ಗೀತಾಮೃತ - 63
*ಅಧ್ಯಾಯ ೧೭*
*ಅನುದ್ವೇಗಕರಂ ವಾಕ್ಯಂ ಸತ್ಯಂ ಪ್ರಿಯಹಿತಂ ಚ ಯತ್ /*
*ಸ್ವಾಧ್ಯಾಯಾಭ್ಯಸನಂ ಚೈವ ವಾಙ್ಮಯಂ ತಪ ಉಚ್ಯತೇ//೧೫//* ಯಾವುದು ಉದ್ವೇಗಗೊಳಿಸುವುದಿಲ್ಲವೋ,ಪ್ರಿಯವಾಗಿಯೂ,ಹಿತಕರವಾಗಿಯೂ ಮತ್ತು ಯಥಾರ್ಥವಾದ ಭಾಷಣವಾಗದೆಯೂ ಹಾಗೂ ಯಾವುದು ವೇದಶಾಸ್ತ್ರಗಳ ಪಠಣದ ,ಹಾಗೂ ಪರಮೇಶ್ವರನ ನಾಮ _ ಜಪದ ಅಭ್ಯಾಸವಿದೆಯೋ ಅದನ್ನೇ ವಾಣೀ ಸಂಬಂಧವಾದ ತಪಸ್ಸೆಂದು ಹೇಳಲಾಗುತ್ತದೆ.
*ಮನ:ಪ್ರಸಾದ: ಸೌಮ್ಯತ್ವಂ ಮೌನಮಾತ್ಮವಿನಿಗ್ರಹ:/*
*ಭಾವಸಂಶುದ್ಧಿರಿತ್ಯೇತತ್ತಪೋ ಮಾನಸಮುಚ್ಯತೇ//೧೬//* ಮನಸ್ಸಿನ ಪ್ರಸನ್ನತೆ,ಶಾಂತ ಭಾವ,ಭಗವಂತನ ಚಿಂತನೆ ಮಾಡುವ ಸ್ವಭಾವ,ಮನದ ನಿಗ್ರಹ ಮತ್ತು ಅಂತ:ಕರಣದ ಭಾವಗಳ ಪವಿತ್ರತೆ _ ಈ ಪ್ರಕಾರ ಇದು ಮನಸ್ಸಿಗೆ ಸಂಬಂಧಪಟ್ಟ ತಪವೆಂದು ಹೇಳಲಾಗುತ್ತದೆ.
***
*ಶ್ರದ್ಧಯಾ ಪರಯಾ ತಪ್ತಂ ತಪಸ್ತತ್ರ್ರಿವಿಧಂ ನರೈ/*
*ಅಫಲಾಕಾಂಕ್ಷಿಭಿರ್ಯಕ್ತೈ: ಸಾತ್ವ್ತಿಕಂ ಪರಿಚಕ್ಷತೇ//೧೭//*
ಫಲವನ್ನು ಇಚ್ಛಿಸದಿರುವ ಯೋಗೀ ಪುರುಷರ ಮೂಲಕ, ಪರಮ ಶ್ರದ್ಧೆಯಿಂದ ಮಾಡಲ್ಪಟ್ಟ ಈ ಹಿಂದೆ ಹೇಳಿದ ಮೂರೂ ಪ್ರಕಾರದ (ಕಾಯಿಕ,ವಾಚಿಕ,ಮಾನಸಿಕ)ತಪವನ್ನು ಸಾತ್ವಿಕವೆಂದು ಹೇಳುತ್ತಾರೆ.
*ಸತ್ಕಾರಮಾನಪೂಜಾರ್ಥಂ ತಪೋ ದಂಭೇನ ಚೈವ ಯತ್/*
*ಕ್ರಿಯತೇ ತದಿಹ ಪ್ರೋಕ್ತಂ ರಾಜಸಂ ಚಲಮಧ್ರುವಮ್//೧೮//* ಯಾವ ತಪವು ಸತ್ಕಾರ,ಮಾನ ಮತ್ತು ಪೂಜೆಗೋಸ್ಕರ ಹಾಗೂ ಬೇರೆ ಯಾವುದಾದರೂ ಸ್ವಾರ್ಥಕ್ಕಾಗಿ,ಸ್ವಭಾವದಿಂದಾಗಿ ಅಥವಾ ದಂಭದಿಂದ ಮಾಡಲಾಗುತ್ತದೆಯೋ ಆ ಅನಿಶ್ಚಿತ ಹಾಗೂ ಕ್ಷಣಿಕವಾದ ಫಲವುಳ್ಳ ತಪವನ್ನು ಇಲ್ಲಿ ರಾಜಸವೆಂದು ಹೇಳಲಾಗಿದೆ.
***
*ಮೂಗ್ರಾಹೇಣಾತ್ಮನೋ ಯತ್ಪೀಡಯಾ ಕ್ರಿಯತೇ ತಪ:/*
*ಪರಸ್ಯೋತ್ಸಾದನಾರ್ಥಂ ವಾ ತತ್ತಾಮಸಮುದಾಹೃತಮ್//೧೯//*
ಯಾವ ತಪವು ಮೂಢತೆಯಿಂದೊಡಗೊಂಡ,ಹಠದಿಂದ,ಮನಸ್ಸು,ವಾಣಿ ಮತ್ತು ಶರೀರದ ಪೀಡೆಯ ಸಹಿತವಾಗಿ ಅಥವಾ ಬೇರೊಬ್ಬರಿಗೆ ಅನಿಷ್ಟ ಮಾಡುವುದಕ್ಕೆ ಮಾಡಲಾಗುತ್ತದೆಯೋ ಆ ತಪವು ತಾಮಸವೆಂದು ಹೇಳಲಾಗಿದೆ.
*ದಾತವ್ಯಮಿತಿ ಯದ್ದಾನಂ ದೀಯತೇನುಪಕಾರಿಣೇ/*
*ದೇಶೇ ಕಾಲೇ ಚ ಪಾತ್ರೇ ಚ ತದ್ದಾನಂ ಸಾತ್ವಕಂ ಸ್ಮೃತಮ್//೨೦//*
ದಾನಕೊಡುವುದೇ ತನ್ನ ಕರ್ತವ್ಯವಾಗಿದೆ ಎಂದು ತಿಳಿದುಕೊಂಡು ಯಾವ ದಾನವು ದೇಶ,ಕಾಲ ಮತ್ತು ಪಾತ್ರನು ಪ್ರಾಪ್ತವಾದಾಗ ಪ್ರತ್ಯುಪಕಾರವನ್ನು ಬಯಸದೆ ನಿಷ್ಕಾಮ ಭಾವದಿಂದ ಕೊಡಲಾಗುವುದೋ ಆ ದಾನವನ್ನು ಸಾತ್ವಿಕವೆಂದು ಹೇಳಲಾಗಿದೆ.
***
*ಯತ್ತು ಪ್ರತ್ಯುಪಕಾರಾರ್ಥಂ ಫಲಮುದ್ದಿಶ್ಯ ವಾ ಪುನ: /*
*ದೀಯತೇ ಚ ಪರಿಕ್ಲಿಷ್ಟಂ ತದ್ದಾನಂ ರಾಜಸಂ ಸ್ರೃತಮ್//೨೧//*
ಆದರೆ ಯಾವ ದಾನವು ಕ್ಲೇಷಪೂರ್ವಕವಾಗಿ ಹಾಗೂ ಪ್ರತ್ಯುಪಕಾರದ ಪ್ರಯೋಜನದಿಂದ ಅಥವಾ ಫಲವನ್ನು ದೃಷ್ಟಿ ಯಲ್ಲಿಟ್ಟುಕೊಂಡು ಕೊಡಲಾಗುತ್ತದೆಯೋ ,ಆ ದಾನವು ರಾಜಸವೆಂದು ಹೇಳಲಾಗಿದೆ.
*ಆದೇಶಕಾಲೇ ಯುದ್ದಾನಮಪಾತ್ರೇಭ್ಯಶ್ಚ ದೀಯತೇ/*
*ಅಸತ್ಕೃತಮವಜ್ಞಾತಂ ತತ್ತಾಮಸಮುದಾಹೃತಮ್//೨೨//*
ಯಾವ ದಾನವು ಸತ್ಕಾರವಿಲ್ಲದೆ ಅಥವಾ ತಿರಸ್ಕಾರ ಪೂರ್ವಕವಾಗಿ ,ಅಯೋಗ್ಯ ದೇಶ _ ಕಾಲದಲ್ಲಿ ಮತ್ತು ಕುಪಾತ್ರನಿಗೆ ಕೊಡಲಾಗುತ್ತದೆಯೋ ಆ ದಾನವು ತಾಮಸವೆಂದು ಹೇಳಲಾಗಿದೆ.
***
-ವಿಜಯಾ ಶೆಟ್ಟಿ ಸಾಲೆತ್ತೂರು, (ಸಾರ ಸಂಗ್ರಹ)
ಚಿತ್ರ: ಇಂಟರ್ನೆಟ್ ತಾಣ