ಗೀತ ಗಾಯನ ಮನಕೆ ಸಂಭ್ರಮ

ಗೀತ ಗಾಯನ ಮನಕೆ ಸಂಭ್ರಮ

ಕವನ

ಸಂಗೀತ ಬಾಳಿಗೆ ಹೊನಲ ಬಾಲೆ

ನವಚೈತನ್ಯ ಧಾರೆ ಮೇಘ ಮಾಲೆ

ಬಯಕೆ ಪುಟಿದೇಳುವ ಬಾಳ ಕಲೆ

ಹುಣ್ಣಿಮೆ ಚಂದಿರನ ಬೆಳದಿಂಗಳ ಮಾಲೆ

 

ಸೃಜನಶೀಲತೆ ಹೊಮ್ಮಿಸುವ ತನ್ನತನ 

ಗೀತ ಗಾಯನ ಮನಕೆ ಸಂಭ್ರಮ

ಭಾವಗಳ ಲಾಲಿತ್ಯ ಲಾಸ್ಯ ನರ್ತನ

ಹಸಿರು ತೋರಣ ತನದೊಳಗೆ ತಾನನ

 

ಸಪ್ತ ಸ್ವರಗಳ ತಾಳದಲಿ ಮೇಳ

ನಾದ ತರಂಗಗಳ ಚೆಲುವ ಕಾಲ

ಧಮನಿಯಲಿ ಹರಿಯುತಿದೆ ಮೋಹ

ಸುಪ್ತಮನ ವಯ್ಯಾರದಿ ಸೆಳೆವ ನೋಟ

 

ಹೊಂಬಿಸಿಲ ಕಿರಣ ಸ್ಪರ್ಶದಂತೆ

ಬಾನು ಬುವಿಯ ಸಂಬಂಧದಂತೆ

ಭೋರ್ಗರೆವ ಕಡಲಿಂದು ಬೆಳ್ನೊರೆಯಂತೆ

ಪುಷ್ಪದಲಿ ಹರಡುವ ಸವಿಯ ಘಮಲಿನಂತೆ

 

ಗಿಡಮರ ಬಳ್ಳಿಯಲಿ ಮಧು ತುಂಬಿದೆ 

ಹಕ್ಕಿಗಳ ಕಲರವದಿ ಮಾಧುರ್ಯ ಹೊಮ್ಮಿದೆ

ಬೀಸುವ ಗಾಳಿ ನವರಾಗ ಮೇಳೈಸಿದೆ

ಸಂಗೀತ ಸಾಮ್ರಾಜ್ಯ ಜಗದಗಲ ಹರಡಿದೆ

 

-ರತ್ನಾ ಕೆ ಭಟ್ ತಲಂಜೇರಿ, ಪುತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್