ಗುಜರಾತಿನಲ್ಲಿ ಹೆಪಟಿಟಿಸ್ ಹಾವಳಿ

ಗುಜರಾತಿನಲ್ಲಿ ಹೆಪಟಿಟಿಸ್ ಹಾವಳಿ

ಬರಹ

ಸೋಮವಾರದಿಂದ ನಿನ್ನೆಯವರೆಗೆ ಗುಜರಾತಿನ ಸಬರ್ಕಾಂತಾ ಜಿಲ್ಲೆಯ ಮೊದಾಸಾ ತಾಲೂಕಿನಲ್ಲಿ ಹೆಪಟಿಟಿಸ್ ವೈರಸ್ ಶಂಕೆಯಿಂದ ೨೫ ಸಾವುಗಳು ವರದಿಯಾಗಿವೆ. ಇದು ಹೆಪಟಿಟಿಸ್ ಬಿ ವೈರಸ್ಸೋ ಅಥವಾ ಡಿ ವೈರಸ್ ಎಂಬುದು ಇನ್ನೂ ಖಚಿತವಾಗಿ ನಿರ್ಧಾರವಾಗಿಲ್ಲ. ನ್ಯಾಷನಲಿ ಇನಸ್ಟಿಟ್ಯೂಟ್ ಆಫ್ ಕಮ್ಯುನಿಕೇಬಲ್ ಡಿಸೀಜಸ್ ನವರು ಇದು 'ಡಿ' ವೈರಸ್ ಇದೆಯೆಂದರೆ ನ್ಯಾಷನಲಿ ಇನಸ್ಟಿಟ್ಯೂಟ್ ಆಫ್ ವೈರಾಲಜಿ ಇಲ್ಲವೆನ್ನುತ್ತಿದೆ. ಈ ಹೆಪಟಿಟಿಸ್ ವೈರಸ್ ಭಾರತದಲ್ಲಿ ಪ್ರಥಮ ಬಾರಿಗೆ ತನ್ನ ಪ್ರಭಾವ ತೋರಿಸುತ್ತಿದೆ. ಹೆಪಟಿಟಿಸ್ ಡಿ ವೈರಸ್ ಅತಿ ವಿರಳವಾಗಿ ಕಂಡುಬರುತ್ತದೆ ಅಷ್ಟೇ ಅಲ್ಲದೇ ಇದಕ್ಕೆ ಯಾವ ಮದ್ದೂ ಇಲ್ಲ.

ಇದರ ಜೊತೆಗೆ ಸೂರತ್ ಜಿಲ್ಲೆಯ ಒಲ್ಪಾಡ್ ತಾಲೂಕಿನ ಮೂರು ಹಳ್ಳಿಗಳಲ್ಲಿ ಹೆಪಟಿಟಿಸ್ ಇ ವೈರಾಣುಗಳಿಂದ ೩೯ ಜನರು ಪೀಡಿತರಾಗಿರುವದು ವರದಿಯಾಗಿದೆ, ಇದು ಕಲುಷಿತ ನೀರಿನಿಂದ ಉಂಟಾಗಿದೆಯೆಂದು ತಿಳಿದು ಬಂದಿದೆ.

ಗುಜರಾತಿನ ಮುಖ್ಯಮಂತ್ರಿ ಮೋದಿ ಈ ವೈರಸ್ ಹಾವಳಿ ತಡೆಗಟ್ಟಲು ಯಾವ ಮೋಡಿ ಮಾಡುತ್ತಾರೋ ಎಂದು ಗುಜರಾತಿನ ಜನತೆ ಕಾತರದಿಂದ ಎದುರು ನೋಡುತ್ತಿದ್ದಾರೆ.