ಗೀತಾಮೃತ - 70
*ಅಧ್ಯಾಯ ೧೮*
*ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಪರಿಗ್ರಹಮ್/*
*ವಿಮುಚ್ಯ ನಿರ್ಮಮ: ಶಾಂತೋ ಬ್ರಹ್ಮಭೂತಾಯ ಕಲ್ಪತೇ//೫೩//*
ಅಹಂಕಾರ,ಬಲ,ದರ್ಪ,ಕಾಮ,ಕ್ರೋಧ ಮತ್ತು ಪರಿಗ್ರಹವನ್ನು ತ್ಯಾಗಮಾಡಿ,ನಿರಂತರ ಧ್ಯಾನಯೋಗ ಪರಾಯಣನಾಗಿರುವ ಮಮತಾರಹಿತ ಶಾಂತಿಯುಕ್ತ ಪುರುಷನು,ಸಚ್ಚಿದಾನಂದಘನ ಬ್ರಹ್ಮನಲ್ಲಿ ಅಭಿನ್ನಭಾವದಿಂದ ಸ್ಥಿತನಾಗಿರಲು ಪಾತ್ರನಾಗುತ್ತಾನೆ.
*ಬ್ರಹ್ಮಭೂತ: ಪ್ರಸನ್ನಾತ್ಮಾ ನ ಶೋಚತಿ ನೆ ಕಾಂಕ್ಷತಿ/*
*ಸಮ: ಸರ್ವೇಷು ಭೂತೇಷು ಮದ್ಭಕ್ತಿಂ ಲಭತೇ ಪರಾಮ್//೫೪//* ಮತ್ತೆ ಆ ಸಚ್ಚಿದಾನಂದ ಘನ ಬ್ರಹ್ಮನಲ್ಲಿ ಸ್ಥಿತನಾದ,ಪ್ರಸನ್ನ ಮನಸ್ಸುಳ್ಳ ಯೋಗಯು ಯಾರಿಗಾಗಿಯೂ ಶೋಕಕಿಸುದಿಲ್ಲ ಮತ್ತು ಯಾವುದನ್ನೂ ಬಯಸುವುದಿಲ್ಲ.ಇಂತಹ ಸಮಸ್ತ ಪ್ರಾಣಿಗಳಲ್ಲಿ ಸಮಭಾವವುಳ್ಳ ಯೋಗಿಯು ನನ್ನ ಪರಾಭಕ್ತಿಯನ್ನು ಪಡೆಯುತ್ತಾನೆ.
***
*ಭಕ್ತ್ಯಾ ಮಾಮಭಿಜಾನಾತಿ ಯಾವಾನ್ಯಶ್ಚಾಸ್ಮಿ ತತ್ತ್ವತ:/*
*ತತೋ ಮಾಂ ತತ್ತ್ವತೋ ಜ್ಞಾತ್ವಾವಶತೇ ತದನಂತರಮ್//೫೫//*
ಆ ಪರಾಭಕ್ತಿಯ ಮೂಲಕ ಅವನು ಪರಮಾತ್ಮನಾದ ನನ್ನನ್ನು ನಾನು ಯಾರಾಗಿದ್ದೇನೋ ಮತ್ತು ಯಾವ ಪ್ರಭಾವದಿಂದ ಯುಕ್ತನಾದ್ದೇನೋ,ಸರಿಯಾಗಿ ಹೇಗಿರುವೆನೋ ಹಾಗಿ ತತ್ತ್ವದಿಂದ ತಿಳಿಯುತ್ತಾನೆ; ಹಾಗೂ ಆ ಭಕ್ತಿಯಿಂದ ನನ್ನನ್ನು ತತ್ತ್ವದಿಂದ ತಿಳಿದುಕೊಂಡು ತತಗಕಾಲದಲ್ಲಿಯೇ ನನ್ನಲ್ಲಿ ಪ್ರವೇಶ ಮಾಡಿಬಿಡುತ್ತಾನೆ.
*ಸರ್ವಕರ್ಮಾಣ್ಯಪಿ ಸದಾ ಕುರ್ವಾಣೋ ಮದ್ವ್ಯಪಾಶ್ಯಯ:/*
*ಮತ್ಪ್ರಸಾದಾದವಾಪ್ನೋತಿ ಶಾಶ್ವತಂ ಪದಮವ್ಯಮ್//೫೬//*
ನನ್ನ ಪರಾಯಣನಾದ ಕರ್ಮಯೋಗಿಯು ಸಂಪೂರ್ಣ ಕರ್ಮಗಳನ್ನು ಯಾವಾಗಲೂ ಮಾಡುತ್ತಿದ್ದರೂ ಕೂಡ ನನ್ನ ಕೃಪೆಯಿಂದ ಸನಾತನ,ಅವಿನಾಶಿಯಾದ ಪರಮಪದವನ್ನು ಪಡೆಯುತ್ತಾನೆ.
***
*ಚೇತಸಾ ಸರ್ವಕರ್ಮಾಣಿ ಮಯಿ ಸಂನ್ಯಸ್ಯ ಮತ್ಪರ:/*
*ಬುದ್ಧಿಯೋಗಮುಪಾಶ್ರಿತ್ಯ ಮಚ್ಚತ್ತ: ಸತತಂ ಭವ//೫೭//*
ಎಲ್ಲ ಕರ್ಮಗಳನ್ನು ಮನ:ಪೂರ್ವಕ ನನ್ನಲ್ಲಿ ಅರ್ಪಣೆಮಾಡಿ ಹಾಗೂ,ಸಮತ್ವಬುದ್ಧಿರೂಪವಾದ ಯೋಗವನ್ನು ಅವಲಂಬಿಸಿಕೊಂಡು ನನ್ನ ಪರಾಯಣನಾಗಿ ಮತ್ತು ನಿರಂತರ ನನ್ನಲ್ಲಿ ಚಿತ್ತವುಳ್ಳವನಾಗು.
*ಮಚ್ಚಿತ್ತ: ಸರ್ವದುರ್ಗಾಣಿ ಮತ್ರ್ಪಸಾದಾತ್ತರಿಷ್ಯಸಿ/*
*ಅಥಚೇತ್ವ್ತ ಮಹಂಕಾರಾನ್ನ ಶ್ರೋಷ್ಯಸಿ ವಿನಂಕ್ಷ್ಯಸಿ//೫೮//*
ಮೇಲೆ ಹೇಳಿದ ಪ್ರಕಾರದಿಂದ ನನ್ನಲ್ಲಿ ಚಿತ್ತವನ್ನುಳ್ಳವನಾಗಿ ನೀನು ನನ್ನ ಕೃಪೆಯಿಂದ ಸಮಸ್ತ ಸಂಕಟಗಳನ್ನು ಅನಾಯಾಸವಾಗಿಯೇ ದಾಟಿಬಿಡುವೆ ಮತ್ತು ಒಂದು ವೇಳೆ ಅಹಂಕಾರದ ಕಾರಣದಿಂದ ನನ್ನ ವಚನಗಳನ್ನು ಕೇಳದಿದ್ದರೆ ನಾಶವಾಗುವ ಅರ್ಥಾತ್ ಪರಮಾರ್ಥದಿಂದ ಭ್ರಷ್ಟನಾಗಿ ಹೋಗುವೆ.
***
*ಯದಹಂಕಾರಮಾಶ್ರಿತ್ಯ ನ ಯೋತ್ಸ್ನ ಇತಿ ಮನ್ಯಸೇ/*
*ಮಿಥ್ಯೈಷ ವ್ಯವಸಾಯಸ್ತೇ ಪ್ರಕೃತಿ ಸ್ತ್ವಾಂ ನಿಯೋಕ್ಷ್ಯತಿ//೫೯//* ನೀನು ಯಾವ ಅಹಂಕಾರದ ಆಶ್ರಯ ಪಡೆದು ' ನಾನು ಯುದ್ಧ ಮಾಡುವುದಿಲ್ಲ' ಎಂಬುದಾಗಿ ನಿಶ್ಚಯ ಮಾಡಿರುವೆಯೋ, ನಿನ್ನ ಈ ನಿಶ್ಚಯವು ಮಿಥ್ಯೆಯಾಗಿದೆ; ಏಕೆಂದರೆ ನಿನ್ನ ಸ್ವಭಾವವು ನಿನ್ನನ್ನು ಬಲವಂತವಾಗಿ ಯುದ್ಧದಲ್ಲಿ ತೊಡಗಿಸುವುದು.
*ಸ್ವಭಾವಜೇನ ಕೌಂತೇಯ ನಿಬದ್ಧ: ಸ್ವೇನ ಕರ್ಮಣಾ:/* *ಕರ್ತುಂ ನೇಚ್ಛಸಿ ಯನ್ಮೋಹಾತ್ಕರಿಷ್ಯಸ್ಯವಶೋಪಿ ತತ್//* ಹೇ ಕುಂತೀಪುತ್ರನೇ! ಯಾವ ಕರ್ಮವನ್ನು ನೀನು ಮೋಹದ ಕಾರಣದಿಂದಾಗಿ ಮಾಡಲು ಇಚ್ಛಿಸುವುದಿಲ್ಲವೋ ಅದನ್ನು ಸಹ ನಿನ್ನ ಪೂರ್ವಕೃತ ಸ್ವಾಭಾವಿಕ ಕರ್ಮದಿಂದ ಬಂಧಿಸಲ್ಪಟ್ಟು,ಪರವಶನಾಗಿ ಮಾಡುವೆ.
***
-ವಿಜಯಾ ಶೆಟ್ಟಿ ಸಾಲೆತ್ತೂರು (ಸಾರ ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್ ತಾಣ