೇದಂ ದ್ವಾರಂ  ನಾಶನಮಾತ್ಮನ:/*

*ಕಾಮ: ಕ್ರೋಧಸ್ತಥಾ ಲೋಭಸ್ತಸ್ಮಾದೇತತ್ತ್ರಯಂ  ತ್ಯಜೇತ್//೨೧//*

ಕಾಮ,ಕ್ರೋಧ ಹಾಗೂ ಲೋಭ ಇವು ಮೂರು ಪ್ರಕಾರವಾದ ನರಕದ ದ್ವಾರಗಳು.ಆತ್ಮನನ್ನು ನಾಶಮಾಡುವ ಅರ್ಥಾತ್ ಅವನನ್ನು ಅಧೋಗತಿಗೆ ಕೊಂಡೊಯ್ಯುವಂತಹವುಗಳಾಗಿವೆ.ಆದುದರಿಂದ ಈ ಮೂವರನ್ನೂ ತ್ಯಜಿಸಿಬಿಡಬೇಕು.

*ಏತೈರ್ವಿಮುಕ್ತ: ಕೌಂತೇಯ ತಮೋದ್ವಾರೈಸ್ತ್ರಿಭಿರ್ನರ:/*

*ಆಚರತ್ಯಾತ್ಮನ: ಶ್ರೇಯಸ್ತತೋ ಯಾತಿ ಪರಾಂ ಗತಿಮ್//೨೨//*

ಹೇ ಅರ್ಜುನಾ! ಈ ಮೂರೂ ನರಕದ ದ್ವಾರಗಳಿಂದ ಮುಕ್ತನಾದ ಪುರುಷನು ತನ್ನ ಶ್ರೇಯಸ್ಸಿಗಾಗಿ ಆಚರಣೆಯನ್ನು ಮಾಡುತ್ತಾನೆ,ಅದರಿಂದ ಅವನು ಪರಮ ಗತಿಗೆ ಹೋಗುತ್ತಾನೆ ಅರ್ಥಾತ್ ನನ್ನನ್ನು ಪಡೆಯುತ್ತಾನೆ.

***

 *ಯ: ಶಾಸ್ತ್ರವಿಧಿಮುತ್ಸೃಜ್ಯ ವರ್ತತೇ ಕಾಮಕಾರತ:/*

*ನ ಸ ಸಿದ್ಧಿಮವಾಪ್ನೋತಿ ನ ಸುಖಂ ನ ಪರಾಂ ಗತಿಮ್//೨೩//*

ಯಾವ ಪುರುಷನು ಶಾಸ್ತ್ರವಿಧಿಯನ್ನು ತ್ಯಜಿಸಿ ತನ್ನ ಇಚ್ಛೆಯಿಂದ ಮನಬಂದಂತೆ ಆಚರಣೆ ಮಾಡುತ್ತಾನೋ ಅವನು ಸಿದ್ಧಿಯನ್ನು ಪಡೆಯುವುದಿಲ್ಲ, ಪರಮಗತಿಯನ್ನೂ ಪಡೆಯುವುದಿಲ್ಲ ಮತ್ತು ಸುಖವನ್ನೂ ಹೊಂದುವುದಿಲ್ಲ.

*ತಸ್ಮಾಚ್ಛಾಸ್ತ್ರಂ ಪ್ರಮಾಣಂ ತೇ ಕಾರ್ಯಾಕಾರ್ಯಾವ್ಯವಸ್ಥಿತೌ/*

*ಜ್ಞಾತ್ವಾಶಾಸ್ತ್ರವಿಧಾನೋಕ್ತಂ ಕರ್ಮ ಕರ್ತುಮಿಹಾರ್ಹಸಿ//೨೪//*

ಆದ್ದರಿಂದ ನಿನಗಾಗಿ ಈ ಕರ್ತವ್ಯ ಮತ್ತು ಅಕರ್ತವ್ಯದ ವ್ಯವಸ್ಥೆ ಯಲ್ಲಿ ಶಾಸ್ತ್ರವೇ ಪ್ರಮಾಣವಾಗಿದೆ ಎಂದು ತಿಳಿದುಕೊಂಡು ನೀನು ಶಾಸ್ತ್ರವಿಧಿಯಿಂದ ನಿಯತ ಕರ್ಮವನ್ನೇ ಮಾಡಲು ಯೋಗ್ಯನಾಗಿರುವೆ.

        *ಓಂ ತತ್ಸದಿತಿ ಶ್ರೀ ಮದ್ಭಗವದ್ಗೀತಾಸೂಪನಿಷತ್ತು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀ ಕೃಷ್ಣಾರ್ಜುನಸಂವಾದೇ ದೈವಾಸುರಸಂಪದ್ವಿಭಾಗಯೋಗೋ ನಾಮ ಷೋಡಶೋಧ್ಯಾಯ://೧೬//*

***

  *//ಅಥ ಸಪ್ತದಶೋಧ್ಯಾಯ://*ಶ್ರದ್ಧಾತ್ರಯವಿಭಾಗಯೋಗವು* 

     *ಅರ್ಜುನ ಉವಾಚ*

*ಯೇ ಶಾಸ್ರ್ತವಿಧಿಮುತ್ಸೃಜ್ಯ ಯಜಂತೇ ಶ್ರದ್ದಯಾನ್ವಿತಾ:/*

*ತೇಷಾಂ ನಿಷ್ಠಾತು ಕಾ ಕೃಷ್ಣ ಸತ್ವಮಾಹೋ ರಜಸ್ತಮ://೧//*

   ಅರ್ಜುನನು ಹೇಳಿದನು _ ಹೇ ಶ್ರೀ ಕೃಷ್ಣ! ಯಾವ ಮನುಷ್ಯರು ಶಾಸ್ತ್ರ ವಿಧಿಯನ್ನು ತ್ಯಾಗಮಾಡಿ ಶ್ರದ್ಧೆಯಿಂದ ಯುಕ್ತರಾಗಿ ದೇವತೆಗಳ ಪೂಜೆಯನ್ನು ಮಾಡುತ್ತಾರೆಯೋ ಅವರುಗಳ ಸ್ಥಿತಿಯು ಎಂತಹುದು? ಸಾತ್ವಿಕವೋ,ರಾಜಸವೋ ಅಥವಾ ತಾಮಸವೋ?

*ಶ್ರೀ ಭಗವಾನುವಾಚ*

   *ತ್ರಿವಿಧಾ ಭವತಿ ಶ್ರದ್ದಾ ದೇಹಿನಾಂ ಸಾ ಸ್ವಭಾವಜಾ/*

*ಸಾತ್ಬಿಕೀ ರಾಜಸೀ ಚೈವ ತಾಮಸೀ ಚೇತಿ ತಾಂ ಶೃಣು//೨//*

  ಶ್ರೀ ಭಗವಂತನು ಹೇಳಿದನು _ ಮನುಷ್ಯರ ಶಾಸ್ತ್ರೀಯ ಸಂಸ್ಕಾರಗಳಿಂದ ರಹಿತವಾದ ಕೇವಲ ಸ್ವಭಾವ ದಿಂದ ಉತ್ಪನ್ನವಾದ ಆ ಶ್ರದ್ದೆಯು ಸಾತ್ವಿಕ,ರಾಜಸ ಹಾಗೂ ತಾಮಸ ಹೀಗೆ ಮೂರು ಪ್ರಕಾರದ್ದಾಗಿಯೇ ಇರುತ್ತದೆ.ಅದನ್ನು ನೀನು ನನ್ನಿಂದ ಕೇಳು.

***

-ವಿಜಯಾ ಶೆಟ್ಟಿ ಸಾಲೆತ್ತೂರು (ಸಾರ ಸಂಗ್ರಹ)

ಚಿತ್ರ ಕೃಪೆ: ಇಂಟರ್ನೆಟ್ ತಾಣ