ಗುಡಿಸಲ ಗುಣಕ್ಕೆ ಪರದೆಯೇ ಬಾಗಿಲು !

ಗುಡಿಸಲ ಗುಣಕ್ಕೆ ಪರದೆಯೇ ಬಾಗಿಲು !

ಕವನ

ಇರಲೊಂದು ಸೂರಿಲ್ಲ

ಸೋರುವ ಗುಡಿಸಲೇ ನೆರಳು

ಬೇಯಿಸಿ ತಿನ್ನಲು ಸೇರಕ್ಕಿ ಇಲ್ಲ

ಸಾರಂತು ನೀರಂತೆ ಎಲ್ಲ

 

ಕಲ್ಲು ಮಣ್ಣಿನ ಗೋಡೆಯೇ ಇಲ್ಲ

ಕಟ್ಟಿಗೆ ಬಿಟ್ಟರೆ ಬೇರೇನು ಇಲ್ಲ

ತಾಡಪಲ ಛಾವಣಿಯ ಹೊದಿಸಿದನಲ್ಲ

ಗುಡಿ ಗೋಪುರವೆ ಕಂಡಂತೆ ಎಲ್ಲ

 

ಒಳ ಹೊಕ್ಕು ನೋಡಿದರೆ 

ತಲೆ ಕುಕ್ಕುವದು ಸೂರೋಂದು

ಪಕ್ಕದಲ್ಲಂತು ಪುಸ್ತಕದ ಶಿಸ್ತಿನ ಸರಪಳಿ

ಅರಮನೆಗು ಮಿಗಿಲು ಪರದೆಯೇ ಬಾಗಿಲಿಲ್ಲಿ

 

ಶುದ್ಧ ಅಶುದ್ಧವಾಗಿಹವು ಅರಮನೆಯ ಕಲ್ಮನಗಳು

ಧನ ಕನಕಗಳಿದ್ದರು ಭೋಗಿಸಲಾಗದ ಕನಸುಗಳು ಅಲ್ಲಿ

ಗುಡಿಸಲ ಅಶುದ್ಧತೆಯೆದುರು ಶುದ್ಧತೆಯ ಹೊಳಪು ಇಲ್ಲಿ

ಸಿರಿ ಸಂಪತ್ತಿಗು ಮಿಗಿಲು ಇವರ ಪರಿಶುದ್ಧ ಕನಸುಗಳು 

-"ಕರಿ ಗೂಳಿ"

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್