ಗುಟ್ಟು - ರಟ್ಟು!

ಗುಟ್ಟು - ರಟ್ಟು!

ಬರಹ

 

                ರಾಜಕಾರಣಿಗಳೆಲ್ಲಾ ನುಂಗಣ್ಣಗಳೇ; ತ್ಯಾಗಶೀಲ ಕರ್ಣರು ಇಲ್ಲವೇ ಇಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೂ ಯಾರ‍್ಯಾರು ಎಷ್ಟೆಷ್ಟು ನುಂಗಿರಬಹುದೆಂಬ ಕುತೂಹಲ ಇದ್ದೇ ಇತ್ತು. ಅರದಲ್ಲೂ ಲೋಕಾಯುಕ್ತ ಈ ವಿಚಾರಣೆಯಲ್ಲಿ ತೊಡಗಿಸಿಕೊಂಡ ರೀತಿ-ನೀತಿ ಮತ್ತು ತೆಗೆದುಕೊಂಡ ವಿಸ್ತಾರ ಕಾಲಾವಕಾಶ, ಜನತೆಯ ನಿರೀಕ್ಷೆಯನ್ನು ದಟ್ಟಗೊಳಿಸಿತ್ತು. ವರದಿಯ ರಾಜಕೀಯ ಸ್ಥಿತ್ಯಂತರಗಳೇನಾದರಾಗಲಿ, ಈ ವರದಿ ಅಧೀಕೃತವಾಗಿ ಸಲ್ಲಿಕೆಯಾಗುವ ಬಹಳಷ್ಟು ಮುಂಚಿತವಾಗೇ ಮಾಧ್ಯಮಗಳು ಇದರ ಎಳೆಗಳನ್ನು ಬಿಚ್ಚಿಟ್ಟು, ಅತ್ಯಂತ ಗೌರವಾನ್ವಿತ ದಾಖಲೆಯನ್ನು ಸಾರ್ವಜನಿಕರೆದುರು ಬತ್ತಲುಗೊಳಿಸಿದವಲ್ಲಾ?! ಅಂಥದಕ್ಕೆ ಅವಕಾವುಶ ಸಿಕ್ಕಿತಲ್ಲಾ?! ಇದು ನೈತಿಕವಾಗಿ ಎಷ್ಟು ಸಭ್ಯ?  

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet