ಗೀತಾಮೃತ - 65

ಗೀತಾಮೃತ - 65

*ಅಧ್ಯಾಯ ೧೮*

      *//ಅಥ ಅಷ್ಟಾದಶೋಧ್ಯಾಯ://*

    *ಮೋಕ್ಷಸಂನ್ಯಾಸಯೋಗವು*

*ಅರ್ಜುನ ಉವಾಚ*

        *ಸಂನ್ಯಾಸಸ್ಯ ಮಹಾಬಾಹೋ ತತ್ವ್ತಮಿಚ್ಛಾಮಿ ವೇದಿತುಮ್/*

*ತ್ಯಾಗಸ್ಯ ಚ ಹೃಷೀಕೇಶ ಪೃಥಕ್ಕೇಶಿನಿಷೂದನ//೧//*

ಅರ್ಜುನನು ಹೇಳಿದನು _ ಹೇ ಮಹಾಬಾಹುವೇ ! ಹೇ ಅಂತರ್ಯಾಮಿಯೇ ! ಹೇ ವಾಸುದೇವನೇ! ನಾನು ಸಂನ್ಯಾಸ ಮತ್ತು ತ್ಯಾಗದ ತತ್ವವನ್ನು ಬೇರೆ ಬೇರೆಯಾಗಿ ತಿಳಿಯಲು ಬಯಸುತ್ತೇನೆ.

*ಶ್ರೀ ಭಗವಾನುವಾಚ*

*ಕಾಮ್ಯಾನಾಂ ಕರ್ಮಣಾಂ ನ್ಯಾಸಂ ಸಂನ್ಯಾಸಂ ಕವಯೋ ವಿದು:/*  *ಸರ್ವಕರ್ಮಫಲತ್ಯಾಗಂ ಪ್ರಾಹುಸ್ತ್ಯಾಗಂ ವಿಚಕ್ಷಣಾ://೨//*

ಶ್ರೀ ಭಗವಂತನು ಹೇಳಿದನು _ ಎಷ್ಟೋ ಪಂಡಿತಜನರು ಕಾಮ್ಯಕರ್ಮಗಳ ತ್ಯಾಗವನ್ನು ಸಂನ್ಯಾಸವೆಂದು ತಿಳಿಯುತ್ತಾರೆ ಹಾಗೂ ಇತರ ವಿಚಾರಶೀಲರಾದ ಪುರುಷರು ಎಲ್ಲಾ ಕರ್ಮಗಳ ಫಲತ್ಯಾಗವನ್ನು ತ್ಯಾಗವೆಂದು ಹೇಳುತ್ತಾರೆ.

***

 *ತ್ಯಾಜ್ಯಂ ದೋಷವದಿತ್ಯೇಕೇ ಕರ್ಮ ಪ್ರಾಹುರ್ಮನೀಷಿಣ:/*

*ಯಜ್ಞದಾನತಪ:ಕರ್ಮ  ನ ತ್ಯಾಜ್ಯಮಿತಿ ಚಾಪರೇ//೩//*

       ಕೆಲ ವಿದ್ವಾಂಸರು _ ಎಲ್ಲಾ ಕರ್ಮಗಳು ದೋಷಯುಕ್ತವಾಗಿವೆ ಆದ್ದರಿಂದ ತ್ಯಜಿಸಲು ಯೋಗ್ಯವಾಗಿವೆ ಎಂದು ಹೇಳುತ್ತಾರೆ, ಮತ್ತು ಇತರ ವಿದ್ವಾಂಸರು _ ಯಜ್ಞ ದಾನ ಮತ್ತು ತಪರೂಪವಾದ ಕರ್ಮಗಳು ತ್ಯಜಿಸಲು ಯೋಗ್ಯವಾಗಿಲ್ಲ ಎಂದು ಹೇಳುತ್ತಾರೆ.

    *ನಿಶ್ಚಯಂ ಶೃಣು ಮೇ ತತ್ರ ತ್ಯಾಗೇ ಭರತಸತ್ತಮ/*

*ತ್ಯಾಗೋ ಹಿ ಪುರುಷವ್ಯಾಘ್ರ ತ್ರಿವಿಧ: ಸಂಪ್ರಕೀರ್ತಿತ://೪//*

    ಹೇ ಪುರುಷ ಶ್ರೇಷ್ಟನಾದ  ಅರ್ಜುನಾ! ಸಂನ್ಯಾಸ ಮತ್ತು ತ್ಯಾಗ _ ಈ ಎರಡರಲ್ಲಿ ಮೊದಲು ತ್ಯಾಗದ ವಿಷಯದಲ್ಲಿ ನೀನು ನನ್ನ ನಿಶ್ಚಯವನ್ನು ಕೇಳು; ಏಕೆಂದರೆ ತ್ಯಾಗವು ಸಾತ್ವಿಕ,ರಾಜಸ ಮತ್ತು ತಾಮಸ ಎಂಬ ಭೇದದಿಂದ ಮೂರು ಪ್ರಕಾರದ್ದೆಂದು ಹೇಳಲಾಗಿದೆ.

***

 *ನಿಯತಸ್ಯ ತು ಸಂನ್ಯಾಸ: ಕರ್ಮಣೋ ನೋಪಪದ್ಯತೇ/*

*ಮೋಹಾತ್ತಸ್ಯ ಪರಿತ್ಯಾಗಸ್ತಾಮಸ: ಪರಿಕೀರ್ತಿತ://೭//*

(ನಿಷಿದ್ಧ ಮತ್ತು ಕಾಮ್ಯ ಕರ್ಮಗಳನ್ನಾದರೋ ಸ್ವರೂಪದಿಂದ ತ್ಯಾಗ ಮಾಡುವುದು ಉಚಿತವೇ ಆಗಿದೆ) ಆದರೆ ನಿಯತ ಕರ್ಮವನ್ನು ಸ್ವರೂಪದಿಂದ ತ್ಯಜಿಸುವುದು ಉಚಿತವಾದುದಲ್ಲ.ಅದಕ್ಕಾಗಿ ಮೋಹದ ಕಾರಣ ಅದನ್ನು ತ್ಯಾಗಮಾಡಿ ಬಿಡುವುದು ತಾಮಸ ತ್ಯಾಗವೆಂದು ಹೇಳಲಾಗಿದೆ.

*ದು:ಖಮಿತ್ಯೇವ ಯತ್ಕರ್ಮ ಕಾಯಕ್ಲೇಶಭಯಾತ್ತ್ಯಜೇತ್/*

*ಸ ಕೃತ್ತ್ವಾ ರಾಜಸಂ ತ್ಯಾಗಂ ನೈವ ತ್ಯಾಗಫಲಂ ಲಭೇತ್//೮//*

ಯಾವುದೆಲ್ಲ ಕರ್ಮವಿವೆಯೋ ಅವೆಲ್ಲವೂ ದು:ಖ ರೂಪವೇ ಆಗಿವೆ _ ಎಂದು ತಿಳಿದುಕೊಂಡು,ಒಂದು ವೇಳೆ ಯಾವುದಾದರೂ ಶಾರೀರಿಕ ಕ್ಲೇಶದ ಭಯದಿಂದ ಕರ್ತವ್ಯ ಕರ್ಮಗಳನ್ನು ತ್ಯಾಗ ಮಾಡಿದ್ದೇ ಆದರೆ,ಅವನು ಇಂತಹ ರಾಜಸವಾದ  ತ್ಯಾಗವನ್ನು ಮಾಡಿ, ತ್ಯಾಗದ ಫಲವನ್ನು ಯಾವ ಪ್ರಕಾರದಿಂದ ಲೂ ಪಡೆಯುವುದಿಲ್ಲ.

-ವಿಜಯಾ ಶೆಟ್ಟಿ ಸಾಲೆತ್ತೂರು (ಸಾರ ಸಂಗ್ರಹ)

ಚಿತ್ರ ಕೃಪೆ: ಇಂಟರ್ನೆಟ್ ಕೃಪೆ